ಆ್ಯಪ್ನಗರ

ಮಹೇಶ್ ಬಾಬು 'ಮಹರ್ಷಿ' ಮೂಲಕ ಭರ್ಜರಿ ಮಿಂಚುತ್ತಿರುವ ಗುರುಸ್ವಾಮಿ ತಾತ!

'ಮಹರ್ಷಿ' ಸಿನಿಮಾದ 'ಸಕ್ಸಸ್ ಮೀಟ್' ನಲ್ಲಿ ಗುರುಸ್ವಾಮಿ ತಾತ ಸಹ ಮಾತನಾಡಿದರು. ಅವರ ಭಾವುಕ ಮಾತುಗಳು ನಟ ಮಹೇಶ್ ಬಾಬು ಹಾಗೂ ಇಡೀ ತಂಡದವರ ಮನಸ್ಸು ಮುಟ್ಟಿದವು. ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸುವ ಕನಸು ಸಹ ಕಂಡಿರಲಿಲ್ಲ ಎಂದು ಗುರುಸ್ವಾಮಿ ಭಾವುಕರಾಗಿ ನುಡಿದರು.

Vijaya Karnataka Web 18 May 2019, 7:55 pm
ಸ್ಯಾಂಡಲ್‌ವುಡ್‌ನಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ತಮ್ಮ ಇಳಿ ವಯಸ್ಸಿನಲ್ಲಿ ಸಿನಿಮಾದಲ್ಲಿ ನಟಿಸಿ ಕರ್ನಾಟಕದ ತುಂಬೆಲ್ಲ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅದೇ ರೀತಿ ಟಾಲಿವುಡ್‌ನಲ್ಲಿ ಗುರುಸ್ವಾಮಿ ಎಂಬ ತಾತ ತೆಲುಗು 'ಪ್ರಿನ್ಸ್' ಮಹೇಶ್ ಬಾಬು ಜೊತೆ ನಟಿಸಿ ಸಾಕಷ್ಟು ಫೇಮಸ್ ಆಗಿದ್ದಾರೆ.
Vijaya Karnataka Web maheshbabu1805


ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾದಲ್ಲಿ ಗುರುಸ್ವಾಮಿ ಎಂಬ ತಾತ ನಟಿಸಿದ್ದಾರೆ. ಸಿನಿಮಾದ ಸೆಂಕೆಂಡ್ ಹಾಫ್ ನಲ್ಲಿ ಆ ತಾತನ ಪಾತ್ರ ಬರುತ್ತದೆ. ಕೆಲವೇ ದೃಶ್ಯಗಳು ಇದ್ದರೂ, ಸಿನಿಮಾ ಮುಗಿದ ಮೇಲೆಯೂ ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಇರುತ್ತದೆ. ಇಂತಹ ಪಾತ್ರದ ಮೂಲಕ ಗುರುಸ್ವಾಮಿ ಎಂಬ ತಾತ ತೆಲುಗು ಪ್ರೇಕ್ಷಕರ ಪ್ರೀತಿ ಪಡೆದಿದ್ದಾರೆ. ತಮ್ಮ ಮುಪ್ಪಿನ ವಯಸ್ಸಿನಲ್ಲಿ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುವ ಅವಕಾಶ ನೆನೆದು ಭಾವುಕರಾಗಿದ್ದಾರೆ.

'ಮಹರ್ಷಿ' ಸಿನಿಮಾದ 'ಸಕ್ಸಸ್ ಮೀಟ್' ನಲ್ಲಿ ಗುರುಸ್ವಾಮಿ ತಾತ ಸಹ ಮಾತನಾಡಿದರು. ಅವರ ಭಾವುಕ ಮಾತುಗಳು ನಟ ಮಹೇಶ್ ಬಾಬು ಹಾಗೂ ಇಡೀ ತಂಡದವರ ಮನಸ್ಸು ಮುಟ್ಟಿದವು. ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸುವ ಕನಸು ಸಹ ಕಂಡಿರಲಿಲ್ಲ ಎಂದು ಗುರುಸ್ವಾಮಿ ಭಾವುಕರಾಗಿ ನುಡಿದರು.

ಈ ಬಗ್ಗೆ ಮಾತನಾಡಿದ ಅವರು ''ನಾನು ಎಲ್ಲಿಂದ ಎಲ್ಲಿಗೆ ಬಂದಿದ್ದೇನೆ! ನನಗೆ ಕ್ಯಾಮರಾ ಏನೂ ತಿಳಿಯದು. ಅದರ ಮುಂದೆ ಹೇಗೆ ನಿಂತು ಕೊಳ್ಳಬೇಕು ಎಂಬುದು ಸಹ ತಿಳಿಯದು. ಹೀಗಿದ್ದ ನನಗೆ ಈ ಸಿನಿಮಾದಲ್ಲಿ ನಟಿಸಲು ಹೇಳಿ ಕೊಟ್ಟ ನಿರ್ದೇಶಕರಿಗೆ ಧನ್ಯವಾದ" ಎಂದರು. ಅಷ್ಟೇ ಅಲ್ಲ, ನನ್ನ ತಂದೆ ಕೂಲಿ ಮಾಡುತ್ತಿರು. ಕಷ್ಟ ಪಟ್ಟು ಓದಿ ಒಂದು ಉದ್ಯೋಗ ಪಡೆದರೂ, ಕುಟುಂಬ ಹಣಕಾಸಿನ ಕಷ್ಟ ನನಗೆ ಬೇಜಾರು ಉಂಟು ಮಾಡಿತ್ತು. ಮನೆಯಲ್ಲಿ ಸಮಯ ಕಳೆಯುವ ಬದಲು ಮನಸ್ಸಿಗೆ ಆಗುವ ನೋವನ್ನು ದೂರ ಮಾಡಲು ನಾಟಕ, ವೇದಿಕೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡೆ.

ಹೀಗೆ ಉದ್ಯೋಗ ಮಾಡುತ್ತಲೇ ನನ್ನ ಹವ್ಯಾಸವನ್ನು ನಾನು ಮುಂದುವರಿಸಿದೆ. ಯುವಕರ ಜೊತೆ ಸೇರಿ ಒಂದು ಕಿರುಚಿತ್ರದಲ್ಲಿ ನಟಿಸಿದೆ. ಇದೇ ಕಿರುಚಿತ್ರ ನೋಡಿದ ನಿರ್ದೇಶಕ ವಂಶಿ ಅವರು ನನ್ನನ್ನು 'ಮಹರ್ಷಿ' ಸಿನಿಮಾದಲ್ಲಿ ಒಂದು ಪಾತ್ರ ಮಾಡಲು ಅವಕಾಶ ನೀಡಿದರು. ಇವೆಲ್ಲ ನನಗೆ ಒಂದು ಕನಸು ಎನಿಸುತ್ತಿದೆ" ಎಂದಿದ್ದಾರೆ ಗುರುಸ್ವಾಮಿ ತಾತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌