ಆ್ಯಪ್ನಗರ

'ಕೆಜಿಎಫ್: ಚಾಪ್ಟರ್ 2' ಆಗಲೇ ಶೇ.15ರಷ್ಟು ಚಿತ್ರೀಕರಣ ಖತಂ

ಕೆಜಿಎಫ್ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸಲ್ಲಿ ಬಿರುಗಾಳಿ ಎಬ್ಬಿಸಿದ್ದು ಗೊತ್ತೇ ಇದೆ. ಇದೀಗ ಚಾಪ್ಟರ್ 2 ಕ್ಕೆ ಸಿದ್ಧವಾಗುತ್ತಿದೆ ಚಿತ್ರತಂಡ. ಇದೇ ಬೇಸಿಗೆಯಿಂದ ಚಿತ್ರೀಕರಣ ಆರಂಭವಾಗಲಿದೆ. ಮೊದಲ ಭಾಗದಲ್ಲಿದ್ದ ತಾಂತ್ರಿಕ ಬಳಗ ಇಲ್ಲೂ ಮುಂದುವರೆಯಲಿದೆ. ವಿಶೇಷ ಎಂದರೆ ಚಾಪ್ಟರ್ 2ರ ಶೇ.15ರಷ್ಟು ಚಿತ್ರೀಕರಣ ಚಾಪ್ಟರ್ 1ರ ವೇಳೆಯಲ್ಲೇ ಚಿತ್ರೀಕರಿಸಿಕೊಂಡಿರುವುದು.

Vijaya Karnataka Web 3 Jan 2019, 4:10 pm
ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್: ಚಾಪ್ಟರ್ 1' ಸಿನಿಮಾ ಮಾಡಿದ ಮೋಡಿ ಗೊತ್ತೇ ಇದೆ. ಈ ಸಿನಿಮಾ ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಒಂದೇ ವಾರದಲ್ಲಿ ಸೆಂಚುರಿ ಕ್ಲಬ್ ಸೇರಿದೆ. ಬೇರೆ ಭಾಷೆಗಳಲ್ಲೂ ಗಳಿಕೆಯ ಗ್ರಾಫ್ ಏರಿಕೆ ಕಂಡುಬಂದಿದೆ.
Vijaya Karnataka Web kgf


ಇದೀಗ ಕೆಜಿಎಫ್: ಚಾಪ್ಟರ್ 2 ಸಿನಿಮಾಗೆ ರೆಡಿಯಾಗಿದ್ದಾರೆ ಪ್ರಶಾಂತ್ ನೀಲ್. ಇದೇ ಬೇಸಿಗೆಯಿಂದ ಚಾಪ್ಟರ್ 2ರ ಚಿತ್ರೀಕರಣ ಆರಂಭವಾಗಲಿದ್ದು ಬಹುಶಃ ಈ ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭಕ್ಕೆ ತೆರೆಗೆ ಬರುವ ಸಾಧ್ಯತೆಗಳಿವೆ. [KGF ಕೊನೆಯ ಶೋ ಮೂಲಕ ಆಟ ಮುಗಿಸಿದ 'ರೆಕ್ಸ್' ಚಿತ್ರಮಂದಿರ]

ಕೆಜಿಎಫ್ ಚಾಪ್ಟರ್ 1ಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರು ಚಾಪ್ಟರ್ 2ರಲ್ಲೂ ಕಾರ್ಯನಿರ್ವಹಿಸಲಿದ್ದಾರೆ. ಸಂಗೀತ ರವಿ ಬಸ್ರೂರು, ಛಾಯಾಗ್ರಹಣ ಭುವನ್ ಗೌಡ, ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ. ವಿಶೇಷ ಎಂದರೆ ಚಾಪ್ಟರ್ 1ರ ಚಿತ್ರೀಕರಣ ಸಂದರ್ಭದಲ್ಲೇ 'ಚಾಪ್ಟರ್ 2'ರ ಶೇ.15ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಉಳಿದ ಭಾಗವನ್ನು ಬೇಸಿಗೆಯಿಂದ ಆರಂಭಿಸಲಿದ್ದಾರೆ ಎಂದಿವೆ ಮೂಲಗಳು.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಚಿತ್ರದ ಪಾತ್ರವರ್ಗದಲ್ಲಿ ಅಚ್ಯುತ ಕುಮಾರ್, ನಾಸರ್, ಮಾಳವಿಕಾ ಅವಿನಾಶ್, ಅನಂತ್ ನಾಗ್, ವಸಿಷ್ಠ ಎನ್ ಸಿಂಹ ಸೇರಿದಂತೆ ಹಲವರಿದ್ದಾರೆ. ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ. ಐದು ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ತಮಿಳಿನಲ್ಲಿ ವಿಶಾಲ್ ಫಿಲಂ ಫ್ಯಾಕ್ಟರಿ, ಮಲಯಾಳಂನಲ್ಲಿ ಗ್ಲೋಬಲ್ ಯುನೈಟೆಡ್ ಮೀಡಿಯಾ, ತೆಲುಗಿನಲ್ಲಿ ವಾರಾಹಿ ಚಲನಚಿತ್ರಂ, ಹಿಂದಿಯಲ್ಲಿ ಎಕ್ಸೆಲ್ ಎಂಟರ್‌ಟೇನ್‍ಮೆಂಟ್ ವಿತರಣೆ ಮಾಡಿದೆ.

ಕೇವಲ ರಾಜ್ಯ, ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಹವಾ ಎಬ್ಬಿಸಿರುವ ಸಿನಿಮಾ ಇದು. ಯುಎಸ್‌ನಲ್ಲಿ ಎಲ್ಲಾ ಭಾಷೆಗಳ ಸಿನಿಮಾದ ಗಳಿಕೆ ಐದು ಲಕ್ಷ ಡಾಲರ್ ದಾಟಿದೆ ಎನ್ನುತ್ತವೆ ಮೂಲಗಳು. ಈಗ ಚಾಪ್ಟರ್ 2 ಬಗ್ಗೆಯೂ ಅದೇ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌