ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ನಟಿಸಿರುವ ನಟಿ ಕೀರ್ತಿ ಸುರೇಶ್ 'ಮಹಾನಟಿ'ಯಾಗಿ ತೆರೆಮೇಲೆ ಮಿಂಚಿದ ನಂತರ ರಾಷ್ಟ್ರ ಪ್ರಶಸ್ತಿ ಪಡೆದರು. ಸಿನಿಮಾ ಬ್ಯಾಕ್ಗ್ರೌಂಡ್ ಹೊಂದಿರುವ ಕುಟುಂಬದಿಂದ ಬಂದಿರುವ ಕೀರ್ತಿ ಸುರೇಶ್ ಈಗಾಗಲೇ ರಜನಿಕಾಂತ್, ದಿಲೀಪ್, ಅಜಿತ್, ವಿಜಯ್ ಮುಂತಾದ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ಮದುವೆಯಾಗುತ್ತಿರುವ ವಿಚಾರದ ಬಗ್ಗೆ ಸಾಕಷ್ಟು ಸುದ್ದಿ ಕೇಳಿಬಂದಿತ್ತು. ಆದರೆ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಸ್ವತಃ ಕೀರ್ತಿ ಅವರೇ ಇದರ ಬಗ್ಗೆ ಮಾತನಾಡಿದ್ದಾರೆ. ಕೀರ್ತಿ ಮದುವೆ ಬಗ್ಗೆ ಗಾಸಿಪ್ ಏನು? ಹುಡುಗ ಯಾರಂತೆ?
ಕೀರ್ತಿಗೆ ಅರೇಂಜ್ ಮ್ಯಾರೇಜ್ ಮಾಡಬೇಕು ಎಂದು ಅವರ ತಂದೆ ಸುರೇಶ್-ತಾಯಿ ಮೇನಕಾ ಪ್ಲ್ಯಾನ್ ಮಾಡುತ್ತಿದ್ದಾರೆ ಕೀರ್ತಿ ತಂದೆಗೆ ರಾಜಕೀಯ ಪಕ್ಷದ ನಂಟಿದೆ. ಬಿಲಿಯನ್ಗಟ್ಟಲೇ ಆಸ್ತಿ ಹೊಂದಿರುವ ಉದ್ಯಮಿ ಜೊತೆಗೆ ಕೀರ್ತಿ ಮದುವೆ ಮಾಡಬೇಕು ಎಂದು ಅವರು ಅಂದುಕೊಂಡಿದ್ದಾರೆ. ಅಪ್ಪನ ನಿರ್ಧಾರಕ್ಕೆ ಕೀರ್ತಿ ಓಕೆ ಎಂದಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.
ಮದುವೆ ಬಗ್ಗೆ ಕೀರ್ತಿ ನೀಡಿದ ಸ್ಪಷ್ಟನೆ ಏನು?
ಈ ಗಾಸಿಪ್ಗಳಿಗೆ ಉತ್ತರ ನೀಡಿರುವ ಕೀರ್ತಿ 'ನನಗೆ ನಿಜಕ್ಕೂ ಮದುವೆ ವಿಷಯ ಸರ್ಪ್ರೈಸ್ ಆಗಿದೆ. ಈ ಸುದ್ದಿ ಹೇಗೆ ಹುಟ್ಟಿ ಹರಡಿತು ಅಂತ ನನಗೆ ಗೊತ್ತಿಲ್ಲ. ನನಗೆ ಮದುವೆ ವಿಚಾರಕ್ಕೆ ಸದ್ಯ ಯಾವುದೇ ಪ್ಲ್ಯಾನ್ ಇಲ್ಲ. ಇಷ್ಟು ಬೇಗ ನಾನು ಮದುವೆ ಕೂಡ ಆಗುತ್ತಿಲ್ಲ. ಈಗಾಗಲೇ ಮಾತನಾಡಲು ರಾಷ್ಟ್ರದಲ್ಲಿ ಹಲವು ವಿಷಯಗಳಿವೆ. ಕೊರೊನಾ ವೈರಸ್ ವಿರುದ್ಧ ಹೋರಾಡುವ ಬಗ್ಗೆ ನಮ್ಮ ಗಮನ ಇರಬೇಕು. ಅನಗತ್ಯ ಗಾಸಿಪ್ ಹುಟ್ಟಿಸಿ ಹರಡಬೇಡಿ. ಎಲ್ಲರೂ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ' ಎಂದು ಹೇಳಿದ್ದಾರೆ.
ಸಂಕ್ಷೇಮ ನಿಧಿಗೆ 50 ಲಕ್ಷ ರೂ. ನೀಡಿದ ರಜನಿಕಾಂತ್! ಚಲನಚಿತ್ರ ಕಾರ್ಮಿಕರ ನೆರವಿಗೆ ನಿಂತ 'ತಲೈವಾ'
ಸಾಲು ಸಾಲು ಸಿನಿಮಾಗಳಲ್ಲಿ ಕೀರ್ತಿ ನಟನೆ
ಮೋಹನ್ ಲಾಲ್ ಜೊತೆಗೆ 'ಮರಕ್ಕರ್: ಆರಂಬಿಕದಲಿಂತೆ ಸಿಂಹಂ' ಸಿನಿಮಾ, 'ಗುಡ್ ಲಕ್ ಸಖಿ', 'ಪೆಂಗ್ವಿನ್', 'ರಂಗ್ ದೇ', 'ಅನ್ನಾತ್ತೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಮದುವೆ, ವೈಯಕ್ತಿಕ ಜೀವನದ ವಿಚಾರವಾಗಿ ಅವರು ಇಲ್ಲಿಯವರೆಗೆ ಅಷ್ಟಾಗಿ ಸುದ್ದಿಯಾಗಲಿಲ್ಲ. ಇದೇ ಮೊದಲ ಬಾರಿಗೆ ಅವರ ಮದುವೆ ಬಗ್ಗೆ ಗಾಸಿಪ್ ಹಬ್ಬಿದೆ ಎನ್ನಬಹುದು.
'ಮಹಾನಟಿ' ಸಿನಿಮಾ ಖ್ಯಾತಿಯ ನಟಿ ಕೀರ್ತಿ ಸುರೇಶ್ ಮದುವೆ, ಹುಡುಗ ಯಾರು?