ಆ್ಯಪ್ನಗರ

ಮತ್ತೆ ಶುರುವಾಯಿತು 'ಡಬ್ಬಿಂಗ್ ಬೇಕು' ಆಂದೋಲನ

ಸ್ಯಾಂಡಲ್‍ವುಡ್‌ನಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ನಿಷೇಧ ಹೇರಿರುವುದು ಗೊತ್ತಿರುವ ಸಂಗತಿ. ಡಬ್ಬಿಂಗ್ ಬೇಕು ಎಂಬ ಕೂತು ಒಂದೆಡೆ, ಇನ್ನೊಂದು ಕಡೆ ಡಬ್ಬಿಂಗ್ ಬೇಡ ಎಂಬ ವಾದ. ಈ ಹಗ್ಗಜಗ್ಗಾಟದಲ್ಲಿ ಒಂದೆರಡು ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಗಿದ್ದೂ ಆಯಿತು.

Vijaya Karnataka Web 31 May 2018, 3:23 pm
ಸ್ಯಾಂಡಲ್‍ವುಡ್‌ನಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ನಿಷೇಧ ಹೇರಿರುವುದು ಗೊತ್ತಿರುವ ಸಂಗತಿ. ಡಬ್ಬಿಂಗ್ ಬೇಕು ಎಂಬ ಕೂತು ಒಂದೆಡೆ, ಇನ್ನೊಂದು ಕಡೆ ಡಬ್ಬಿಂಗ್ ಬೇಡ ಎಂಬ ವಾದ. ಈ ಹಗ್ಗಜಗ್ಗಾಟದಲ್ಲಿ ಒಂದೆರಡು ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಗಿದ್ದೂ ಆಯಿತು.
Vijaya Karnataka Web satyadev-ips


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜತೆಗೆ ಈಗಾಗಲೇ ಕನ್ನಡ (ಡಬ್ಬಿಂಗ್‌) ಚಲನಚಿತ್ರ ವಾಣಿಜ್ಯ ಮಂಡಳಿ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಂತರ, ಕೊಪ್ಪಳದಲ್ಲೊಂದು ಹೊಸ ವಾಣಿಜ್ಯ ಮಂಡಳಿ ಸಹ ಶುರುವಾಗಿದೆ.

ಇಷ್ಟು ದಿನ ಡಬ್ಬಿಂಗ್ ಸಿನಿಮಾಗಳು ಬೇಕು ಎಂಬ ಕೂಗು ಸ್ವಲ್ಪ ತಣ್ಣಗಾಗಿತ್ತು. ಇದೀಗ ಮತ್ತೆ ಆರಂಭವಾಗಿದ್ದು, ಡಬ್ಬಿಂಗ್ ಯಾಕೆ ಬೇಕು ಎಂಬ ಬಗ್ಗೆ ಕನ್ನಡ ಗ್ರಾಹಕರ ಕೂಟ ಧ್ವನಿ ಎತ್ತಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಹೊಸ ಆಂದೋಲನ ಶುರು ಮಾಡಿದೆ.

ಡಬ್ಬಿಂಗ್ ಸಿನಿಮಾಗಳು ಯಾಕೆ ಬೇಕು ಎಂಬ ಬಗ್ಗೆ ಕನ್ನಡ ಗ್ರಾಹಕರ ಕೂಟ ಕೆಲವೊಂದು ಅಂಶಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಮುಖ್ಯವಾಗಿ, ಬೇರೆ ಭಾಷೆಯ ಚಿತ್ರಗಳನ್ನು ನನ್ನ ಭಾಷೆಯಲ್ಲಿ ನೋಡುವ ಹಕ್ಕು ನನಗೆ ಬೇಕು. ಮರಾಠಿ ರಂಗದ ದುಸ್ಥಿತಿಗೆ ಕಾರಣ ಹಿಂದಿಯನ್ನು ಅಪ್ಪಿಕೊಂಡಿದ್ದು. ಅತಿಹೆಚ್ಚು ಡಬ್ಬಿಂಗ್ ಮಾಡುವ ತೆಲುಗು ಚಿತ್ರೋದ್ಯಮ ನೂರು ಕೋಟಿ ಸಿನಿಮಾ ಮಾಡಿ ಗೆಲ್ಲುತ್ತಿದೆ. ಚಿಕ್ಕ ರಾಜ್ಯ ಕೇರಳ ಕೂಡ ಡಬ್ಬಿಂಗ್ ನಿಷೇಧ ಹೇರಿಲ್ಲ. ಡಬ್ಬಿಂಗ್ ಬೇಡ ಅನ್ನುವವರ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿವೆ. #DubbingBeku ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ಟ್ವಿಟರ್‌ನಲ್ಲಿ ಹೊಸ ಆಂದೋಲನ ಶುರುವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌