ಆ್ಯಪ್ನಗರ

ಮೈಸೂರು ಕಾಲೇಜ್‌ನಲ್ಲಿ ನಡೆದ ನೈಜ ಕಥೆಯೇ ಎಂಎಂಸಿಎಚ್‌ ಚಿತ್ರ

ಶೀರ್ಷಿಕೆಯಿಂದಾಗಿಯೇ ಗಮನ ಸೆಳೆದಿದೆ ಎಂಎಂಸಿಎಚ್‌ ಸಿನಿಮಾ. ನಾಲ್ವರು ನಾಯಕಿಯರ ಮಕ್ಕಳು ಈ ಚಿತ್ರದಲ್ಲಿ ಹೀರೋಯಿಗಳಾಗಿ ನಟಿಸಿದ್ದು, ನೈಜ ಘಟನೆಯನ್ನೇ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮುಸ್ಸಂಜೆ ಮಹೇಶ್‌.

Vijaya Karnataka 5 Jun 2018, 11:40 am
*ಶರಣು ಹುಲ್ಲೂರು
Vijaya Karnataka Web mmch


ಮೈಸೂರಿನ ಪ್ರತಿಷ್ಠಿತ ಕಾಲೇಜ್‌ವೊಂದರಲ್ಲಿ ನಡೆದ ನೈಜ ಘಟನೆಯನ್ನೇ ಸಿನಿಮಾ ಮಾಡಿರುವ ನಿರ್ದೇಶಕ ಮುಸ್ಸಂಜೆ ಮಹೇಶ್‌, ಈ ಮೂಲಕ ಕನ್ನಡದಲ್ಲಿ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ತೆರೆಗೆ ಬರುತ್ತಿದೆ. ಎಂಎಂಸಿಎಚ್‌ ಹೆಸರಿನಲ್ಲಿ ಈ ಚಿತ್ರ ಬರುತ್ತಿದೆ.

ನಾನು ಓದುತ್ತಿದ್ದ ವೇಳೆಯಲ್ಲಿಯೇ ಈ ಘಟನೆ ನಡೆದಿತ್ತು. ಪೊಲೀಸ್‌ ಅಧಿಕಾರಿಗಳು ಈ ಸುದ್ದಿಯನ್ನು ಆಚೆ ಬರದಂತೆ ತಡೆದಿದ್ದರು. ಈಗ ಅದನ್ನು ಜಗತ್ತಿಗೆ ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ ಎನ್ನುತ್ತಾರೆ ಮಹೇಶ್‌.

'ನಾನು ಹೇಳಲು ಹೊರಟಿರುವ ವಿಷಯ ಈವರೆಗೂ ಯಾರಿಗೂ ಗೊತ್ತಿಲ್ಲ. ಆದರೆ, ಇದನ್ನು ಹೇಳಲೇಬೇಕು ಎಂಬ ತುಡಿತ ನನ್ನಲ್ಲಿತ್ತು. ಈಗ ಅದು ಸಾಧ್ಯವಾಗಿದೆ. ಕಾಲೇಜು ಮೆಟ್ಟಿಲು ಹತ್ತುವ ಹುಡುಗಿಯರ ತಲ್ಲಣಕ್ಕೆ ಸಿನಿಮಾ ಸಾಕ್ಷಿಯಾಗಲಿದೆ' ಎಂದು ಅವರು ತಿಳಿಸಿದ್ದಾರೆ.

ವಿನಯಾ ಪ್ರಸಾದ್‌ ಪುತ್ರಿ ಪ್ರಥಮಾ, ಪ್ರಮೀಳಾ ಜೋಷಾಯ್‌ ಪುತ್ರಿ ಮೇಘನಾ ರಾಜ್‌, ಸುಧಾ ಬೆಳವಾಡಿ ಪುತ್ರಿ ಸಂಯುಕ್ತಾ ಹೊರನಾಡು ಹಾಗೂ ಹಿರಿಯ ನಟಿ ಸುಮಿತ್ರಾ ಅವರ ಮಗಳು ದೀಪ್ತಿ (ನಕ್ಷ ತ್ರ) ನಾಯಕಿಯರಾಗಿ ನಟಿಸಿದ್ದಾರೆ. ರಾಗಿಣಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಯುವರಾಜ್‌ ಮತ್ತು ರಘು ಭಟ್‌ ನಾಯಕರು.

ಮುಸ್ಸಂಜೆ ಮಾತು ಸೇರಿ ಹಲವು ಸಿನಿಮಾಗಳ ಮೂಲಕ ಹಿಟ್‌ ಹಾಡುಗಳನ್ನು ನೀಡಿರುವ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನೀಡಿದ್ದಾರೆ. ಭಾರತಿಯ ರೈಲ್ವೆ ಇಲಾಖೆಯಲ್ಲಿ ಜಿಜಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವ ಅನೂಪ್‌ ದಯಾನಂದ, ಹೆಸರಾಂತ ಗಾಯಕಿ ಶ್ರೇಯಾ ಘೊಷಾಲ್‌, ಗಾಯಕ ವಿಜಯ ಪ್ರಕಾಶ್‌ ಹಾಡಿದ್ದಾರೆ.

ಜಾನಿ ಚಿತ್ರದ ಮೂಲಕ ನಿರ್ಮಾಪಕರಾಗಿ ಸಿನಿಮಾ ರಂಗ ಪ್ರವೇಶ ಮಾಡಿದ ಎಸ್‌. ಪುರುಷೊತ್ತಮ್‌, ಜಾನಕಿ ರಾಮ್‌ ಹಾಗೂ ಅರವಿಂದ್‌ ಬಂಡವಾಳ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೋಮವಾರ ಹಾಡುಗಳು ರಿಲೀಸ್‌ ಆಗಿವೆ.

ನೈಜ ಘಟನೆ ಆಧರಿಸಿದ ಮಹಿಳಾ ಪ್ರಧಾನ ಸಿನಿಮಾವಿದು. ಮೈಸೂರಿನ ಭಾಗದಲ್ಲಿ ಘಟನೆ ನಡೆದಿರುವುದರಿಂದ ಆ ಪ್ರದೇಶವನ್ನು ಸೂಚಿಸುವಂಥ ಶೀರ್ಷಿಕೆ ಇಡಲಾಗಿದೆ. ಎಂಎಂಸಿಎಚ್‌ ಅಂದರೆ ಏನು ಎನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇನೆ.
ಮುಸ್ಸಂಜೆ ಮಹೇಶ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌