ಆ್ಯಪ್ನಗರ

ಮಲಯಾಳಂ ನಟಿಯರ ಭದ್ರತೆಗಾಗಿ ಲೇಡಿ ಬ್ಲ್ಯಾಕ್ ಕ್ಯಾಟ್ಸ್

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ನಡೆದ ನಟಿಯೊಬ್ಬರ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲ ಇದೀಗ ಆ ಮಾಲಿವುಡ್ ಎಚ್ಚೆತ್ತುಕೊಂಡಿದೆ.

Vijaya Karnataka Web 28 Nov 2017, 6:29 pm
ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ನಡೆದ ನಟಿಯೊಬ್ಬರ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲ ಇದೀಗ ಆ ಮಾಲಿವುಡ್ ಎಚ್ಚೆತ್ತುಕೊಂಡಿದೆ. ಚಿತ್ರರಂಗದಲ್ಲಿನ ಮಹಿಳೆಯರಿಗೆ ರಕ್ಷಣೆ ನೀಡಲು ಲೇಡಿ ಬ್ಲ್ಯಾಕ್ ಕ್ಯಾಟ್ಸ್ ಎಂಬ ವಿಶೇಷ ಭದ್ರತಾ ಸಿಬ್ಬಂದಿಯನ್ನು ಪರಿಚಯಿಸುತ್ತಿದೆ.
Vijaya Karnataka Web lady black cats to assure women safety in cinema
ಮಲಯಾಳಂ ನಟಿಯರ ಭದ್ರತೆಗಾಗಿ ಲೇಡಿ ಬ್ಲ್ಯಾಕ್ ಕ್ಯಾಟ್ಸ್


ಚಿತ್ರೀಕರಣ ಸಲುವಾಗಿ ಬೇರೆಬೇರೆ ಪ್ರದೇಶಗಳಿಗೆ ಹೋಗುವ ನಟಿಯರಿಗೆ ರಕ್ಷಣೆ ನೀಡಲು, ಅವರಿಗೆ ಭದ್ರತೆ ಒದಗಿಸಲು ಈ ಲೇಡಿ ಬ್ಲ್ಯಾಕ್ ಕ್ಯಾಟ್‌ಗಳು ನೆರವಿಗೆ ಬರುತ್ತಾರೆ. ಕರಾಟೆ, ಕೇರಳದ ಸಾಂಪ್ರದಾಯಿಕ ಕಲೆ ಕಳರಿಪಯಟ್ಟುವಿನಲ್ಲಿ ಸಾಮಾನ್ಯ ತಿಳುವಳಿಕೆ ಇರುವವರನ್ನು ಲೇಡಿ ಬ್ಲಾಕ್ ಕ್ಯಾಟ್‌ಗಳ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವರಿಗೆ ವಾಹನ ಚಾಲನೆ ಸಹ ಗೊತ್ತಿರಬೇಕು.

ಈ ರೀತಿಯ ಒಂದು ಆಲೋಚನೆಯನ್ನು ಮಲಯಾಳಂ ಚಿತ್ರರಂಗದ ತಂತ್ರಜ್ಞರ ಸಂಘ (ಎಂಎಸಿಟಿಎ) ಹಾಗೂ ಫೈಟರ್ಸ್ ಸಂಘ ಹುಟ್ಟುಹಾಕಿದೆ. ಎಂಎಸಿಟಿಎ ಮುಖ್ಯ ಕಾರ್ಯದರ್ಶಿ ಬೈಜು ಕೊಟ್ಟಾರಕರ ಈ ಬಗ್ಗೆ ವಿವರ ನೀಡಿದ್ದಾರೆ. ಆಯ್ಕೆಯಾದ ಲೇಡಿ ಬ್ಲಾಕ್ ಕ್ಯಾಟ್‌ಗಳಿಗೆ ಆರು ತಿಂಗಳ ಕಾಲ ಫೈಟರ್ಸ್ ಸಂಘ ತರಬೇತಿ ನೀಡಲಿದೆ. ಇವರಿಗಾಗಿ ವಿಶೇಷ ಯೂನಿಫಾರಂ ಸಹ ನಿಗಪಡಿಸಲಾಗುತ್ತದೆ ಎಂದಿದ್ದಾರೆ ಬೈಜು.

ಕೃಪೆ: ಮಲಯಾಳಂ ಸಮಯಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌