ಆ್ಯಪ್ನಗರ

ಡಬ್ಬಿಂಗ್‌ ಪರ ಹೋರಾಟಕ್ಕೆ ಧುಮುಕಿದ ಕರವೇ

ಕನ್ನಡ ಭಾಷೆಯ ಉಳಿವಿಗೆ ಡಬ್ಬಿಂಗ್‌ ಬೇಕು ಎಂದು ನಡೆಯುತ್ತಿರುವ ಹೋರಾಟಕ್ಕೆ ಈಗ ಕರ್ನಾಟಕ ರಕ್ಷಣಾ ವೇದಿಕೆ ಸಹ ಧುಮುಕಿದೆ.

Vijaya Karnataka 23 Nov 2018, 9:48 am
ಕನ್ನಡ ಭಾಷೆಯ ಉಳಿವಿಗೆ ಡಬ್ಬಿಂಗ್‌ ಬೇಕು ಎಂಬ ಹೋರಾಟಕ್ಕೆ ಈಗ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣವೂ ಕೈ ಜೋಡಿಸಿದ್ದು, ಇದೇ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಡಬ್ಬಿಂಗ್‌ ಹಕ್ಕೋತ್ತಾಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ.
Vijaya Karnataka Web karave


ಬನವಾಸಿ ಬಳಗ ನಡೆಸುತ್ತಿರುವ ಈ ಹೋರಾಟದಲ್ಲಿ, ಕರುನಾಡ ಸೇವಕರು, ಕರುನಾಡ ಯೋಧರು, ನವನಿರ್ಮಾಣ ಸೇನೆ ಸೇರಿ ಅನೇಕ ಸಂಘಟನೆಗಳು ಪಾಲ್ಗೊಳ್ಳಲುತ್ತಿವೆ. ಈ ಬಗ್ಗೆ ಲವಲವಿಕೆ ಜತೆ ಮಾತನಾಡಿದ ಬನವಾಸಿ ಬಳಗದ ಆನಂದ್‌, 'ನಾವು ಕನ್ನಡದ ಉಳಿವಿಗಾಗಿ ಈ ಹೋರಾಟ ಮಾಡುತ್ತಿದ್ದೇವೆ. ಕನ್ನಡಕ್ಕೆ ಡಬ್ಬಿಂಗ್‌ ಆಗಿರುವ ಸಿನಿಮಾಗಳನ್ನು ಪ್ರದರ್ಶನ ಮಾಡದೇ ತೆಲುಗು, ತಮಿಳು ಸೇರಿ ಇತರೆ ಭಾಷೆಯ ಸಿನಿಮಾಗಳನ್ನು ಅದೇ ಭಾಷೆಯಲ್ಲಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವ ವಿತರಕರ ವಿರುದ್ಧ ಮತ್ತು ಸಾಕಷ್ಟು ಒಳ್ಳೆ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್‌ ಮಾಡಿ ಪ್ರಸಾರ ಮಾಡದೇ ಇರುವ ಟಿವಿ ವಾಹಿನಿಗಳ ವಿರುದ್ಧ ಹೋರಾಟ ಮಾಡುತ್ತೇವೆ. ಕರವೇ ಕೂಡ ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ' ಎನ್ನುತ್ತಾರೆ ಆನಂದ್‌.

ಈಗಾಗಲೇ ಓದುಗೌಡರ್‌ ನೇತೃತ್ವದ ಪ್ರದರ್ಶಕರ ಸಂಘ ಸಾಕಷ್ಟು ಚಿತ್ರಮಂದಿರಗಳಲ್ಲಿ ಡಬ್ಬಿಂಗ್‌ ಸಿನಿಮಾವನ್ನು ಹಾಕಲು ನಮಗೆ ತೊಂದರೆ ಇಲ್ಲ ಎಂದು ಪತ್ರ ನೀಡಿದ್ದಾರೆ. ಆದರೆ ವಿತರಕರ ಸಮಸ್ಯೆಯಿಂದ ಕನ್ನಡದಲ್ಲಿ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ . ಇದರ ವಿರುದ್ಧವೂ ನಾವು ಭಾನುವಾರ ಮಾತನಾಡಲಿದ್ದೇವೆ. ಈಗಾಗಲೇ ಬಿಡುಗಡೆಯಾಗಿರುವ ಡಬ್ಬಿಂಗ್‌ ಸಿನಿಮಾಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ವಿತರಕರು ಡಬ್ಬಿಂಗ್‌ ಸಿನಿಮಾಗಳಿಗೆ ಅನುವು ಮಾಡಿಕೊಡಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದು ಹೇಳುತ್ತಾರವರು.

ಭಾನುವಾರ ಸಾಕಷ್ಟು ಸಂಘಟನೆಗಳು ನಮ್ಮ ಜತೆ ಕೈಜೋಡಿಸಿವೆ. ನಮ್ಮದೇ ಮಾತೃಭಾಷೆಯಲ್ಲಿ ಕಾರ್ಯಕ್ರಮಗಳು ಮತ್ತು ಸಿನಿಮಾಗಳನ್ನು ನೋಡಬೇಕು ಎನ್ನುವುದು ನಮ್ಮ ಹೋರಾಟದ ಮೂಲ ಉದ್ದೇಶ.
ಆನಂದ್‌, ಬನವಾಸಿ ಬಳಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌