ಆ್ಯಪ್ನಗರ

ಬಹು ಅಂಗಾಂಗ ವೈಫಲ್ಯದಿಂದ ನಿರ್ದೇಶಕ ನಂಜುಂಡ ನಿಧನ

ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಕುಟುಂಬದವರಿಗೆ ತಿಳಿಸಿದ್ದಾರೆ. ಅವರಿಗೆ ಪತ್ನಿ, ಪುತ್ರಿ ಇದ್ದಾರೆ. 'ಮನಸಲೂ ನೀನೇ ಕನಸಲೂ ನೀನೇ' (1998), 'ಮೆಲೋಡಿ' ಸಿನಿಮಾಗಳನ್ನು ನಿರ್ದೇಶಿಸಿದ್ದ ಇವರು ಸಿನಿಮಾ ಮತ್ತು ಸಂಭಾಷಣೆ ಬರಹಗಾರರಾಗಿ ಹೆಸರು ಮಾಡಿದ್ದರು.

Vijaya Karnataka 24 Apr 2019, 12:50 pm
ಖ್ಯಾತ ಸಿನಿಮಾ ಬರಹಗಾರ ಮತ್ತು ನಿರ್ದೇಶಕ ನಂಜುಂಡ ಕೃಷ್ಣ (52) ಮಂಗಳವಾರ ನಿಧನರಾಗಿದ್ದಾರೆ. ಡಯಾಬಿಟಿಸ್‌ನಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಪಾಶ್ರ್ವವಾಯುಗೆ ತುತ್ತಾಗಿದ್ದರು. ಹದಿನೈದು ದಿನಗಳ ಹಿಂದೆ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದರು.
Vijaya Karnataka Web nanjunda

ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಕುಟುಂಬದವರಿಗೆ ತಿಳಿಸಿದ್ದಾರೆ. ಅವರಿಗೆ ಪತ್ನಿ, ಪುತ್ರಿ ಇದ್ದಾರೆ. 'ಮನಸಲೂ ನೀನೇ ಕನಸಲೂ ನೀನೇ' (1998), 'ಮೆಲೋಡಿ' ಸಿನಿಮಾಗಳನ್ನು ನಿರ್ದೇಶಿಸಿದ್ದ ಇವರು ಸಿನಿಮಾ ಮತ್ತು ಸಂಭಾಷಣೆ ಬರಹಗಾರರಾಗಿ ಹೆಸರು ಮಾಡಿದ್ದರು.

ಮನಸಲೂ ನೀನೇ ಕನಸಲೂ ನೀನೇ ಚಿತ್ರದಲ್ಲಿ ಪ್ರಕಾಶ್ ರೈ ನಾಯಕ ನಟನಾಗಿದ್ದರೆ, ಮೆಲೋಡಿ ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಹೀರೋ. ಚಿತ್ರಕಥೆ, ಸಂಭಾಷಣೆಕಾರರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದ್ದಾರೆ.

ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ನಂಜುಂಡ ಅಗಲಿದ್ದಾರೆ. ನಟ ಪ್ರಕಾಶ್ ರೈ ಅವರ ಜತೆ ಒಡನಾಟ ಹೊಂದಿರುವ ಕೆ ನಂಜುಂಡ ತಮ್ಮ ವೃತ್ತಿ ಬದುಕನ್ನು ಸಂಭಾಷಣೆಕಾರರಾಗಿ ಅರಂಭಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌