ಆ್ಯಪ್ನಗರ

ಕನ್ನಡದ ವರಲಕ್ಷ್ಮಿ ರಜನಿಗೆ ನಾಯಕಿ

ನಟ ರಜನಿಕಾಂತ್‌ ನಟನೆಯ ಹೊಸ ಚಿತ್ರಕ್ಕೆ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ನಟಿ ಮಾಳವಿಕಾ ಮೋಹನನ್‌ ಆಯ್ಕೆಯಾಗಿದ್ದಾರೆ.

Vijaya Karnataka 21 Aug 2018, 5:00 am
ನಟ ರಜನಿಕಾಂತ್‌ ನಟನೆಯ ಹೊಸ ಚಿತ್ರಕ್ಕೆ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ನಟಿ ಮಾಳವಿಕಾ ಮೋಹನನ್‌ ಆಯ್ಕೆಯಾಗಿದ್ದಾರೆ.
Vijaya Karnataka Web malavika


==

ಕನ್ನಡದಲ್ಲಿ ನಾನು ಮತ್ತು ವರಲಕ್ಷ್ಮಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಮಾಳವಿಕಾ ಮೋಹನನ್‌ ಈಗ ರಜನಿ ಜತೆ ನಾಯಕಿಯಾಗಿ ನಟಿಸಲಿದ್ದಾರೆ. ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದ ಹೊಸ ಚಿತ್ರ ಇದು. ಕಾರ್ತಿಕ್‌ ತಮಿಳಿನಲ್ಲಿ ಜಿಗರ್‌ ಥಂಡಾ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ಮಾಳವಿಕಾಗೆ ಇದು ಮೊದಲ ತಮಿಳು ಚಿತ್ರ. ಮೊದಲ ಚಿತ್ರದಲ್ಲೇ ರಜನಿ ಜತೆ ನಟಿಸುವ ಅವಕಾಶ ಪಡೆದುಕೊಂಡ ಅದೃಷ್ಟವಂತೆ ಮಾಳವಿಕಾ ಎನ್ನಲಾಗಿದೆ. ಈ ಚಿತ್ರದಲ್ಲಿ ವಿಜಯ್‌ ಸೇತುಪತಿ ಕೂಡಾ ನಟಿಸಲಿದ್ದಾರೆ. ಚಿತ್ರದಲ್ಲಿ ಮಾಳವಿಕಾ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡೆಹ್ರಾಡೂನ್‌, ಡಾರ್ಜಿಲಿಂಗ್‌, ಕೂನೂರ್‌, ಚೆನ್ನೈನಲ್ಲಿ ಚಿತ್ರೀಕರಣ ನಡೆಯಲಿದೆ. ರಜನಿ ಜತೆ ರೋಮಾಂಟಿಕ್‌ ಸಾಂಗ್‌ನಲ್ಲಿ ಮಾಳವಿಕ ಕಾಣಿಸಿಕೊಳ್ಳಲಿದ್ದು, ಯೂರೋಪ್‌ನಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ತಮಿಳು ಚಿತ್ರರಂಗದಲ್ಲೇ ಅತ್ಯಂತ ದುಬಾರಿ ವೆಚ್ಚದ ಚಿತ್ರ ಇದು ಎನ್ನಲಾಗಿದೆ. ಜನಪ್ರಿಯ ಸಿನಿಮಾಟೋಗ್ರಾಫರ್‌ ಕೆಯು ಮೋಹನನ್‌ ಮಗಳು ಮಾಳವಿಕಾ. ಮೋಹನನ್‌ ಬಿಯಾಂಡ್‌ದ ಕ್ಲೌಂಡ್ಸ್‌ ಸಿನಿಮಾಗೆ ಕೆಲಸ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌