ನಟ ಯಶ್ಗೆ ಈಗ ದೇಶಾದ್ಯಂತ ಹೆಸರಿದೆ. 2018ರಲ್ಲಿ ತೆರೆಕಂಡ 'ಕೆಜಿಎಫ್ 1' ಸಿನಿಮಾ ಅವರಿಗೆ ಅಷ್ಟೊಂದು ಖ್ಯಾತಿಯನ್ನು ತಂದುಕೊಟ್ಟಿದೆ. ಈಗ ಅವರ 'ಕೆಜಿಎಫ್ ಚಾಪ್ಟರ್ 2' ಬಗ್ಗೆ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು ಇರಬಹುದು ಎಂಬ ಕುತೂಹಲ ಕೂಡ ಇದ್ದೇ ಇದೆ. ಅಂದಹಾಗೆ, ಯಶ್ ಬೇರೆ ಭಾಷೆಯ ಸಿನಿಮಾ ಮಾಡ್ತಾರಾ? ಬಾಲಿವುಡ್ಗೆ ಎಂಟ್ರಿ ಕೊಡ್ತಾರಾ ಅನ್ನೋ ಮಾತುಗಳು ಕೂಡ ಆಗಾಗ ಕೇಳಿಬಂದಿದ್ದುಂಟು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, 2019ರಲ್ಲೇ ಯಶ್ಗೆ ಬಾಲಿವುಡ್ ಸಿನಿಮಾವೊಂದಕ್ಕೆ ಆಫರ್ ಮಾಡಲಾಗಿತ್ತಂತೆ. ಆದರೆ, ಅಂದು ಯಶ್ ಆ ಸಿನಿಮಾ ಒಪ್ಪಿಕೊಳ್ಳದೇ ಒಳ್ಳೆಯ ಕೆಲಸವನ್ನೇ ಮಾಡಿದ್ದರು! ಪಿರಿಯಾಡಿಕಲ್ ಸಿನಿಮಾಕ್ಕೆ ಬಂದಿತ್ತು ಆಫರ್
ನವದೀಪ್ ಸಿಂಗ್ ನಿರ್ದೇಶನದ, ಆನಂದ್ ಎಲ್ ರಾಯ್ ನಿರ್ಮಾಣದ 'ಲಾಲ್ ಕಪ್ತಾನ್' ಸಿನಿಮಾಗೆ ಮೊದಲು ಯಶ್ರನ್ನು ಹೀರೋ ಆಗಿಸಲು ಚಿತ್ರತಂಡ ಪ್ರಯತ್ನ ಮಾಡಿತ್ತು. ಆದರೆ, ಆ ಸಿನಿಮಾವನ್ನು ಯಶ್ ಒಪ್ಪಿಕೊಂಡಿರಲಿಲ್ಲ. ಕಾರಣ? ಗೊತ್ತಿಲ್ಲ! ನಂತರ ಆ ಸಿನಿಮಾವನ್ನು ಮಾಡಿದ್ದು ಸೈಫ್ ಅಲಿ ಖಾನ್! ಪಿರಿಯಾಡಿಕಲ್ ಕಥೆ ಹೊಂದಿದ್ದ 'ಲಾಲ್ ಕಪ್ತಾನ್' ಸಿನಿಮಾವು ಅದ್ದೂರಿಯಾಗಿ ನಿರ್ಮಾಣವಾಗಿತ್ತು. ಕ್ರಿ.ಶ. 1700ರ ಕಾಲಘಟ್ಟದಲ್ಲಿ ಸಿನಿಮಾದ ಕಥೆ ಇತ್ತು. ಆದರೆ, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಂದುಕೊಂಡ ಮಟ್ಟಕ್ಕೆ ಹೆಸರು ಮಾಡಲಿಲ್ಲ. 30ರಿಂದ 40 ಕೋಟಿ ರೂ. ಬಜೆಟ್ನಲ್ಲಿ ಸಿದ್ಧಗೊಂಡಿದ್ದ ಈ ಸಿನಿಮಾ ಗಳಿಕೆಯಲ್ಲಿ ಎರಡಂಕಿಯನ್ನೂ ದಾಟಲಿಲ್ಲ. ನಿರ್ಮಾಪಕರಿಗೆ ದೊಡ್ಡ ನಷ್ಟವನ್ನು ಉಂಟು ಮಾಡಿತು. ಅಂದಹಾಗೆ, ಈ ಸಿನಿಮಾ 2019ರ ಅಕ್ಟೋಬರ್ 18ರಂದು ತೆರೆಕಂಡಿತ್ತು.
ಆಗತಾನೇ 'ಕೆಜಿಎಫ್'ನಂತರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ಯಶ್, ದೇಶಾದ್ಯಂತ ಹೆಸರು ಮಾಡಿದ್ದರು. ಒಂದುವೇಳೆ ಈ ಸಿನಿಮಾವನ್ನು ಒಪ್ಪಿಕೊಂಡು ನಟಿಸಿದ್ದರೆ, ದೊಡ್ಡ ಹಿನ್ನಡೆ ಆಗುತ್ತಿತ್ತು. ಆದರೆ, ಯಶ್ ಮಾಡದೇ, ಸೈಫ್ ಅದನ್ನು ಮಾಡಿ ದೊಡ್ಡ ಸೋಲು ಕಂಡರು.
ನಟ ಯಶ್-ರಾಧಿಕಾ ಪಂಡಿತ್, ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ!
ಸದ್ಯ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋದು ಈ ಕ್ಷಣದವರೆಗೂ ಬಹಿರಂಗವಾಗಿಲ್ಲ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆದ ನಂತರವೇ ಅವರು ಮುಂದಿನ ಸಿನಿಮಾಗೆ ಚಾಲನೆ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಮೂಲಗಳ ಪ್ರಕಾರ, 'ಮಫ್ತಿ' ಖ್ಯಾತಿಯ ನರ್ತನ್ ಅವರು ಯಶ್ ಮುಂದಿನ ಸಿನಿಮಾಕ್ಕಾಗಿ ಸ್ಕ್ರಿಪ್ಟ್ ಬರೆಯುವಲ್ಲಿ ಮಗ್ನರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿರುವ ಆ ಸಿನಿಮಾವನ್ನು ಯಶ್ ಅವರೇ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂಬುದು ಒಂದು ಮೂಲದ ಮಾಹಿತಿ ಆಗಿದೆ.
Raksha Bandhan: 'ರಾಕಿ ಭಾಯ್' ಯಶ್ ಮನೆಯಲ್ಲಿ 'ರಾಖಿ' ಹಬ್ಬದ ಸಂಭ್ರಮ; ಇಲ್ಲಿವೆ ನೋಡಿ ಫೋಟೋಗಳು