ಆ್ಯಪ್ನಗರ

ಸಿಗ್ನೇಚರ್ ಮಾಡಿದ ಮಯೂರಿ

ಗುರು ಮದ್ಲೇಸರ ನಿರ್ದೇಶನದ ಸಿಗ್ನೇಚರ್‌ ಸಿನಿಮಾದಲ್ಲಿ ಮಾಜಿ ಮುಖ್ಯಮಂತ್ರಿಯ ಮಗಳಾಗಿ ನಟಿಸುತ್ತಿದ್ದಾರೆ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ. ಮೊನ್ನೆಯಷ್ಟೇ ಈ ಚಿತ್ರದ ಮುಹೂರ್ತ ಕೂಡ ಆಗಿದೆ.

Vijaya Karnataka 20 Apr 2018, 11:34 am
ಸದ್ಯ ಕನ್ನಡದಲ್ಲಿ ಹೊಸ ರೀತಿಯ ಶೀರ್ಷಿಕೆಗಳು ಸದ್ದು ಮಾಡುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಗುರು ಮದ್ಲೇಸರ ನಿರ್ದೇಶನದ 'ಸಿಗ್ನೇಚರ್‌' ಚಿತ್ರ. ಮೊನ್ನೆಯಷ್ಟೇ ಈ ಚಿತ್ರದ ಮುಹೂರ್ತವಾಗಿದ್ದು, ಮಯೂರಿ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರು ಮಾಜಿ ಮುಖ್ಯಮಂತ್ರಿಗಳ ಮಗಳಾಗಿ ನಟಿಸುತ್ತಿದ್ದು, ಅದೊಂದು ಬೋಲ್ಡ್‌ ಪಾತ್ರ ಎನ್ನುವುದು ವಿಶೇಷ.
Vijaya Karnataka Web mayuri1


'ಮಾಜಿ ಮುಖ್ಯಮಂತ್ರಿಗಳ ಮಗಳು ಅಂದರೆ ಅವಳು ಯಾವ ರೀತಿಯಲ್ಲಿ ಇರುತ್ತಾಳೆ ಎಂಬ ಒಂದು ಸಣ್ಣ ಕಲ್ಪನೆ ಮೂಡುತ್ತದೆ. ಆದರೆ, ಆ ಕಲ್ಪನೆಗಿಂತ ಈ ಪಾತ್ರ ಚೆನ್ನಾಗಿದೆ. ಮೊದಲ ಬಾರಿಗೆ ಇಂಥದ್ದೊಂದು ಕ್ಯಾರೆಕ್ಟರ್‌ ನನಗೆ ಸಿಕ್ಕಿದೆ' ಎಂದು ಖುಷಿ ಹಂಚಿಕೊಳ್ಳುತ್ತಾರೆ ಮಯೂರಿ.

ಮಾಜಿ ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಹೀಗೆ ಎರಡು ಕುಟುಂಬಗಳ ನಡುವೆ ಜಿದ್ದಾಜಿದ್ದಿ ಸಿನಿಮಾದಲ್ಲಿದ್ದು, ಅದರ ಜತೆ ನವಿರಾದ ಪ್ರೇಮಕಥೆಯನ್ನು ಹೇಳುತ್ತಿದ್ದಾರಂತೆ ನಿರ್ದೇಶಕರು. ರಂಜಿತ್‌ ಈ ಸಿನಿಮಾದ ಮೂಲಕ ನಾಯಕನಾಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಡಿಸಿ ಮಗಳಾಗಿ ನಿರ್ಮಾಪP ಭಾಸ್ಕರ್‌ ಪೂಜಾರಿ ಪುತ್ರಿ ಬೇಬಿ ಮಾನ್ಯಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸುಧಾರಾಣಿ, ಸುನೀಲ್‌ ಪುರಾಣಿಕ್‌ ಹೀಗೆ ದೊಡ್ಡ ತಾರಾಗಣವೇ ಸಿನಿಮಾದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌