ಆ್ಯಪ್ನಗರ

ಅಚ್ಚಳಿಯದ ನೆನಪುಗಳ ವಿಕ ರಾಜೋತ್ಸವ

ವಿಜಯ ಕರ್ನಾಟಕ ಹಮ್ಮಿಕೊಂಡಿದ್ದ 'ವಿಕ ರಾಜೋತ್ಸವ' ಏ.24ರಂದು ಅದ್ಧೂರಿಯಾಗಿ ನಡೆಯಿತು. ಸಿನಿಮಾ ರಂಗದ ತಾರೆಯರು ಮತ್ತು ವಿಕ ಓದುಗರ ಸಮಾಗಮ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.

Vijaya Karnataka 27 Apr 2018, 11:45 am
ಏ.24ರಂದು ಬೆಂಗಳೂರಿನ ಚಲನಚಿತ್ರ ಕಲಾವಿದರ ಸಂಘದ ನೂತನ ಕಟ್ಟಡದಲ್ಲಿ ಡಾ.ರಾಜ್‌ಕುಮಾರ್‌ರ 90ನೇ ಹುಟ್ಟುಹಬ್ಬವನ್ನು ವಿಜಯ ಕರ್ನಾಟಕ ಅರ್ಥಪೂರ್ಣವಾಗಿ ಆಚರಿಸಿತು. 'ವಿಕ ರಾಜೋತ್ಸವ' ಹೆಸರಿನಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಡಾ.ರಾಜ್‌ ಜತೆಗಿನ ನೆನಪಿನ ಬುತ್ತಿಯನ್ನು ಹಂಚಿಕೊಂಡರು ಸಂಗೀತ ನಿರ್ದೇಶಕ ವಿ.ಮನೋಹರ್‌, ಗಾಯಕಿ ಶಮಿತಾ ಮಲ್ನಾಡ್‌ ಮತ್ತು ನಟ, ಕಲಾ ನಿರ್ದೇಶಕ ಅರುಣ್‌ ಸಾಗರ್‌. ಇತ್ತೀಚೆಗೆ ಈ ಕುಟುಂಬದೊಂದಿಗೆ ಒಡನಾಟ ಇಟ್ಟುಕೊಂಡಿರುವ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಕೂಡ ರಾಜ್‌ಕುಮಾರ್‌ ಬಗೆಗಿನ ಹಲವು ಸಂಗತಿಗಳನ್ನು ಹಂಚಿಕೊಂಡರು.
Vijaya Karnataka Web rajotsava


ಈ ವರ್ಣ ರಂಜಿತ ಸಮಾರಂಭಕ್ಕೆ ತಾರಾ ಮೆರುಗು ತಂದುಕೊಟ್ಟಿದ್ದು ದುನಿಯಾ ವಿಜಯ್‌, ರಾಗಿಣಿ, ಧನಂಜಯ್‌, ಮಾನ್ವಿತಾ ಹರೀಶ್‌, ಯಶವಂತ್‌ ಸರದೇಶಪಾಂಡೆ, ಆರ್‌ಜೆ ರೋಹಿತ್‌,ಅರು ಗೌಡ ಮುಂತಾದ ಕಲಾವಿದರು. ನಿರ್ದೇಶಕ ಯೋಗರಾಜ್‌ ಭಟ್‌ ಕಾರ್ಯಕ್ರಮಕ್ಕೆ ತಮ್ಮ ಶುಭಾಶಯವನ್ನು ವಿಡಿಯೋ ಮೂಲಕ ಕಳುಹಿಸಿದ್ದು ವಿಶೇಷವಾಗಿತ್ತು.

ವರನಟನ ಅಚ್ಚಳಿಯದ ನೆನಪುಗಳೊಂದಿಗೆ, ಗೀತ ಗಾಯನ, ಅಭಿಮಾನಿಗಳ ಹರ್ಷೋದ್ಘಾರ ಮತ್ತು ಕಸ್ತೂರಿ ನಿವಾಸ ಸಿನಿಮಾ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಶರಣ್ಯ ಮತ್ತು ಭರತ್‌ ನಾಯಕ್‌ ರಾಜ್‌ ಗೀತ ಗಾಯನವನ್ನು ನೆಡಿಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿಕ ಯುಗಾದಿ ಕಥಾಸ್ಪರ್ಧೆಗೆ ಬಂದಿದ್ದ 25 ಅತ್ಯುತ್ತಮ ಕಥೆಗಳ ಸಂಕಲನ ಕಥಾ ವಸಂತ ಪುಸ್ತಕ ಲೋಕಾರ್ಪಣೆ ಆಯಿತು. ಅದೆಲ್ಲದ ಝಲಕ್‌ ಇಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌