ಆ್ಯಪ್ನಗರ

ಸಿಗ್ನೇಚರ್ ಚಿತ್ರದಲ್ಲಿ ಮಯೂರಿ ಫಸ್ಟ್ ಲುಕ್ ರಿಲೀಸ್

ಗುರು ಮದ್ಲೇಸರ ನಿರ್ದೇಶನದ ಸಿಗ್ನೇಚರ್‌ ಸಿನಿಮಾದಲ್ಲಿ ತಾವು ಹೊಸ ರೀತಿಯ ಪಾತ್ರ ಮಾಡುತ್ತಿರುವುದಾಗಿ ಮಯೂರಿ ಹೇಳಿಕೊಂಡಿದ್ದರು.

Vijaya Karnataka 22 May 2018, 11:50 am
ಗುರು ಮದ್ಲೇಸರ ನಿರ್ದೇಶನದ ಸಿಗ್ನೇಚರ್‌ ಸಿನಿಮಾದಲ್ಲಿ ತಾವು ಹೊಸ ರೀತಿಯ ಪಾತ್ರ ಮಾಡುತ್ತಿರುವುದಾಗಿ ಮಯೂರಿ ಹೇಳಿಕೊಂಡಿದ್ದರು. ಅದು ಯಾವ ಪಾತ್ರ ಮತ್ತು ಹೇಗಿರುತ್ತದೆ ಎಂದು ಹೇಳಿರಲಿಲ್ಲ. ಇವರ ಪಾತ್ರದ ಫಸ್ಟ್‌ಲುಕ್‌ ರಿವಿಲ್‌ ಆಗಿದೆ.
Vijaya Karnataka Web mayuri


ಶಾರ್ಟ್‌ಸ್ಕ್ರರ್ಟ್‌ ಹಾಕಿಕೊಂಡು ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಇವರು, ಈ ಸಿನಿಮಾದಲ್ಲಿ ಮಾಜಿ ಮುಖ್ಯಮಂತ್ರಿಯ ಮಗಳಾಗಿ ನಟಿಸುತ್ತಿದ್ದಾರೆ. ಡಾಲ್‌ ರೀತಿಯಲ್ಲಿ ಅವರು ಕಂಡಿದ್ದಾರೆ. ಅಂದಹಾಗೆ ಸಿನಿಮಾದ ಶೀರ್ಷಿಕೆ ಸಿಗ್ನೇಚರ್‌ ಅಂತಿದ್ದರೂ, ಲವ್‌ಸ್ಟೋರಿಯನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.

ಜಿಲ್ಲಾಧಿಕಾರಿ ಹಾಗೂ ಮಾಜಿ ಮುಖ್ಯಮಂತ್ರಿಯೊಬ್ಬರ ನಡುವಿನ ಜಿದ್ದಾಜಿದ್ದಿಯು ಕೂಡ ಸಿನಿಮಾದಲ್ಲಿ ಇರಲಿದೆಯಂತೆ. ದಹಾಗೆ ಈ ಸಿನಿಮಾದಲ್ಲಿ ಸುಧಾರಾಣಿ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದು, ರಂಜಿತ್‌ ನಾಯಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌