ಆ್ಯಪ್ನಗರ

#MeToo ಅಭಿಯಾನ: ದಕ್ಷಿಣ ಚಿತ್ರೋದ್ಯಮ ಖಡಕ್ ನಿರ್ಧಾರ

ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಸುಪ್ರೀಂಕೋರ್ಟ್ 1997ರಲ್ಲಿ ವಿಶಾಖಾ ಮಾರ್ಗಸೂಚಿಗಳು ಘೋಷಿಸಿತ್ತು. ಇದೀಗ ಈ ಮಾರ್ಗಸೂಚಿಗಳನ್ನು ಚಿತ್ರರಂಗಕ್ಕೂ ಅಳವಡಿಸಿಕೊಳ್ಳಲು ಎಸ್‍ಐಎಎ ಮುಂದಾಗಿದೆ.

TIMESOFINDIA.COM 2 Nov 2018, 3:38 pm
ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ #MeToo ಅಭಿಯಾನ ಈಗ ದಕ್ಷಿಣ ಚಿತ್ರರಂಗದಲ್ಲೂ ತನ್ನ ಕರಾಳ ಪ್ರಭಾವ ತೋರಿಸುತ್ತಿದೆ. ಅರ್ಜುನ್ ಸರ್ಜಾ ಮತ್ತು ವೈರಮುತ್ತು ಅವರಂತಹ ಖ್ಯಾತನಾಮರ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಪ್ರಕರಣಗಳಿಗೆ ಬ್ರೇಕ್ ಹಾಕಲು ದಕ್ಷಿಣ ಭಾರತ ಕಲಾವಿದರ ಸಂಘ ಹೊಸ ದೃಢ ನಿರ್ಧಾರಕ್ಕೆ ಬಂದಿದೆ.
Vijaya Karnataka Web me-too


ಚಿತ್ರೋದ್ಯಮದಲ್ಲಿ ವಿಶಾಖಾ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ದಕ್ಷಿಣ ಭಾರತ ಕಲಾವಿದರ ಸಂಘ (ಎಸ್‍ಐಎಎ) ಮುಂದಾಗಿದೆ. ಸಮಿತಿಯೊಂದನ್ನು ರಚಿಸಿ ವಿಶಾಖಾ ಮಾರ್ಗಸೂಚಿಗಳನ್ನು ಚಿತ್ರರಂಗಕ್ಕೆ ತರಲು ಮುಂದಾಗಿದೆ.

ಇತ್ತೀಚೆಗಷ್ಟೇ ಎಸ್‍ಐಎಎ ಈ ಬಗ್ಗೆ ಅಧಿಕೃದ ಹೇಳಿಕೆಯನ್ನೂ ನೀಡಿದೆ. ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಸುಪ್ರೀಂಕೋರ್ಟ್ 1997ರಲ್ಲಿ ವಿಶಾಖಾ ಮಾರ್ಗಸೂಚಿಗಳು ಘೋಷಿಸಿತ್ತು. ಇದೀಗ ಈ ಮಾರ್ಗಸೂಚಿಗಳನ್ನು ಚಿತ್ರರಂಗಕ್ಕೂ ಅಳವಡಿಸಿಕೊಳ್ಳಲು ಎಸ್‍ಐಎಎ ಮುಂದಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇನ್‌ಟಿಮೇಸಿ ಕೋ-ಆರ್ಡಿನೇಟರ್ ನೇಮಿಸಿಕೊಳ್ಳಲು ಚಿತ್ರರಂಗ ಮುಂದಾಗಿದೆ. ರೊಮ್ಯಾಂಟಿಕ್ ಸನ್ನಿವೇಶಗಳನ್ನು ಸೆರೆ ಹಿಡಿಯುವಾಗ ಕಾನೂನು ತಿಳಿವಳಿಕೆ ಹೊಂದಿರುವ ಇವರು ಶೂಟಿಂಗ್‌ ಸ್ಪಾಟ್‌ನಲ್ಲಿಯೇ ಇರಲಿದ್ದಾರೆ. ಪ್ರಣಯ ಅಥವಾ ಅದಕ್ಕೂ ಮೀರಿದ ಶೃಂಗಾರ ದೃಶ್ಯಗಳು ಯಾವುದೇ ಕಲಾವಿದರಿಗೆ ತೊಂದರೆ ಆಗದಂತೆ ಇವರು ಮಾರ್ಗದರ್ಶನ ಮಾಡುತ್ತಾರೆ. ಆದರೆ ಈ ಬಗ್ಗೆ ಚಿತ್ರೋದ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿದೆ.

ಈಗಾಗಲೇ ತಮಿಳು ಮತ್ತು ಮಲೆಯಾಳಂ ಚಿತ್ರೋದ್ಯಮ ಲೈಂಗಿಕ ಕಿರುಕುಳ ತಡೆಗಟ್ಟುವ ಸಂಬಂಧ ಕಮಿಟಿಯೊಂದನ್ನು ಮಾಡಿಕೊಂಡಿವೆ. ಸ್ಯಾಂಡಲ್‌ವುಡ್‌ನಲ್ಲೂ ಸಮಿತಿಯೊಂದನ್ನು ರಚಿಸುವ ಚಿಂತನೆ ನಡೆದಿದೆ. [ಪರಿಷ್ಕೃತ: #MeToo ಸುದ್ದಿ ಕವರೇಜ್ ಬಗ್ಗೆ ವಿಕ ನೀತಿ]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌