ಆ್ಯಪ್ನಗರ

ಕನ್ನಡದಲ್ಲೂ ಬರಲಿದೆ 'ಕುಂಟಿಬೈಲ್‌ ಕುಂಟಮ್ಮ'

ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ಬೇರೆ ಬೇರೆ ಕಲಾವಿದರಿಂದ ಎರಡು ಭಾಷೆಗಳಿಗಾಗಿ ಚಿತ್ರೀಕರಣ ನಡೆಯಲಿದೆ. ಕುಂಟಿಬೈಲ್‌, ಮೂಡ ಸಹಿತ ಉಡುಪಿಯ ಸುಸತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ನಿರ್ಧರಿಸಿದೆ.

Vijaya Karnataka 8 Feb 2019, 8:22 pm
ಭಕ್ತಿ ಪ್ರಧಾನ ಚಿತ್ರಗಳನ್ನು ಮಾಡಿರುವ ನಿರ್ದೇಶಕ ಗಂಗಾಧರ ಕಿರೋಡಿಯನ್‌ ಅವರ ನಿರ್ದೇಶನದಲ್ಲಿ ಕುಂಟಿಬೈಲ್‌ ಕುಂಟಮ್ಮ ಎಂಬ ಕನ್ನಡ ಮತ್ತು ತುಳು ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಹೆಸರು ಕೊಂಚ ಹಾಸ್ಯ ಎಂಬಂತೆ ಕಂಡುಬಂದರೂ, ಇದೊಂದು ಕೃಷಿ ಆಧಾರಿತ ಕಥೆಯುಳ್ಳ ಸಿನಿಮಾವಾಗಿದೆ. ಎಕರೆ ಕೃಷಿ ಭೂಮಿಯಲ್ಲಿ ಕೈಗಾರಿಕೆ ನಿರ್ಮಾಣಕ್ಕಾಗಿ ಬರುವ ವಿದೇಶಿ ಕಂಪೆನಿಯಿಂದ ಕಾಪಾಡಿಕೊಳ್ಳುವಲ್ಲಿ ಹೋರಾಡುವ ದಿಟ್ಟ ಮಹಿಳೆಯ ಕಥೆ ಹಂದರವನ್ನು ಕುಂಟಿಬೈಲ್‌ ಕುಂಟಮ್ಮ ಹೊಂದಿದೆ.
Vijaya Karnataka Web kuntibail-kuntamma


ಓಂ ಕ್ರಿಯೇಷನ್ಸ್‌ ಬ್ಯಾನರ್‌ ನಡಿಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರವು ಶೀಘ್ರದಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಕನ್ನಡ ಮತ್ತು ತುಳು ಭಾಷೆಯಲ್ಲಿ ಬೇರೆ ಬೇರೆ ಕಲಾವಿದರು ನಟಿಸಲಿದ್ದಾರೆ. ಇದು ಅಪ್ಪಟ ಮಂಗಳೂರು ಕನ್ನಡದಲ್ಲಿ ಮತ್ತು ತುಳುವಿನಲ್ಲಿ ಏಕಕಾಲಕ್ಕೆ ಸಿದ್ದವಾಗಲಿದೆ. ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ಬೇರೆ ಬೇರೆ ಕಲಾವಿದರಿಂದ ಎರಡು ಭಾಷೆಗಳಿಗಾಗಿ ಚಿತ್ರೀಕರಣ ನಡೆಯಲಿದೆ. ಕುಂಟಿಬೈಲ್‌, ಮೂಡ ಸಹಿತ ಉಡುಪಿಯ ಸುಸತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ನಿರ್ಧರಿಸಿದೆ.

ಧರ್ಮ ಇತ್ತಿ ಮಣ್ಣ್‌ , ಕಾರ್ಣಿಕದ ಕೋರ್ದಬ್ಬು, ನೇಮದ ಬೂಳ್ಯ, ಪುಂಡಿಪಣವು, ಕಾರ್ಣಿಕದ ಕಲ್ಲುರ್ಟಿಯಂತಹ ಚಾರಿತ್ರಿಕ ಹಿನ್ನೆಲೆಯ ಧಾರಾವಾಹಿ ಮತ್ತು ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಬಿ.ಕೆ. ಗಂಗಾಧರ್‌ ಕಿರೋಡಿಯನ್‌ ಅವರು ಇದೀಗ ಕುಂಟಿಬೈಲ್‌ ಕುಂಟಮ್ಮ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌