ಆ್ಯಪ್ನಗರ

ಚಿರಂಜೀವಿ ಸರ್ಜಾ, ಮೇಘನಾ ನಿಶ್ಚಿತಾರ್ಥ ನಿಕ್ಕಿ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ನಿಶ್ಚಿತಾರ್ಥ ನಿಕ್ಕಿಯಾಗಿದೆ...

Vijaya Karnataka 10 Oct 2017, 5:00 am

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ನಿಶ್ಚಿತಾರ್ಥ ನಿಕ್ಕಿಯಾಗಿದೆ. ಅಕ್ಟೋಬರ್‌ 22ರಂದು ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಈ ಜೋಡಿ ಎಂಗೇಜ್‌ಮೆಂಟ್‌ ಉಂಗುರವನ್ನು ಬದಲಿಸಿಕೊಳ್ಳಲಿದ್ಧಾರೆ.

ಕನ್ನಡ ಸಿನಿಮಾ ರಂಗದ ಮತ್ತೊಂದು ತಾರಾ ಜೋಡಿ ಮದುವೆಗೆ ಸಿದ್ಧವಾಗಿದೆ. ಎರಡು ದಿನಗಳ ಹಿಂದೆಯಷ್ಟೇ ತಮ್ಮ ಮದುವೆಯ ಬಗ್ಗೆ ನಿರಾಕರಿಸಿದ್ದ ಚಿರಂಜೀವಿ, ಮೇಘನಾ ರಾಜ್‌ ಸದ್ದಿಲ್ಲದೇ ಮದುವೆ ತಯಾರಿ ಮಾಡಿಕೊಂಡಿದ್ದಾರೆ. ಅಕ್ಟೋಬರ್‌ 22ರಂದು ಬೆಂಗಳೂರಿನ ಹಳೆ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಪಂಚಾತಾರಾ ಹೋಟೆಲ್‌ನಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ಡಿಸೆಂಬರ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದ್ದು, ಈ ಕುರಿತು ಲವಲವಿಕೆ ಜತೆ ಮಾತನಾಡಿದ ಚಿರು ಆಪ್ತರು, ನಿಶ್ಚಿತಾರ್ಥ ದಿನಾಂಕ ನಿಕ್ಕಿ ಆಗಿರುವುದನ್ನು ಖಚಿತಪಡಿಸಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಪ್ರೀತಿಸುತ್ತಿರುವ ವಿಚಾರ ಎರಡ್ಮೂರು ವರ್ಷಗಳಿಂದಲೂ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿತ್ತು. ಕಳೆದ ವರ್ಷವೇ ಈ ಜೋಡಿ ಹಸೆಮಣೆಗೆ ಏರಲಿದೆ ಎಂದೂ ಸುದ್ದಿ ಆಗಿತ್ತು. ಆದರೆ, ಇದೆಲ್ಲವನ್ನೂ ಈ ಜೋಡಿ ನಿರಾಕರಿಸುತ್ತಲೇ ಬಂದಿತ್ತು. ಅಂತಿಮವಾಗಿ ಸುದ್ದಿ ನಿಜವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌