ಆ್ಯಪ್ನಗರ

ಕೈಮಾ ಮತ್ತು ಮುದ್ದೆ ಇಷ್ಟಪಡುತ್ತಿದ್ದರು: ಆರತಿಪುರದಲ್ಲಿ ಹೇಳಿದ ಸುಮಲತಾ

ನಟ ದರ್ಶನ್ ಅವರಿಗೆ ಸಿಎಂ ಕುಮಾರಸ್ವಾಮಿ ಅವರು ಸಾಕಷ್ಟು ಟಾಂಗ್ ಕೊಟ್ಟಿದ್ದಾರೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಕಾರ್ಯ ಕೈಗೊಂಡಿರುವ ನಟರಾದ ದರ್ಶನ್ ಮತ್ತು ಯಶ್ ಅವರಿಬ್ಬರ ವಿರುದ್ಧ ಜೆಡಿಎಸ್ ಪಕ್ಷದ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು ಬಹಳಷ್ಟು ಗೊತ್ತಿದೆ.

Vijaya Karnataka Web 8 Apr 2019, 5:55 pm
ರೆಬಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಗೊತ್ತೇ ಇದೆ. ಇತ್ತೀಚಿಗೆ ಮಂಡ್ಯದ ಆರತಿಪುರಕ್ಕೆ ಸುಮಲತಾ ಅವರು ಪ್ರಚಾರ ಕಾರ್ಯ ಕೈಗೊಂಡಾಗ ಅಲ್ಲಿನ ಗ್ರಾಮಸ್ಥರನ್ನು ಕುರಿತು "ಅಂಬರೀಷ್ ಅವರ ಇಷ್ಟದ ಊಟ ಯಾವುದು ಗೊತ್ತೇ" ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಗ್ರಾಮಸ್ಥರು 'ನಾಟಿ ಕೋಳಿ ಸಾರು' ಎಂದು ಉತ್ತರಿಸಲು ಸುಮಲತಾ ಅವರು "ಕೈಮಾ ಮತ್ತು ಮುದ್ದೆಯನ್ನು ಅಂಬರೀಶ್ ತುಂಬಾ ಇಷ್ಟಪಡುತ್ತಿದ್ದರು" ಎಂದು ಹೇಳಿದ್ದಾರೆ.
Vijaya Karnataka Web suma0804


ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕನ್ನಡ ಚಿತ್ರರಂಗದ ಖ್ಯಾತ ನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇದೇ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಕಾರಣಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿದೆ. ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಭಾನುವಾರದಂದು ಸುಮಲತಾ ಅಂಬರೀಶ್ ಮದ್ದೂರು ತಾಲೂಕಿನಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ.

ಸುಮಲತಾ ಅಂಬರೀಷ್ ಪರ ನಟ ದಶ್ನ್ ಹಾಗೂ ಯಶ್ ಅವರಿಬ್ಬರೂ ಮಂಡ್ಯದಲ್ಲಿ ಈಗಾಗಲೇ ಬಿರುಸಿನ ಪ್ರಚಾರಕಾರ್ಯ ಕೈಗೊಂಡಿದ್ದಾರೆ. ನಟ ದರ್ಶನ್ ಅವರಿಗೆ ಸಿಎಂ ಕುಮಾರಸ್ವಾಮಿ ಅವರು ಸಾಕಷ್ಟು ಟಾಂಗ್ ಕೊಟ್ಟಿದ್ದಾರೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಕಾರ್ಯ ಕೈಗೊಂಡಿರುವ ನಟರಾದ ದರ್ಶನ್ ಮತ್ತು ಯಶ್ ಅವರಿಬ್ಬರ ವಿರುದ್ಧ ಜೆಡಿಎಸ್ ಪಕ್ಷದ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು ಬಹಳಷ್ಟು ಗೊತ್ತಿದೆ. ಇದೀಗ, ನಟ ದರ್ಶನ್ ಅವರು ಬೆಂಗಳೂರು ಸೆಂಟ್ರಲ್ ಲೋಕಸಭಾ ಕಣದ ಸ್ಪರ್ಧಿ ಬಿಜೆಪಿಯ ಪಿಸಿ ಮೋಹನ್‌ ಅವರ ಪರ ಮತ ಯಾಚನೆ ಮಾಡಲಿದ್ದಾರೆ.

ನಟಿ, ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರವಾಗಿ ನಟ ದರ್ಶನ್ ಅವರು ಪ್ರಚಾರಕ್ಕೆ ತಮ್ಮನ್ನು ತೊಡಿಗಿಸಿಕೊಂಡಿರುವುದು ಹಲವರ ನಿದ್ದೆಗೆಡಿಸಿದೆ ಎನ್ನಬಹುದು. ಒಟ್ಟಿನಲ್ಲಿ, ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್‌, ಅಭಿಮಾನಿಗಳ 'ಡಿ ಬಾಸ್' ದರ್ಶನ್‌ ಅವರು ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಧುಮುಕಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌