ಆ್ಯಪ್ನಗರ

Sudeep Pailwan Teaser: ಸಂಕ್ರಾಂತಿಯಂದು ಕಿಚ್ಚು ಹೆಚ್ಚಿಸಿದ ಕಿಚ್ಚ ಸುದೀಪ್‌ ಪೈಲ್ವಾನ್‌ ಟೀಸರ್‌

ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾದ ಸುದೀಪ್‌ ಅವರ ಪೈಲ್ವಾನ್‌ ಚಿತ್ರದ ಟೀಸರ್‌ ಸಾಕಷ್ಟು ಕ್ರೇಜ್‌ ಮೂಡಿಸಿದೆ. ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಪೈಲ್ವಾನ್‌ ಚಿತ್ರದಲ್ಲಿ ಸುದೀಪ್‌ ದೇಹ ದಂಡಿಸಿರುವುದು ಸ್ಪಷ್ಟವಾಗಿದೆ.

Vijaya Karnataka Web 15 Jan 2019, 9:01 pm
ಕಿಚ್ಚ ಸುದೀಪ್‌ ಅಭಿನಯದ ಭಾರಿ ನಿರೀಕ್ಷೆ ಮೂಡಿಸಿರುವ ಪೈಲ್ವಾನ್‌ ಚಿತ್ರದ ಮೊದಲ ಅಧಿಕೃತ ಟೀಸರ್‌ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿದೆ. ಸುದೀಪ್ ಅಭಿನಯದ ಪೈಲ್ವಾನ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾಲಿವುಡ್‌ ದಿಗ್ಗಜರು ಯೂಟ್ಯೂಬ್‌ನಲ್ಲಿ ಟೀಸರ್ ನೋಡಿ ಸುದೀಪ್‌ಗೆ ಅಭಿನಂದನೆ ಸಲ್ಲಿಸಿದ್ದು, ಚಿತ್ರ ಶೀಘ್ರ ಬಿಡುಗಡೆಯಾಗಲಿ ಎಂದು ಶುಭಹಾರೈಸಿದಿದ್ದಾರೆ.
Vijaya Karnataka Web ಪೈಲ್ವಾನ್ ಸುದೀಪ್‌
ಪೈಲ್ವಾನ್ ಸುದೀಪ್‌


ಸಂಕ್ರಾಂತಿ ಹಬ್ಬದಂದೇ ಕಿಚ್ಚನ ಪೈಲ್ವಾನ್‌ ಕಿಚ್ಚು ಹೆಚ್ಚಿಸಿದೆ.

ಪೈಲ್ವಾನ್‌ ಚಿತ್ರಕ್ಕಾಗಿ ಸಾಕಷ್ಟು ದೈಹಿಕ ಕಸರತ್ತು ಮಾಡಿದ್ದ ಸುದೀಪ್‌ ಮಿಂಚಿದ್ದಾರೆ.

ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾದ ಸುದೀಪ್‌ ಅವರ ಪೈಲ್ವಾನ್‌ ಚಿತ್ರದ ಟೀಸರ್‌ ಸಾಕಷ್ಟು ಕ್ರೇಜ್‌ ಮೂಡಿಸಿದೆ.

ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಪೈಲ್ವಾನ್‌ ಚಿತ್ರದಲ್ಲಿ ಸುದೀಪ್‌ ದೇಹ ದಂಡಿಸಿರುವುದು ಸ್ಪಷ್ಟವಾಗಿದೆ.

'ಮುಂಗಾರು ಮಳೆ' ಖ್ಯಾತಿಯ ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, 'ಹೆಬ್ಬುಲಿ' ನಂತರ ಕೃಷ್ಣ ಮತ್ತು ಕಿಚ್ಚ ಮತ್ತೆ ಒಂದಾಗಿದ್ದಾರೆ. ಕುಸ್ತಿಪಟು ಪಾತ್ರದಲ್ಲಿ ಮಿಂಚಿದ್ದಾರೆ ಸುದೀಪ್‌.

ಪೈಲ್ವಾನ್ ಟೀಸರ್ ನೋಡಿ ಮೆಚ್ಚಿದ ಬಾಲಿವುಡ್ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟೀಸರ್ ನೋಡಿದ ಬಾಲಿವುಡ್‌ ದಿಗ್ಗಜರು ಸುದೀಪ್‌ಗೆ ಶುಭಹಾರೈಸಿದ್ದಾರೆ. ಸುದೀಪ್ ಅಭಿನಯ ಅದ್ಭುತ, ಚಿತ್ರಕ್ಕಾಗಿ ಸುದೀಪ್ ಬಹಳ ಶ್ರಮಪಟ್ಟಿದ್ದಾರೆ ಎಂದು ಬಾಲಿವುಡ್‌ನ ಖ್ಯಾತರಾದ ಸಲ್ಮಾನ್ ಖಾನ್, ಸುನೀಲ್ ಶೆಟ್ಟಿ, ರಿತೇಶ್ ದೇಶ್‌ಮುಖ್ ಮತ್ತು ರಾಮ್ ಕಿಶನ್ ಸಹಿತ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌