ಆ್ಯಪ್ನಗರ

ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ #MeToo ಆರೋಪ

ಅದು ಅರ್ಜನ್ ಸರ್ಜಾ ನಾಯಕನಾಗಿದ್ದ ದ್ವಿಭಾಷಾ ಚಿತ್ರ. ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವಳು ನಾನು. ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿತ್ತು. ಆರಂಭದ ಒಂದೆರಡು ದಿನಗಳು ಸಹಜವಾಗಿದ್ದವು.

Vijaya Karnataka Web 20 Oct 2018, 12:59 pm
ಸದ್ಯಕ್ಕೆ ಸ್ಯಾಂಡಲ್‌ವುಡ್ ನಟಿಯರು #MeToo ಅಭಿಯಾನದ ಮೂಲಕ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದೀಗ ನಟಿ ಶ್ರುತಿ ಹರಿಹರನ್ ಸಹ ಈ ಬಗ್ಗೆ ಮೌನ ಮುರಿದಿದ್ದಾರೆ. ಅವರು ಆರೋಪ ಹೊರಿಸಿರುವುದು ಆ್ಯಕ್ಷನ್ ಕಿಂಗ್ ಎಂದೇ ಹೆಸರಾಗಿರುವ ನಟ ಅರ್ಜುನ್ ಸರ್ಜಾ ವಿರುದ್ಧ.
Vijaya Karnataka Web shruthi-hariharan


ಈ ಬಗ್ಗೆ ತಮ್ಮ ಫೇಸ್‍ಬುಕ್‌ನಲ್ಲಿ ಸುದೀರ್ಘ ಪತ್ರವನ್ನು ಬರೆದುಕೊಂಡಿದ್ದಾರೆ ಶ್ರುತಿ ಹರಿಹರನ್. ಅದರಲ್ಲಿ ಮಿ ಟೂ ಅಭಿಯಾನದಿಂದಾಗಿ ಮಹಿಳೆಯರು ಮುಂದೆ ಬಂದು ತಮ್ಮ ಕರಾಳ ಪುಟಗಳನ್ನು ತೆರೆದಿಡುತ್ತಿರುವ ಬಗ್ಗೆ, ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್, ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ತಮಗೂ ಆ ರೀತಿಯ ಸಾಕಷ್ಟು ಕೆಟ್ಟ ಸನ್ನಿವೇಶಗಳು ಎದುರಾಗಿವೆ. ಆದರೆ ಎಲ್ಲವನ್ನೂ ಚಾಕಚಕ್ಯತೆಯಿಂದ ನಿಭಾಯಿಸಿದ್ದೇನೆ ಎಂದಿದ್ದಾರೆ.

"ದೈಹಿಕವಾಗಿ ಮತ್ತು ಮಾನಸಿಕವಾಗಿ ಭಯಬೀಳಿಸುವ ಹಲವಾರು ಘಟನೆಗಳಿಂದ ನಾನು ಅದೃಷ್ಟವಶಾತ್ ಪಾರಾಗಿದ್ದೇನೆ. ಆದರೆ 2016ರಲ್ಲಿ ನಡೆದ ಒಂದು ಘಟನೆಯಿಂದ ನಾನು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು" ಎಂದು ತಮಗಾದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ.


"ಅದು ಅರ್ಜನ್ ಸರ್ಜಾ ನಾಯಕನಾಗಿದ್ದ ದ್ವಿಭಾಷಾ ಚಿತ್ರ. ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವಳು ನಾನು. ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿತ್ತು. ಆರಂಭದ ಒಂದೆರಡು ದಿನಗಳು ಸಹಜವಾಗಿದ್ದವು. ಆ ಚಿತ್ರದಲ್ಲಿ ಅವರ ಪತ್ನಿಯಾಗಿ ಅಭಿನಯಿಸಿದ್ದೇನೆ. ತುಂಬಾ ರೊಮ್ಯಾಂಟಿಕ್ ಡೈಲಾಗ್‌ಗಳು ಬರುತ್ತವೆ. ಪ್ರತಿ ಡೈಲಾಗ್ ಮುಗಿದ ಬಳಿಕ ಅಪ್ಪಿಕೊಳ್ಳುವ ಸನ್ನಿವೇಶ ಬರುತ್ತದೆ. ರಿಹರ್ಸಲ್ ಸಮಯದಲ್ಲಿ ಡೈಲಾಗ್ ಮುಗಿದ ಬಳಿಕ ಅರ್ಜುನ್ ನನ್ನನ್ನು ತಬ್ಬಿಕೊಂಡರು. ಆದರೆ ನನ್ನ ಒಪ್ಪಿಗೆ ಇಲ್ಲದೆ ಅವರ ಕೈ ನನ್ನ ಬೆನ್ನ ಮೇಲೆ ಮೇಲಿಂದ ಕೆಳಗೆ ಅಸಹವಾಗಿ ಸ್ಪರ್ಶಿಸಿದರು. ಬಳಿಕ ಬರಸೆಳೆದು ಬಿಗಿಯಾಗಿ ಅಪ್ಪಿದರು. ಫೋರ್‌ಪ್ಲೇ ಸನ್ನಿವೇಶದಲ್ಲಿ ಇದನ್ನು ಬಳಸೋಣವೇ ಎಂದು ನಿರ್ದೇಶಕರಿಗೆ ಹೇಳಿದರು. ನಾನು ಗಾಬರಿಗೊಂಡಿದ್ದೆ. ಅವರ ಹಠಾತ್ ವರ್ತನೆಯಿಂದ ಕುಪಿತಗೊಂಡು, ಅವರಿಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ" ಎಂದು ಆರೋಪಿಸಿದ್ದಾರೆ.


ಶೂಟಿಂಗೂ ಮುನ್ನ ಸೀನ್‌ಗಳನ್ನು ರಿಹರ್ಸಲ್ ಮಾಡುತ್ತಿದ್ದೆವು. ಇದರಿಂದ ಬಾಡಿ ಲಾಂಗ್ವೇಜ್, ಪಾತ್ರದ ಬಗ್ಗೆ ಹೆಚ್ಚು ಸ್ಪಷ್ಟತೆ ಬರುತ್ತದೆ. ಹಾಗಾಗಿ ಒಪ್ಪಿಕೊಂಡಿದ್ದೆ. ಆದರೆ ಅರ್ಜುನ್ ಅವರ ವರ್ತನೆಯಿಂದ ನನಗೆ ಬೇಸರವಾಗಿ ಬಳಿಕ ರಿಹರ್ಸಲ್‍ಗೆ ಬರಲ್ಲ ಎಂದು ಹೇಳಿ, ನೇರವಾಗಿ ಶೂಟಿಂಗ್‌ಗೆ ಬರುತ್ತಿದ್ದೆ. ಆ ಚಿತ್ರದಿಂದ ನಾನು ಹೊರಬರುವಂತಿರಲಿಲ್ಲ. ಯಾಕೆಂದರೆ ಸಹಿ ಹಾಕಿದ್ದೆ. ಚಿತ್ರೀಕರಣ ಮುಂದುವರೆಸಲೇಬೇಕಾಗುತ್ತು. ಅವರ ಸ್ಥಾನಮಾನ ಮತ್ತು ಪವರ್ ಬಳಸಿಕೊಂಡು ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ ಶ್ರುತಿ ಹರಿಹರನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌