ಆ್ಯಪ್ನಗರ

ಗಿಫ್ಟ್‌ ಬಾಕ್ಸ್‌ನಲ್ಲಿದೆ ಲಾಕ್ಡ್‌ ಇನ್‌ ಸಿಂಡ್ರೋಮ್‌

ಪಲ್ಲಟ ಸಿನಿಮಾ ಮೂಲಕ ಗಮನ ಸೆಳೆದಿದ್ದ ರಘು ಎಸ್‌ ಪಿ ಈಗ ಗಿಫ್ಟ್‌ ಬಾಕ್ಸ್‌ ಎಂಬ ವಿಶಿಷ್ಟ ಶೈಲಿಯ ಸಿನಿಮಾ ಮಾಡುತ್ತಿದ್ದಾರೆ...

Vijaya Karnataka 1 Feb 2019, 9:32 am
ಪಲ್ಲಟ ಸಿನಿಮಾದಲ್ಲಿ ಹಳ್ಳಿಯಲ್ಲಿ ನಿರ್ಲಕ್ಷಕ್ಕೊಳಗಾದವರ ಬಗ್ಗೆ ಹೇಳಿದ್ದ ನಿರ್ದೇಶಕ ರಘು ಈ ಬಾರಿ ಲಾಕ್ಡ್‌ ಇನ್‌ ಸಿಂಡ್ರೋಮ್‌ ಎಂಬ ಖಾಯಿಲೆಯ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಇದರ ಜತೆಯಲ್ಲಿ ಮಾನವ ಸಾಗಾಣಿಕೆಯ ಕಥೆಯೂ ಇದೆಯಂತೆ.
Vijaya Karnataka Web locked in syndrome


ಕೊನೆಯ ಹಂತದ ಚಿತ್ರೀಕರಣದಲ್ಲಿರುವ ರಘು, ಕೆಲ ದಿನಗಳ ಹಿಂದೆ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ್ದರು. ಆ ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಜನ ಈ ಪೋಸ್ಟರ್‌ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ' ನಾನು ಈಗ ಬಿಡುಗಡೆ ಮಾಡಿರುವ ಫೋಸ್ಟರ್‌ನ್ನು ನೋಡಿ ನನಗೆ ಸಾಕಷ್ಟು ಮಂದಿ ಫೋನ್‌ ಮಾಡಿ ಮಾತನಾಡಿದ್ದಾರೆ. ಒಂದು ಸಿನಿಮಾ ಚಿತ್ರೀಕರಣದ ಹಂತದಲ್ಲಿಯೇ ಇಷ್ಟೊಂದು ಸದ್ದು ಮಾಡುತ್ತಿರುವುದು ನನಗೆ ಖುಷಿಯಿದೆ. ಈಗ ಬಿಡುಗಡೆಯಾಗಿರುವ ಪೋಸ್ಟರ್‌ ಮಾತನಾಡುತ್ತಿದೆ. ಪೋಸ್ಟರ್‌ನಲ್ಲಿರುವ ನಟಿ ದೀಪ್ತಿ ಮೋಹನ್‌ ಆ ಪಾತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಕನಿಷ್ಠ 6 ಗಂಟೆಗಳು ಮೇಕಪ್‌ಗಾಗಿ ಸಮಯ ಕೊಟ್ಟಿದ್ದಾರೆ,'ಎನ್ನುತ್ತಾರೆ ನಿರ್ದೇಶಕ ರಘು.

'ಗಿಫ್ಟ್‌ ಬಾಕ್ಸ್‌ ಸಿನಿಮಾದಲ್ಲಿ ಲಾಕ್ಡ್‌ ಇನ್‌ ಸಿಂಡ್ರೋಮ್‌ ಎಂಬ ಖಾಯಿಲೆ ಜತೆಗೆ ಮಾನವ ಕಳ್ಳ ಸಾಗಣಿಕೆ ಕಥೆಯನ್ನು ಹೇಳಲಾಗಿದೆ. ಸಾಮಾನ್ಯವಾಗಿ ಮಾನವ ಕಳ್ಳ ಸಾಗಾಣಿಕೆ ಅಂದಾಕ್ಷಣ ವೈಶ್ಯಾವಟಿಕೆ ಎಂದುಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅದಿಲ್ಲ. ಇನ್ನು ಲಾಕ್ಡ್‌ ಇನ್‌ ಸಿಂಡ್ರೋಮ್‌ ಎಂದರೆ ಸಾಮಾನ್ಯವಾಗಿ ಅಪಘಾತವಾದಾಗ ಬರುವ ಕಾಯಿಲೆ. ಇದರಿಂದ ಮನುಷ್ಯನ ಮೆದುಳು ಆ್ಯಕ್ಟಿವ್‌ ಆಗಿರುತ್ತದೆ.ಆದರೆ ದೇಹ ಮಾತ್ರ ಚಲನೆಯಲ್ಲಿರುವುದಿಲ್ಲ. ಇದೆಲ್ಲವೂ ಸಿನಿಮಾದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ.,'ಎನ್ನುತ್ತಾರವರು.

ದೀಪ್ತೀ ಮೋಹನ್‌, ಅಮಿತಾ ಕುಲಾಲ್‌, ರೇಣುಕ್‌, ಮುರುಳಿ ಗುಂಡಣ್ಣ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ಗೆ ಬೇರೆ ತರಹದ ಸಿನಿಮಾ ಇದಾಗುವುದರಲ್ಲಿ ಅನುಮಾನವಿಲ್ಲ.

ಲಾಕ್ಡ್‌ ಇನ್‌ ಸಿಂಡ್ರೋಮ್‌ ಮತ್ತು ಹ್ಯೂಮನ್‌ ಟ್ರಾಪಿಕಿಂಗ್‌ ಎರಡು ಸೇರಿ ಒಂದ ರೀತಿಯಲ್ಲಿ ಥ್ರಿಲ್ಲರ್‌ ಸಸ್ಪೆನ್ಸ್‌ ಸಿನಿಮಾ ಇದಾಗಿದೆ-ರಘು ಎಸ್‌ ಪಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌