ಆ್ಯಪ್ನಗರ

ಪಾಕಿಸ್ತಾನಿ ಹುಡುಗಿಯಾದ ಕನ್ನಡದ ಬೆಡಗಿ

ಕನ್ನಡದ ನಟಿ ನೇಹಾ ಶೆಟ್ಟಿ ಪಾಕಿಸ್ತಾನಿ ಬೆಡಗಿಯಾಗಿ ನಟಿಸಿದ್ದಾರೆ. ಪೂರಿ ಜಗನ್ನಾಥ್‌ ನಿರ್ದೇಶನದಲ್ಲಿ ತಯಾರಾಗಿರುವ ಮೆಹಬೂಬ್‌ ಚಿತ್ರದಲ್ಲಿ ಇವರು ಇಂಥದ್ದೊಂದು ಪಾತ್ರವನ್ನು ನಿರ್ವಹಿಸಿ ಅಚ್ಚರಿ ಮೂಡಿಸಿದ್ದಾರೆ.

Vijaya Karnataka 11 Apr 2018, 12:08 pm
ಕನ್ನಡದ ನಟಿ ನೇಹಾ ಶೆಟ್ಟಿ ಪಾಕಿಸ್ತಾನಿ ಬೆಡಗಿಯಾಗಿ ನಟಿಸಿದ್ದಾರೆ. ಪೂರಿ ಜಗನ್ನಾಥ್‌ ನಿರ್ದೇಶನದಲ್ಲಿ ತಯಾರಾಗಿರುವ ಮೆಹಬೂಬ್‌ ಚಿತ್ರದಲ್ಲಿ ಇವರು ಇಂಥದ್ದೊಂದು ಪಾತ್ರವನ್ನು ನಿರ್ವಹಿಸಿ ಅಚ್ಚರಿ ಮೂಡಿಸಿದ್ದಾರೆ. ಮುಂಗಾರು ಮಳೆ ಸಿನಿಮಾದ ನಂತರ ಇವರು, ಹೆಚ್ಚು ಸದ್ದು ಮಾಡಿರಲ್ಲಿಲ್ಲ. ಈಗ ಮತ್ತೆ ಸುದ್ದಿಗೆ ಸಿಕ್ಕಿದ್ದಾರೆ. ಮೆಹಬೂಬ್‌ ಸಿನಿಮಾದ ಟ್ರೇಲರ್‌ ಎರಡು ದಿನಗಳ ಹಿಂದೆಯಷ್ಟೇ ರಿಲೀಸ್‌ ಆಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಕೂಡ ಆಗಿದೆ.
Vijaya Karnataka Web neha-shetty


ಹಲವು ವಿಶೇಷತೆಗಳನ್ನು ಹೊತ್ತು ಬರುತ್ತಿದೆ ಈ ಚಿತ್ರ. ಈ ಸಿನಿಮಾದ ಮೂಲಕ ತಮ್ಮ ಮಗ ಆಕಾಶ್‌ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಪೂರಿ. ಕನ್ನಡದ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ನಿರ್ದೇಶಕರು, ಸ್ಯಾಂಡಲ್‌ವುಡ್‌ ಹುಡುಗಿ ನೇಹಾ ಶೆಟ್ಟಿ ಅವರನ್ನು ತೆಲುಗಿಗೆ ಪರಿಚಯಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ನಡೆಯುವ ರೋಚಕ ಪ್ರೇಮಕಥೆ ಸಿನಿಮಾದಲ್ಲಿದ್ದು, ನಾಯಕ ಭಾರತದ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌