ಆ್ಯಪ್ನಗರ

ನಿರ್ಮಾಣದತ್ತು ಕಾವ್ಯಾ ಶಾ ಒಲವು

ನಟಿ ಕಾವ್ಯಾ ಶಾ ಈಗ ಫುಲ್‌ ಬಿಝಿ. ನಟನೆಯ ಜತೆ ನಿರ್ಮಾಣ ಮತ್ತು ನಿರ್ದೇಶನದತ್ತಲೂ ಒಲವು ತೋರಿಸುತ್ತಿರುವ ನಟಿ ಹೊಸ ಕನ್ನಡ ಚಿತ್ರಕ್ಕೆ ಸಹಿ ಮಾಡಿದ್ದಾರೆ.

Vijaya Karnataka 24 Nov 2017, 4:00 am

ನಟಿ ಕಾವ್ಯಾ ಶಾ ಈಗ ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಯಶ್‌ ಅಭಿನಯದ ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ ಚಿತ್ರದಲ್ಲಿ ನಟಿಸಿದ್ದ ಕಾವ್ಯಾ ಶಾ ಈಗ ಹೊಸ ಕನ್ನಡ ಸಿನಿಮಾಗೆ ಸಹಿ ಮಾಡಿದ್ದು, ಫುಲ್‌ ಖುಷಿಯಾಗಿದ್ದಾರೆ. ಇದರ ನಡುವೆಯೇ ಸ್ವಂತ ಪ್ರೊಡಕ್ಷನ್‌ ಹೌಸ್‌ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ ಕೂಡ.

ಇನ್ನೂ ಹೆಸರಿಡದ ಕನ್ನಡ ಸಿನಿಮಾದಲ್ಲಿ ಈ ಚಿತ್ರಕ್ಕೆ ಶಿವತೇಜಸ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. 'ಸಿನಿಮಾದಲ್ಲಿ ಮೂರು ಜೋಡಿಗಳಿವೆ. ನಾನು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದೇನೆ. ಇವತ್ತಿನ ಯುವ ಪೀಳಿಗೆಗೆ ಸಂಬಂಧಿಸಿದ ಕತೆ ಸಿನಿಮಾದಲ್ಲಿದೆ. ಸೋಷಿಯಲ್‌ ಮೀಡಿಯಾ ಮತಲ್ತು ಮೊಬೈಲ್‌ ಫೋನ್‌ ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ' ಎಂದಿದ್ದಾರೆ.

ಈಗ ತಮಿಳಿನಲ್ಲಿ ಜಾರುಗಾಂಡಿ ಚಿತ್ರದ ಶೂಟಿಂಗ್‌ನಲ್ಲಿ ಕಾವ್ಯಾ ಬಿಝಿ. 'ರಾಜ ರಾಣಿ ' ಚಿತ್ರದ ಖ್ಯಾತಿಯ ಜೈ ಜತೆ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಚಿತ್ರದಲ್ಲಿ ಸೆಕೆಂಡ್‌ ಲೀಡ್‌ ಕ್ಯಾರೆಕ್ಟರ್‌ ನನ್ನದಾದರೂ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ನನ್ನ ಪಾತ್ರದಿಂದ ಚಿತ್ರದ ಕತೆಗೆ ಟರ್ನ್‌ ಸಿಗುತ್ತದೆ' ಎಂದಿದ್ದಾರೆ. ಇದಲ್ಲದೆ ಇನ್ನೊಂದು ತಮಿಳು ಚಿತ್ರಕ್ಕೂ ಸಹಿ ಮಾಡಿದ್ದಾರೆ. ಆಸೈ ನೂರುವಾಗೈ ಎಂಬ ಹೆಸರಿನ ಚಿತ್ರದಲ್ಲಿ ನಟಿಸಲಿದ್ದಾರೆ.

ನಿರ್ದೇಶಕಿಯಾಗುವ ಕನಸು ಹೊತ್ತ ನಟಿ ಕಾವ್ಯಾ ಶಾ ಅದಕ್ಕಗಿ ಎಲ್ಲಾ ಸಿದ್ಥತೆ ಮಾಡುತ್ತಿರುವುದಾಗಿ ಹೇಳಿದ್ದಾರೆ. 'ನನಗೆ ನಿರ್ದೇಶನದಲ್ಲಿ ತುಂಬಾ ಆಸಕ್ತಿ ಇದೆ. ಖಂಡಿತ ಮುಂದೊಂದು ದಿನ ಚಿತ್ರ ನಿರ್ದೇಶಕಿ ಆಗ್ತೀನಿ' ಎಂದಿದ್ದಾರೆ.

'ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿಯೇ ತೀರುತ್ತೇನೆ. ನಿರ್ದೇಶನ ಮಾಡಲೂ ಈಗಾಗಲೇ ಪ್ಲಾನ್‌ ಮಾಡುತ್ತಿದ್ದೇನೆ.'

-ಕಾವ್ಯಾ ಶಾ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌