ಆ್ಯಪ್ನಗರ

ಚುನಾವಣೆ ಹೊತ್ತಿನಲ್ಲಿ ಪೊಲಿಟಿಕಲ್‌ ಕಥೆ ಹೇಳುವ ಧ್ವಜ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚುತ್ತಿರುವ ಈ ಹೊತ್ತಿನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ರಾಜಕೀಯ ಬಿಸಿ ಏ ರುತ್ತಿದೆ. ಪ್ರಿಯಾಮಣಿ ಮತ್ತು ರವಿ ಕಾಂಬಿನೇಷನ್‌ನ 'ಧ್ವಜ' ಚಿತ್ರದಲ್ಲಿ ರಾಜಕೀಯ ಮೇಲಾಟಗಳನ್ನು ತೋರಿಸಿದ್ದಾರೆ ನಿರ್ದೇಶಕರು.

Vijaya Karnataka 26 Apr 2018, 5:00 am
*ಶರಣು ಹುಲ್ಲೂರು
Vijaya Karnataka Web dhwaja


ಚುನಾವಣೆಯ ಹೊತ್ತಿನಲ್ಲಿ ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾವೊಂದು ಕನ್ನಡದಲ್ಲಿ ರಿಲೀಸ್‌ಗೆ ಸಿದ್ಧವಾಗಿದೆ. ಪ್ರಿಯಾಮಣಿ ಮತ್ತು ರವಿ ಮುಖ್ಯ ಭೂಮಿಕೆಯ ಚಿತ್ರ ಇದಾಗಿದ್ದು, ಖ್ಯಾತ ಸಿನಿಮಾಟೋಗ್ರಾಫರ್‌ ಅಶೋಕ್‌ ಕಶ್ಯಪ್‌ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ 'ಧ್ವಜ' ಎಂದು ಹೆಸರಿಡಲಾಗಿದ್ದು, ರಾಜಕೀಯದ ಜತೆ ಲವ್‌ ಸ್ಟೋರಿ ಕೂಡ ಕಥೆಯಲ್ಲಿದೆ.

ಸಿನಿಮಾದ ಕಥೆಯೇ ವಿಭಿನ್ನವಾಗಿದೆ. ಪಕ್ಷ ವೊಂದರ ಕಾರ್ಯಕರ್ತನ ಕೊಲೆಯ ಸುತ್ತ ಹೆಣೆದಿರುವ ಕಥೆಯಲ್ಲಿ ಈಗಿನ ರಾಜಕೀಯ ಪಟ್ಟುಗಳು ಮತ್ತು ಪ್ರೇಮಿಗಳಿಬ್ಬರ ಕಥೆಯನ್ನು ಹೇಳಿದ್ದಾರಂತೆ ನಿರ್ದೇಶಕರು. ಹಾಗಾಗಿ ಚಿತ್ರದ ಸ್ಟೋರಿಯೇ ಪ್ರೇಕ್ಷಕರಿಗೆ ಥ್ರಿಲ್‌ ನೀಡಲಿದೆ ಎಂಬುದು ಅವರ ನಂಬಿಕೆಯಾಗಿದೆ.

ಈ ಚಿತ್ರದ ಮೂಲಕ ರವಿ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಈವರೆಗೂ ಉಪೇಂದ್ರ ಬಳಿ ಕೆಲಸ ಮಾಡಿದ್ದರು ಇವರು. ಮೊದಲ ಬಾರಿಗೆ ಹೀರೋ ಆಗಿ ತೆರೆಯ ಮೇಲೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಟಫ್‌ ಆಗಿರುವ ಪಾತ್ರವಾದರೆ, ಮತ್ತೊಂದು ಕಾಲೇಜು ಉಪನ್ಯಾಸಕನದ್ದು. ಇವರೊಂದಿಗೆ ಪ್ರಿಯಾಮಣಿ ನಾಯಕಿ. ರಮ್ಯಾ ಎಂಬ ಹೆಸರಿನ ಪಾತ್ರ ಮಾಡಿದ್ದಾರೆ ಅವರು.

'ನಟನಾಗಿ ಸಿನಿಮಾ ರಂಗಕ್ಕೆ ನಾನು ಹೊಸಬ. ನನ್ನಂಥ ಹೊಸಬನ ಜತೆ ಪ್ರಿಯಾಮಣಿ ಒಪ್ಪಿಕೊಂಡು ಚಿತ್ರ ಮಾಡಿದ್ದಾರೆ. ಹಾಗಾಗಿ ನಾನು ಅವರಿಗೆ ಕೃತಜ್ಞತೆ ಹೇಳುತ್ತೇನೆ. ಇದೊಂದು ಪೊಲಿಟಿಕಲ್‌ ಥ್ರಿಲ್ಲರ್‌ ಚಿತ್ರವಾಗಿದ್ದರೂ, ನಮ್ಮ ಸುತ್ತಲಿನ ಅನೇಕ ಘಟನೆಗಳು ನಮಗೆ ಕಾಣುತ್ತವೆ. ಸದ್ಯ ನಾವೆಲ್ಲರೂ ಚುನಾವಣೆಯನ್ನು ಎದುರುಗೊಂಡಿದ್ದೇವೆ. ವಾಸ್ತವದಲ್ಲಿ ಏನೆಲ್ಲ ಘಟನೆಗಳು ನಡೆಯುತ್ತಿವೆಯೋ ಸಿನಿಮಾದಲ್ಲಿ ಅವೆಲ್ಲವೂ ಇವೆ. ಆದಷ್ಟು ನೈಜ ಎನ್ನುವಂತೆ ನಿರ್ದೇಶಕರು ದೃಶ್ಯಗಳನ್ನು ಹೆಣೆದಿದ್ದಾರೆ' ಅಂತಾರೆ ರವಿ.
ರವಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ದ್ವಿಪಾತ್ರವನ್ನು ಅವರು ಮಾಡಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಅಷ್ಟೊಂದು ಚೆನ್ನಾಗಿ ಅಭಿನಯಿಸಿ, ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದ್ದಾರೆ.
ಪ್ರಿಯಾಮಣಿ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌