ಆ್ಯಪ್ನಗರ

ಕರಾವಳಿಗರನ್ನು ಬೆಳಕಿಗೆ ತಂದ ಕಾಶೀನಾಥ್‌

ಮರೆಯಾದ ಹಿರಿಯ ಚಿತ್ರ ನಿರ್ದೇಶಕ ಕಾಶೀನಾಥ್‌ ಕರಾವಳಿ ಮೂಲದವರಾಗಿ ಇಲ್ಲಿನ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದರು.

Vijaya Karnataka 19 Jan 2018, 11:25 am

ಮೂಲತಃ ಕುಂದಾಪುರದ ಕೋಟೇಶ್ವರದವರಾದ ಕಾಶೀನಾಥ್‌ ಕರಾವಳಿಯ ಹಲವು ಪ್ರತಿಭೆಗಳನ್ನು ಬೆಳೆಸಿದರು ಎನ್ನುವುದು ವಿಶೇಷ. ಕಾಶೀನಾಥ್‌ ಗರಡಿಯಲ್ಲಿ ನಟನಾಗಿ ಬೆಳೆದು, ನಿರ್ದೇಶಕನಾಗಿ ರಾಜ್ಯವ್ಯಾಪಿ ಹೆಸರು ಗಳಿಸಿದ ಉಪೇಂದ್ರ ಕೂಡ ಕುಂದಾಪುರ ಮೂಲದವರು. ಉಪೇಂದ್ರ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಮೂಡಲು ಕಾರಣರಾದರು ಕಾಶೀನಾಥ್‌.

Vijaya Karnataka Web entertainment/gossip/kashinath
ಕರಾವಳಿಗರನ್ನು ಬೆಳಕಿಗೆ ತಂದ ಕಾಶೀನಾಥ್‌


ಸಿನಿಮಾ ನಿರ್ದೇಶನ ಹಾಗೂ ಚಿತ್ರ ಸಂಗೀತ ಕ್ಷೇತ್ರದಲ್ಲಿ ಮಹಾನ್‌ ಸಾಧನೆಗೈದ ವಿ. ಮನೋಹರ್‌ ಕೂಡ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಇವರಿಗೂ ಕಾಶಿನಾಥ್‌ ಚಿತ್ರರಂಗದಲ್ಲಿ ದೊಡ್ಡ ಮಟ್ಟಿನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮನೋಹರ್‌ ಅವರನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು, ಅವರಿಗೆ ಆಸರೆ ಕೊಟ್ಟು ಮುನ್ನಡೆಸಿದ ಹೆಚ್ಚುಗಾರಿಕೆ ಅವರದು. ಇದಲ್ಲದೆ ಕುಂದಾಪುರದ ಕಲಾವಿದ ಓಂಗಣೇಶ್‌ ಅವರನ್ನೂ ಬೆಂಗಳೂರಿಗೆ ಕರೆದೊಯ್ದು ನಟನಾಗಿಸಿದವರು ಕಾಶೀನಾಥ್‌.

ಕಾಶೀನಾಥ್‌ ಅವರಿಗೆ ತಮ್ಮ ಹುಟ್ಟೂರು, ಭಾಷೆಯ ಬಗ್ಗೆ ಇದ್ದ ಅಭಿಮಾನ ಅವರ ಚಿತ್ರಗಳಲ್ಲೂ ಪ್ರತಿಬಿಂಬಿತವಾಗುತ್ತಿತ್ತು. ತಮ್ಮ ಚಿತ್ರದ ಒಂದು ಭಾಗದ ಶೂಟಿಂಗ್‌ ಅನ್ನು ಕರಾವಳಿಯಲ್ಲೇ ನಡೆಸುತ್ತಿದ್ದರು. ಇದಲ್ಲದೆ ಅವರ ಚಿತ್ರಗಳಲ್ಲೂ ದಕ್ಷಿಣ ಕನ್ನಡದ ಅಪ್ಪಟ ಮಂಗಳೂರು ಭಾಷೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಸುತ್ತಿದ್ದರು.

ನಾನಾ ಕಾರ್ಯಕ್ರಮಗಳಿಗೆ ಮಂಗಳೂರಿಗೆ ಆಗಮಿಸಿದ ಸಂದರ್ಭ ಕಾಶಿನಾಥ್‌ ಕರಾವಳಿಯ ಕಲಾವಿದರನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದರು. ಕರಾವಳಿಗರ ಕಠಿಣ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಉಪೇಂದ್ರ, ವಿ. ಮನೋಹರ್‌, ಗುರುಕಿರಣ್‌ ಮುಂತಾದವರ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಕಾಶೀನಾಥರ ಕರಾವಳಿ ಅಭಿಮಾನ ಕೊನೆತನಕ ಅವರ ಜತೆಗಿದ್ದೇ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌