ಆ್ಯಪ್ನಗರ

ಸ್ಯಾಂಡಲ್‌ವುಡ್‌ಗೆ ಜಮೀರ್‌ ಪುತ್ರ ಜಾಹಿದ್‌

ಸಚಿವ ಜಮೀರ್‌ ಅಹಮದ್‌ಖಾನ್‌ ಪುತ್ರ ಹಿಂದಿ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಓಡಾಡುತ್ತಿದೆ...

Vijaya Karnataka 19 Apr 2019, 12:29 pm
ಸಚಿವ ಜಮೀರ್‌ ಅಹಮದ್‌ಖಾನ್‌ ಪುತ್ರ ಹಿಂದಿ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಓಡಾಡುತ್ತಿದೆ. ಆದರೆ ಅವರು ಸ್ಯಾಂಡಲ್‌ವುಡ್‌ ಮೂಲಕವೇ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರಂತೆ.
Vijaya Karnataka Web zahid


ಹೌದು, ಸಚಿವ ಜಮೀರ್‌ ಅವರ ಪುತ್ರ ಜಾಹಿದ್‌ಖಾನ್‌ ಜಯತೀರ್ಥ ಅವರ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶ ಮಾಡಲಿದ್ದಾರಂತೆ. ಬೆಲ್‌ಬಾಟಮ್‌ ಚಿತ್ರದ ಯಶಸ್ಸಿನಲ್ಲಿರುವ ಅವರು ಜಾಹಿದ್‌ ಖಾನ್‌ ಅವರಿಗೆ ಸೂಟ್‌ ಆಗುವಂತಹ ಕಥೆ ಬರೆಯುತ್ತಿದ್ದಾರಂತೆ.

ಈ ಬಗ್ಗೆ ಮಾತನಾಡಿದ ಜಯತೀರ್ಥ 'ಜಮೀರ್‌ ಅವರ ಪುತ್ರನಿಗೆ ಸಿನಿಮಾ ಮಾಡಲು ಆಫರ್‌ ಬಂದಿರುವುದು ನಿಜ. ಅವರು ಮುಂಬಯಿಗೆ ಹೋಗಿ ನಟನಾ ತರಬೇತಿಯನ್ನು ಪಡೆದುಕೊಂಡು ಬಂದಿದ್ದಾರೆ. ಅಲ್ಲದೇ ಸಖತ್‌ ಸ್ಟೈಲಿಷ್‌ ಆಗಿಯೂ ಇದ್ದಾರೆ. ಅವರಿಗೆ ಸೂಟ್‌ ಆಗುವಂತಹ ಕಥೆ ಬರೆಯಬೇಕು. ಅವರನ್ನು ಭೇಟಿಯಾದ ನಾನು ನಿಮ್ಮನ್ನು ಪರಿಚಯಿಸುವುದು ಪಕ್ಕಾ ಆದರೆ ನಿಮ್ಮನ್ನು ಒಬ್ಬ ಸ್ಟಾರ್‌ ಎಂದು ಪರಿಚಯ ಮಾಡಿಸುವುದಕ್ಕಿಂತ ಒಬ್ಬ ಪರ್ಫಾಮರ್‌ ಎನ್ನುವ ರೀತಿಯಲ್ಲಿ ಪರಿಚಯಿಸುತ್ತೇನೆ ಎಂದು ಜಾಯೇದ್‌ ಖಾನ್‌ ಅವರಿಗೆ ಹೇಳಿದ್ದೇನೆ'ಎನ್ನುತ್ತಾರವರು.

ಜಯತೀರ್ಥ ಹಿಂದಿನಿಂದಲೂ ಸಾಕಷ್ಟು ಜನ ಹೊಸಬರನ್ನು ನಾಯಕರನ್ನಾಗಿ ಲಾಂಚ್‌ ಮಾಡಿದ್ದಾರೆ. ರಿಷಭ್‌ ಶೆಟ್ಟಿ ಸಹ ಮೊದಲ ಬಾರಿಗೆ ನಾಯಕರಾಗಿದ್ದು, ಜಯತೀರ್ಥ ನಿರ್ದೇಶನದಲ್ಲಿ ಹಾಗಾಗಿ ಜಯತೀರ್ಥ ಜಮೀರ್‌ ಅವರ ಪುತ್ರನನ್ನು ಸಹ ಲಾಂಚ್‌ ಮಾಡಲಿದ್ದಾರಂತೆ. ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತೆ ಆದರೆ 2020ಕ್ಕೆ ಜಮೀರ್‌ ಅವರ ಪುತ್ರ ಬೆಳ್ಳಿತೆರೆಗೆ ಬರುವುದು ಕನ್ಫರ್ಮ್‌ ಅನ್ನುತ್ತವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌