ಆ್ಯಪ್ನಗರ

ಆಸ್ಪತ್ರೆಯಲ್ಲಿ ನರಳುತ್ತಿರುವ ನಟಿ ವಿಜಯಲಕ್ಷ್ಮೀ

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಕನ್ನಡ ಚಲನಚಿತ್ರ ನಿರ್ಮಾಪಕ ಸಂಘ ಮತ್ತು ನಿರ್ದೇಶಕರ ಸಂಘಗಳಿಗೆ ನಟಿ ವಿಜಯಲಕ್ಷ್ಮೀ ಅವರಿಗೆ ತಮ್ಮಿಂದಾದ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದೆ. ಈಗಾಗಲೇ ಈ ಮನವಿಗೆ ಕೆಲವು ನಿರ್ಮಾಪಕರು ಸ್ಪಂದಿಸಿ ವಿಜಯಲಕ್ಷ್ಮೀ ಅವರಿಗೆ ತಮ್ಮ ಕೈಲಾದ ನೆರವು ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.

Vijaya Karnataka Web 24 Feb 2019, 3:06 pm
ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದು ಕಾಲದಲ್ಲಿ ನಟಿಯಾಗಿ ಅರಳಿ ನಗುತ್ತಿದ್ದ ಸುಂದರ ಗುಲಾಬಿಯಂತಿದ್ದ ವಿಜಯಲಕ್ಷ್ಮೀ ಅವರು ಇಂದು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಡಾ. ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಪ್ರಕಾಶ್ ರೈ ಮುಂತಾದ ಸ್ಟಾರ್ ನಟರೊಂದಿಗೆ ನಟಿಸಿ ಪ್ರತಿಭಾವಂತೆ ಎಂದು ಹೆಸರು ಗಳಿಸಿದ್ದ ನಟಿ ವಿಜಯಲಕ್ಷ್ಮೀ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡಿದ್ದಾರೆ. ಭಾರೀ ಜ್ವರ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮೀ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web vijayalakshmi241


ಆದರೆ, ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿರುವ ವಿಜಯಲಕ್ಷ್ಮೀ ಅವರು ಟ್ರೀಟ್ಮೆಂಟ್ ಖರ್ಚು ಭರಿಸಲು ಹಣವಿಲ್ಲದೇ ಒದ್ದಾಡುತ್ತಿದ್ದಾರೆ. ಈ ವಿಷಯವನ್ನು ಅವರ ಸಹೋದರಿ ಉಷಾ ಅವರು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದು ಚಿತ್ರೋದ್ಯಮದ ಸಹಾಯ ಕೋರಿ ವಿನಂತಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ರೋರಿಂಗ್ ಸ್ಟಾರ್ ಮುರಳಿ ಅಭಿನಯದ 'ಮದಗಜ' ಚಿತ್ರತಂಡವು ವಿಜಯಲಕ್ಷ್ಮೀ ಅವರನ್ನು ಭೇಟಿಯಾಗಿ ಅವರ ಅನಾರೋಗ್ಯವನ್ನು ವಿಚಾರಿಸಿ ಅವರ ನೆರವಿಗೆ ನಿಂತಿದ್ದಾರೆ. ವಿಜಯಲಕ್ಷ್ಮೀ ಅವರು ಚೇತರಿಸಿಕೊಂಡ ಬಳಿಕ ತಮ್ಮದೇ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುವ ಅವಕಾಶವನ್ನು ಕೂಡ ಆಫರ್ ಮಾಡಿದ್ದಾರೆ.

ಈ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಕನ್ನಡ ಚಲನಚಿತ್ರ ನಿರ್ಮಾಪಕ ಸಂಘ ಮತ್ತು ನಿರ್ದೇಶಕರ ಸಂಘಗಳಿಗೆ ನಟಿ ವಿಜಯಲಕ್ಷ್ಮೀ ಅವರಿಗೆ ತಮ್ಮಿಂದಾದ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದೆ. ಈಗಾಗಲೇ ಈ ಮನವಿಗೆ ಕೆಲವು ನಿರ್ಮಾಪಕರು ಸ್ಪಂದಿಸಿ ವಿಜಯಲಕ್ಷ್ಮೀ ಅವರಿಗೆ ತಮ್ಮ ಕೈಲಾದ ನೆರವು ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.

ಒಟ್ಟನಲ್ಲಿ, ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದ ವಿಜಯಲಕ್ಷ್ಮೀ ಅವರು ನಂತರ ಕನ್ನಡ ಚಲನಚಿತ್ರರಂಗವನ್ನು ತೊರೆದು ತಮಿಳು ಚಿತ್ರೋದ್ಯಮದ ಕಡೆ ಮುಖ ಮಾಡಿದ್ದರು. ಆದರೆ, ಅಲ್ಲಿ ನೆಲೆ ಕಾಣಲಾಗದ ಈ ನಟಿ ನಂತರ ತಮಿಳು ಕಿರುತೆರೆಯತ್ತ ತಮ್ಮ ಗಮನ ಕೇಂದ್ರೀಕರಿಸಿದ್ದರು. ಆದರೆ ತಮಿಳು ಚಿತ್ರೋದ್ಯಮ ಹಾಗೂ ಕಿರುತೆರೆಗಳಲ್ಲಿ ಸಾಕಷ್ಟು ಶೋಷಣೆ ಅನುಭವಿಸಿದ್ದೇನೆಂದು ಹೇಳಿಕೊಂಡು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದರು ನಟಿ ವಿಜಯಲಕ್ಷ್ಮೀ. ಈ ಬೆಳವಣಿಗೆಯ ನಂತರ, ಕನ್ನಡ ಚಿತ್ರರಂಗ ತಮ್ಮ ಮನೆಮಗಳಿಗೆ ಮತ್ತೆ ನಟಿಸಲು ಅವಕಾಶ ಮಾಡಿಕೊಟ್ಟು ವಿಜಯಲಕ್ಷ್ಮೀ ಅವರಿಗೆ ಬೆಂಬಲವಾಗಿ ನಿಂತಿದೆ. ಆದರೆ, ಈಗ ಸ್ವತಃ ವಿಜಯಲಕ್ಷ್ಮೀ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಕೊಂಡಿರುವುದು ವಿಪರ್ಯಾಸವೇ ಸರಿ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌