ಆ್ಯಪ್ನಗರ

ಹೊಸ ರೂಪದಲ್ಲಿ ನಿಮ್ಮ ಮುಂದೆ ಮಹಾದೇವಿ

ಜಿ‚ೕ ಕನ್ನಡದಲ್ಲಿ ಮೂಡಿ ಬರುತ್ತಿದ್ದ ಮಹಾದೇವಿ ಸೀರಿಯಲ್‌ ಇನ್ನು ಮುಂದೆ ಹೊಸ ರೂಪದಲ್ಲಿ ಪ್ರಸಾರವಾಗಲಿದೆ.

Vijaya Karnataka 2 Feb 2019, 5:00 am
-ಶರಣು ಹುಲ್ಲೂರು
Vijaya Karnataka Web zee

ಯಶಸ್ವಿ 900 ಸಂಚಿಕೆಗಳನ್ನು ಪೂರೈಸಿರುವ ಮಹಾದೇವಿ ಇನ್ನು ಮುಂದೆ ಹೊಸ ರೂಪದಲ್ಲಿ ವೀಕ್ಷಕರ ಮುಂದರೆ ಬರಲಿದ್ದಾಳೆ. ಇಷ್ಟು ದಿನ ವೀಕ್ಷಕರ ಮನಗೆದ್ದಿದ್ದ ಹಿರಣ್ಮಿಯಿ ಅಧ್ಯಾಯ ಮುಕ್ತಾಯಗೊಳ್ಳುತ್ತಿದ್ದು, ಫೆ. 4 ಅಂದರೆ ಸೋಮವಾರದಿಂದ 20 ವರ್ಷದ ತರುಣಿ ಹಿರಣ್ಮಯಿಯ ಪ್ರವೇಶವಾಗಲಿದೆ ಎಂದು ಜಿ‚ೕ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಈಗ ಮಹಾದೇವಿಯ ಕಥೆಯ ಮಜಲು ಸಹ ಬದಲಾಗುತ್ತಿದ್ದು, ಹಳೇ ಕಥೆ ಮತ್ತು ಪಾತ್ರಗಳು ಎಲ್ಲವೂ ಬದಲಾಗಲಿದ್ದು, ಹೊಸ ಪಾತ್ರ ಮತ್ತು ಹೊಸ ಕಥೆ ತೆರೆದುಕೊಳ್ಳಲಿದೆ. ತನ್ನವರನ್ನೆಲ್ಲ ಕಳೆದುಕೊಂಡ ಪುಟ್ಟ ಹಿರಣ್ಮಯಿ ಒಂಟಿಯಾಗಿ ಊರು ಬಿಟ್ಟು ದೂರ ಹೋಗುತ್ತಾಳೆ. ಅರ್ಚಕರೊಬ್ಬರ ನೆರನಿಂದ ಅಪಾಯಕಾರಿ ಸರ್ಪವನ ದಾಟುವ ಆಕೆ, ಕಾಡು ದಾರಿಯಲ್ಲಿ ಮುಳ್ಳ್ಳು ಚುಚ್ಚಿರುವ ಆನೆ ಮರಿಗೆ ಸಹಾಯ ಮಾಡುತ್ತಾಳೆ. ಕಾಲಿನ ಮುಳ್ಳು ತೆಗೆದು ಉಪಚರಿಸುತ್ತಾಳೆ. ನಂತರ ಅಲ್ಲಿಂದ ಹೊರಡುವ ಹಿರಣ್ಮಯಿ ಹಿಂದೆಯೇ ಆನೆ ಮರಿ ಸಹ ಹೋಗುತ್ತದೆ. ಬಹಳ ದೂರ ಕ್ರಮಿಸಿದ ನಂತರ ಮೂಕಾಂಬಿಕೆ ದೇವಸ್ಥಾನಕ್ಕೆ ಬಂದು ಅಲ್ಲಿ ದೇವಿಯ ಮುಂದೆ ಹಾಡನ್ನು ಹಾಡುತ್ತಾಳೆ. ಈಕೆಯ ಹಾಡನ್ನು ಕೇಳಿದ ಅದೇ ದೇಗುಲದ ನಾದಸ್ವರ ವಾದಕ ವರದರಾಜ ಆಕೆಯನ್ನು ದತ್ತು ಪಡೆದು ಸಾಕುತ್ತಾರೆ. ತಮ್ಮ ಸಂಗೀತ ಜ್ಞಾನವನ್ನು ಆಕೆಗೆ ನೀಡಿ, ಹಿರಣ್ಮಿಯಿಯನ್ನು ದೊಡ್ಡ ನಾದಸ್ವರ ವಾದಕಿಯಾಗಿ ಮಾಡುತ್ತಾರೆ. ತನ್ನ ಭಕ್ತಿ, ಭಾವ, ಸ್ವರ-ಶ್ರುತಿ ಶುದ್ಧಿಯಿಂದ ಹಿರಣ್ಮಯಿ ಸುತ್ತಮುತ್ತ ಒಳ್ಳೆ ಹೆಸರನ್ನು ಗಳಿಸುತ್ತಾಳೆ.

ಹೀಗೆ ಕಾಲ ನಡೆದಂತೆ ಒಮ್ಮೆ ಕಥಾನಾಯಕ ಸೂರ್ಯ ಹಣತೆಯ ದೀಪದಲ್ಲಿ ಸಿಗರೇಟ್‌ ಹತ್ತಿಸಲು ಮುಂದಾದಾಗ ಇದನ್ನು ಹಿರಣ್ಮಯಿ ತಡೆದು ಆತನ ಕೆನ್ನೆಗೆ ಬಾರಿಸಿ ಎಲ್ಲರ ಮುಂದೆ ಬುದ್ಧಿ ಕಲಿಸುತ್ತಾಳೆ. ಇದು ಇವಳ ಜೀವನದಲ್ಲಿ ಊಸಲಾಗದ ತಿರುವುಗಳಿಗೆ ಕಾರಣವಾಗುತ್ತದೆ. ಈ ಬಾರಿ ಮಹಾದೇವಿಯ ವಿಶೇಷತೆ ಎಂದರೆ ಆನೆಯೂ ಒಂದು ಪಾತ್ರವಾಗಿರುವುದು. ಕಾಡಿನಿಂದ ಹಿರಣ್ಮಯಿಯ ಹಿಂದೆ ಬಂದಿದ್ದ ಆನೆ ದೊಡ್ಡದಾಗಿ ದೇವಸ್ಥಾನದಲ್ಲಿಯೇ ಉಳಿದಿರುತ್ತದೆ.

ತರುಣಿ ಹಿರಣ್ಮಯಿ ಪಾತ್ರದಲ್ಲಿ ನವ ನಟಿ ಗಗನಾ ನಟಿಸುತ್ತಿದ್ದಾರೆ. ನಾಯಕನಾಗಿ ವಿವೇಕ್‌ ಸಿಂಹ, ಸಾಕು ತಂದೆಯಾಗಿ ಧರ್ಮೇಂದ್ರ ಅರಸ್‌ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ದೊಡ್ಡ ತಾರಾಗಣವೇ ಈ ಸಿರೀಯಲ್‌ನಲ್ಲಿ ಇರಲಿದೆ. ಗ್ರಾಫಿಕ್ಸ್‌ ನ್ಯಾಸದ ಹೊಣೆ ಹೊತ್ತಿದೆ 'ಉಘೇ ಉಘೇ ಮಾದೇಶ್ವರ' ಖ್ಯಾತಿಯ ಮುಂಬಯಿಯ ಚಿತ್ರಮುದ್ರಾ ಸಂಸ್ಥೆ ವಹಿಸಿಕೊಂಡಿದೆ.

ಹೊಸ ವರ್ತಮಾನಕ್ಕೆ ತೆರೆದುಕೊಳ್ಳುತ್ತಿರುವ ಮಹಾದೇವಿ ಸೀರಿಯಲ್‌ನ್ನು ಹೊಸ ರೂಪದಲ್ಲಿ ಕಟ್ಟಿಕೊಡುವುದು ದೊಡ್ಡ ಸವಾಲಿನ ಕೆಲಸವೇ ಸರಿ. ಆ ಸವಾಲನ್ನು ಎದುರಿಸಿ ವೀಕ್ಷಕರ ಮನಸ್ಸನ್ನು ಗೆಲ್ಲುತ್ತೇವೆ ಎನ್ನುತ್ತಾರೆ ನಿರ್ದೇಶಕ ರಮೇಶ್‌ ಇಂದಿರಾ. ಇದೇ ಫೆ. 4ರಿಂದ ರಾತ್ರಿ 8.30 ಕ್ಕೆ ಹೊಸ ರೂಪದಲ್ಲಿ 'ಮಹಾದೇವಿ' ಸೋಮವಾರದಿಂದ ಪ್ರಸಾರವಾಗಲಿದೆ ಎಂದು ರಾಘವೇಂದ್ರ ಹುಣಸೂರು ಮಾಹಿತಿ ನೀಡಿದ್ದಾರೆ.

ಜಿ‚ೕ ಕನ್ನಡದ ಧಾರಾವಾಹಿಗಳಲ್ಲಿ ಮಹಾದೇವಿ ತನ್ನದೇ ಆದ ಛಾಪು ಮೂಡಿಸಿದೆ. ವೀಕ್ಷಕರು ಅವರ ಜತೆ ದೇವಿಯನ್ನು ಕನೆಕ್ಟ್ ಮಾಡಿಕೊಂಡಿದ್ದಾರೆ. ಹಾಗಾಗಿ ಹೊಸ ಕಥೆಯ ಮೂಲಕ ಮಹಾದೇವಿಯನ್ನು ಮುಂದುವರೆಸಲು ನಾವು ನಿರ್ಧಾರ ಮಾಡಿದೆವು.
- ರಾಘವೇಂದ್ರ ಹುಣಸೂರು,ಬ್ಯುಸಿನೆಸ್‌ ಹೆಡ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌