ಆ್ಯಪ್ನಗರ

ಸೀತಾರಾಮ ಕಲ್ಯಾಣದ ಫಸ್ಟ್ ರಿವ್ಯೂ ಬೈ ಸಿದ್ದರಾಮಯ್ಯ!

ಬೆಂಗಳೂರಿನಲ್ಲಿ ಗಣ್ಯರಿಗೆ 'ಸೀತಾರಾಮ ಕಲ್ಯಾಣ' ಚಿತ್ರದ 'ಸ್ಪೆಷಲ್ ಶೋ' ಆಯೋಜಿಸಲಾಗಿತ್ತು. ಅಲ್ಲಿ ಹೆಚ್ಚು ಗಮನ ಸೆಳೆದವರು ನಿದ್ದೆ ಮಾಡುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ 'ಸಿದ್ದರಾಮಯ್ಯ'.

Vijaya Karnataka Web 25 Jan 2019, 3:56 pm
'ಸೀತಾರಾಮ ಕಲ್ಯಾಣ' ಚಿತ್ರವು ಇಂದು, 'ಜನವರಿ 25'ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಈಗಷ್ಟೇ ಈ ಚಿತ್ರದ ವಿಮರ್ಶೆ ಕೂಡ ಬಂದಾಗಿದೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾರಣ, 'ಸೀತಾರಾಮ ಕಲ್ಯಾಣ'ದ ಸ್ಪೆಷಲ್ ಶೋ ನಲ್ಲಿ ಸಿದ್ದರಾಮಯ್ಯ ನಿದ್ದೆ ಮಾಡುತ್ತಿರುವುದು. ಈಗ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟೇ ಇಲ್ಲ, ಸಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ಭಾರೀ 'ಟ್ರೋಲ್' ಆಗುತ್ತಿದೆ.
Vijaya Karnataka Web Siddaramayya


ಆಗಿದ್ದಿಷ್ಟು. ನಿನ್ನೆ ರಾತ್ರಿ, ಬೆಂಗಳೂರಿನಲ್ಲಿ ಗಣ್ಯರಿಗೆ 'ಸೀತಾರಾಮ ಕಲ್ಯಾಣ' ಚಿತ್ರದ 'ಸ್ಪೆಷಲ್ ಶೋ' ಆಯೋಜಿಸಲಾಗಿತ್ತು. ಅಲ್ಲಿ ಸಹಜ ಎನ್ನುವಂತೆ ಹೆಚ್ಚಾಗಿ ರಾಜಕಾರಣಿಗಳೇ ತುಂಬಿಕೊಂಡಿದ್ದರು. ಅವರೆಲ್ಲರ ಮಧ್ಯೆ ಹೆಚ್ಚು ಗಮನ ಸೆಳೆದವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ 'ಸಿದ್ದರಾಮಯ್ಯ'. ಈ ಮೊದಲೂ ಕೂಡ ಯಾವುದೇ ಸಭೆ, ಸಮಾರಂಭಗಳಲ್ಲಿ ಸಿದ್ದರಾಮಯ್ಯ ಅವರು ನಿದ್ದೆ ಮಾಡುತ್ತಿರುವ ಫೋಟೋಗಳು ಬಹಳಷ್ಟು ಬಾರಿ ಟ್ರೋಲ್ ಆಗಿದ್ದವು. ಈಗ 'ಸೀತಾರಾಮ ಕಲ್ಯಾಣ' ಸ್ಪೆಷಲ್ ಶೋ ಸರದಿ.

ಅದಿಷ್ಟೇ ಆಗಿದ್ದರೆ ಪರವಾಗಿಲ್ಲ. 'ಸೀತಾರಾಮ ಕಲ್ಯಾಣ' ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ಇನ್ನೂ ಸಿನಿಮಾ ವಿಮರ್ಶೆ ಹೊರಗೆ ಬಂದಿರಲಿಲ್ಲ. ಅಷ್ಟರಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ "ಸೀತಾರಾಮ ಕಲ್ಯಾಣದ ರೀವ್ಯೂ ಆಗತ್ಯವಿಲ್ಲ. ಸಿದ್ದರಾಮಯ್ಯ ಅವರು ನಿದ್ದೆ ಮಾಡುತ್ತಿರುವ ಫೋಟೋ ನೋಡಿದರೆ ಸಾಕು, ಅದೇನೆಂಬುದು ಅರ್ಥವಾಗುತ್ತದೆ" ಎಂಬ ಸಾಲುಗಳನ್ನು ಫೋಸ್ಟ್ ಮಾಡಲಾಗಿದೆ. ಈ ಚಿತ್ರದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಟ್ರೋಲ್‌ಗೆ ಗುರಿಯಾಗುತ್ತಿರುವುದು ಸಿದ್ದರಾಮಯ್ಯನವರ ನಿದ್ದೆ ಎಂಬುದು ಸೋಜಿಗವಾದರೂ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌