ಆ್ಯಪ್ನಗರ

ಪೈಲ್ವಾನ್‌ ಪತಿಗೆ ಸಾಥ್‌ ನೀಡಿದ ಪ್ರಿಯಾ ಸುದೀಪ್‌

ಕಿಚ್ಚ ಸುದೀಪ್‌ ನಟನೆಯ 'ಪೈಲ್ವಾನ್‌' ಸಿನಿಮಾದ ಟೀಸರ್‌ ಸಂಕ್ರಾಂತಿ ದಿನದಂದು ರಿಲೀಸ್‌ ಆಗಿದೆ...

Vijaya Karnataka 16 Jan 2019, 5:00 am
ಕಿಚ್ಚ ಸುದೀಪ್‌ ನಟನೆಯ 'ಪೈಲ್ವಾನ್‌' ಸಿನಿಮಾದ ಟೀಸರ್‌ ಸಂಕ್ರಾಂತಿ ದಿನದಂದು ರಿಲೀಸ್‌ ಆಗಿದೆ. ಈ ಟೀಸರ್‌ ಅನ್ನು ಸುದೀಪ್‌ ಪತ್ನಿ ಪ್ರಿಯಾ ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದ್ದು, ಪತಿಯ ಜತೆ ಪೈಲ್ವಾನ್‌ ರೀತಿಯಲ್ಲಿ ಪೋಸ್‌ ನೀಡಿ ಅಭಿಮಾನಿಗಳಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸಿದ್ದಾರೆ.
Vijaya Karnataka Web priya sudeep


ಹೌದು, ಪೈಲ್ವಾನ್‌ ಟೀಸರ್‌ ರಿಲೀಸ್‌ಗೂ ಮುನ್ನ ಸುದೀಪ್‌ ಅವರಿಗೆ ಸಾಥ್‌ ನೀಡಿರುವ ಪ್ರಿಯಾ, ಪತಿ ಪೈಲ್ವಾನ್‌ ಜತೆ ಆತ್ಮೀಯ ಅನಿಸುವಂಥ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ.

ನಾನಾ ಕಾರಣಗಳಿಂದಾಗಿ ಪೈಲ್ವಾನ್‌ ಸಿನಿಮಾ ಸಖತ್‌ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದೆ. ಮೊದಲ ಬಾರಿಗೆ ಸುದೀಪ್‌ ಈ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೀಡೆಯನ್ನು ಆಧರಿಸಿದ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಬಹುದಿನಗಳ ಕನಸನ್ನು, ನನಸು ಮಾಡಿರುವ ಸಿನಿಮಾವಿದು. ಅಲ್ಲದೇ ಮೊದಲ ಬಾರಿಗೆ ಜಿಮ್‌ಗೆ ಹೋಗಿ ಬಾಡಿಬಿಲ್ಡ್‌ ಮಾಡಿದ್ದಾರೆ.

ಈಗಾಗಲೇ ಎರಡು ಪೋಸ್ಟರ್‌ಗಳು ರಿಲೀಸ್‌ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಟೀಸರ್‌ ಬಗ್ಗೆಯೂ ಅಂಥದ್ದೊಂದು ನಿರೀಕ್ಷೆಯಿತ್ತು.
ಕೃಷ್ಣ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌