ಆ್ಯಪ್ನಗರ

ಮತ್ತೆ ಬಂದಿದೆ ಮಜಾ ಭಾರತ

ಪ್ರತಿದಿನ ವೀಕ್ಷಕರನ್ನು ನಕ್ಕು ನಗಿಸುತ್ತಿದ್ದ, ಮಜಾ ಭಾರತ ಸೀಸನ್‌-2 ಮತ್ತೆ ಬರುತ್ತಿದೆ...

Vijaya Karnataka 20 Jun 2018, 5:00 am
ಹರೀಶ್‌ ಬಸವರಾಜ್‌
Vijaya Karnataka Web DSC_6256

ಕನ್ನಡ ಪ್ರೇಕ್ಷಕರನ್ನು ಹಾಸ್ಯದಿಂದ ನಕ್ಕು ನಗಿಸುತ್ತಿದ್ದ ಮಜಾ ಭಾರತ ಸೀಸನ್‌ವೊಂದು ಯಶಸ್ವಿಯಾದ ಬೆನ್ನಲ್ಲೇ ಕಲರ್ಸ್‌ ಸೂಪರ್‌ನಲ್ಲಿ ಇದರ ಸೀಸನ್‌ 2 ಬರಲಿದೆ. ಈ ಶೋಗೆ ತೀರ್ಪುಗಾರರಾಗಿ ಸಂಗೀತ ನಿರ್ದೇಶಕ ಗುರುಕಿರಣ್‌, ಖ್ಯಾತ ನಟಿ ರಚಿತಾ ರಾಮ್‌ ತಿರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಬಿಗ್‌ಬಾಸ್‌ ಖ್ಯಾತಿಯ ದಿವಾಕರ್‌ ವಿಶೇಷ ಪಾತ್ರದ ಮೂಲಕ ಮಜಾ ಭಾರತದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಸಂಗೀತದಲ್ಲಿಯೇ ಹಾಸ್ಯವನ್ನು ಉಣಬಡಿಸಿದವರು ಗುರುಕಿರಣ್‌. ಪ್ಯಾರ್‌ಗೆ ಆಗ್ಬುಟ್ಟೈತೆ, ಬಂಡಲ್‌ ಬಡಾಯಿ ಮಾದೇವ ಸೇರಿ ಅನೇಕ ಹಾಸ್ಯಮಯ ಹಾಡುಗಳನ್ನು ಅವರು ಕಂಪೋಸ್‌ ಮಾಡಿದ್ದಾರೆ. ಈಗ ಅವರ ಹಾಸ್ಯ ಪ್ರಜ್ಞೆಯನ್ನು ಈ ಮಜಾ ಭಾರತದ ಮೂಲಕ ತೋರಿಸುತ್ತಿದ್ದಾರೆ. ಜತೆಗೆ ನಟನೆಯ ಜತೆಗೆ ಹಾಸ್ಯದಲ್ಲೂ ಎತ್ತಿದ ಕೈ ಆಗಿರುವ ರಚಿತಾ ಕೂಡ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಮಜಾ ಭಾರತವು ಸೋಮವಾರ, ಮಂಗಳವಾರ ಮತ್ತು ಬುಧವಾರ ರಾತ್ರಿ 8 ಗಂಟೆಗೆ ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಗುರುವಾರ ಮತ್ತು ಶುಕ್ರವಾರ ರಾತ್ರಿ 8 ಗಂಟೆಗೆ 'ಮಜಾ ಟಾಕೀಸ್‌' ಈಗಾಗಲೇ ಪ್ರಸಾರವಾಗುತ್ತಿದೆ. ಈ ಮೂಲಕ ಕಲರ್ಸ್‌ ಸೂಪರ್‌ ವಾರವಿಡೀ ವೀಕ್ಷಕರ ಮುಖದಲ್ಲಿ ನಗು ತರಿಸಲಿದೆ.

ಮಜಾ ಭಾರತ ಮೊದಲ ಸೀಸನ್‌ ಅನ್ನು ಯಶಸ್ವಿಯಾಗಿ ನಿರೂಪಿಸಿದ್ದ ನಿರಂಜನ್‌ ದೇಶಪಾಂಡೆ ಈ ಈ ಸೀಸನ್‌ನಲ್ಲೂ ಇರಲಿದ್ದಾರೆ. ನಿರಂಜನ್‌ ಮತ್ತು ದಿವಾಕರ್‌ ಜೋಡಿ ವೀಕ್ಷಕರಿಗೆ ಮಸ್ತ್‌ ಮಜಾ ನೀಡುತ್ತಿದೆ.

ಮಜಾ ಭಾರತದ ಮೊದಲ ಸೀಸನ್‌ ಮತ್ತು ಕಾಮಿಡಿ ಟಾಕೀಸ್‌ನಲ್ಲಿ ಜನರನ್ನು ನಗಿಸಿದ್ದಅತ್ಯುತ್ತಮ ಹಾಸ್ಯ ಕಲಾವಿದರನ್ನು ಆಯ್ಕೆ ಮಾಡಿ ಈ ಬಾರಿಯ ಮಜಾ ಭಾರತಕ್ಕೆ ಸೇರಿಸಲಾಗಿದೆ. ಮಾಸ್ಟರ್‌ ಡಾನ್ಸರ್‌ ಕಾರ್ಯಕ್ರಮದ ವಿನ್ನರ್‌ ನವೀನ್‌ ಮತ್ತು ಚರಣ್‌ರಾಜ್‌ ಕೂಡಾ ತಮ್ಮ ಕಾಮಿಡಿಯನ್ನು ಈ ಸೀಸನ್‌ನಲ್ಲಿ ತೋರಿಸಲಿದ್ದಾರೆ. ಇವರೆಲ್ಲರ ಜತೆಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಹಾಸ್ಯ ತಂಡಗಳು ಅತಿಥಿ ಕಲಾವಿದರಾಗಿ ಮಜಾ ಭಾರತಕ್ಕೆ ಬರಲಿದ್ದಾರೆ. ಪ್ರತೀ ವಾರ ಸ್ಯಾಂಡಲ್‌ವುಡ್‌ನ ನಟ ನಟಿಯರು ಆಗಮಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಜಾ ಭಾರತವನ್ನು ಟಿವಿಯಲ್ಲಿ ಮಿಸ್‌ ಮಾಡಿಕೊಂಡವರು ವೂಟ್‌ ಆ್ಯಪ್‌ನಲ್ಲಿ ನೋಡಬಹುದು.

-----
ಸಮೃದ್ಧ ಹಾಸ್ಯದ ಹೊನಲು
ಕಳೆದ ಒಂದು ವರ್ಷದಿಂದ ಸತತವಾಗಿ ಸದಭಿರುಚಿಯ ಕಾಮಿಡಿ ಪ್ರಹಸನಗಳನ್ನು ನೀಡಿದ ಬರಹಗಾರರು ಮತ್ತು ನಿರ್ದೇಶನದ ದೊಡ್ಡ ತಂಡ ಮತ್ತು 500ಕ್ಕೂ ಹೆಚ್ಚು ಸೂಪರ್‌ ಹಿಟ್‌ ಸ್ಕಿಟ್‌ಗಳನ್ನು ನೀಡಿದ ಕಲಾವಿದರು ಈ ಬಾರಿಯ ಮಜಾ ಭಾರತದಲ್ಲಿರುತ್ತಾರೆ. ಹಾಗಾಗಿ ಯಾರೂ ಈ ಬಾರಿ ಮಜಾಭಾರತವನ್ನು ಮಿಸ್‌ ಮಾಡಿಕೊಳ್ಳುವ ಹಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌