ಆ್ಯಪ್ನಗರ

ದಶಕಗಳ ನಂತರ ಮರವೇರಿದ 'ಹೆಬ್ಬುಲಿ'!

ಜೀವನದಲ್ಲಿ ಕೆಲವೊಮ್ಮೆ ಚಿಕ್ಕ-ಪುಟ್ಟ ಸಂಗತಿಗಳೇ ಹೆಚ್ಚು ಖುಷಿ ನೀಡುತ್ತವೆ. ಈ ಮಾತಿಗೆ ತಾಜಾ ಉದಾಹರಣೆ ಎಂದರೆ ಕಿಚ್ಚ ಸುದೀಪ್‌.

ವಿಕ ಸುದ್ದಿಲೋಕ 18 Jul 2017, 2:37 pm
ಜೀವನದಲ್ಲಿ ಕೆಲವೊಮ್ಮೆ ಚಿಕ್ಕ-ಪುಟ್ಟ ಸಂಗತಿಗಳೇ ಹೆಚ್ಚು ಖುಷಿ ನೀಡುತ್ತವೆ. ಈ ಮಾತಿಗೆ ತಾಜಾ ಉದಾಹರಣೆ ಎಂದರೆ ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌.
Vijaya Karnataka Web kichcha sudeep climbed tree
ದಶಕಗಳ ನಂತರ ಮರವೇರಿದ 'ಹೆಬ್ಬುಲಿ'!


ಸುಮಾರು ವರ್ಷಗಳ ನಂತರ ಮರ ಹತ್ತಿದ ಖುಷಿಯಲ್ಲಿ ತೇಲುತ್ತಿದ್ದಾರೆ ಸುದೀಪ್‌. ಅಷ್ಟೇ ಅಲ್ಲ, ಮರದ ಮೇಲೆ ಒಂದು ಕಪ್‌ ಚಹಾ ಕುಡಿದ ಸಂತಸವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಕೊನೆಗೂ ದಶಕಗಳ ನಂತರ ಮರ ಹತ್ತುವ ಅವಕಾಶ ಸಿಕ್ಕಿತು. ಹಾಗಂತ ಅದು ದೊಡ್ಡ ಮರವಲ್ಲ. ಒಂದು ಸುಂದರ ಮರ, ಅದರ ಮೇಲೆ ಕುಳಿತು ಚಹಾ ಆಸ್ವಾದಿಸಿದ ಅನುಭವ ಸಖತ್‌ ಖುಷಿ ನೀಡಿತು' ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

Finally got a chance yday to climb a tree(not a huge one though) aftr decades. A cute tree,a cup of tea on top,Small things,,huge happiness. pic.twitter.com/MNopZKdvjW — Kichcha Sudeepa (@KicchaSudeep) 18 July 2017 ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಪೈಕಿ ಕಿಚ್ಚ ಸುದೀಪ್‌ ಟ್ವಿಟರ್‌ನಲ್ಲಿ ತುಂಬ ಕ್ರಿಯಾಶೀಲರಾಗಿರುತ್ತಾರೆ. ಅಷ್ಟೇ ಅಲ್ಲದೆ, ಕಿಚ್ಚ ಸುದೀಪ್‌ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ 8 ಲಕ್ಷ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಸದ್ಯಕ್ಕೆ ಪ್ರೇಮ್‌ ನಿರ್ದೇಶನದ 'ದಿ ವಿಲನ್‌' ಚಿತ್ರದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ ಸುದೀಪ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌