ಆ್ಯಪ್ನಗರ

ಬೆಳ್ಳಿತೆರೆ ಮೇಲೆ ಅಬ್ಬರಿಸಲಿರುವ ಕರ್ನಾಟಕದ ಸಿಂಗಂ

ಐಪಿಎಸ್‌ ಅಧಿಕಾರಿ ಅಣ್ಣಾಮಲೈ ತಮ್ಮ ವೃತ್ತಿಗೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಅವರ ಕುರಿತಾಗಿ ಸಿನಿಮಾ ಮಾಡಲು ಹಲವರು ರೆಡಿಯಾಗಿದ್ದಾರೆ. ಚಿಕ್ಕಮಗಳೂರು ಮೂಲದ ಪೊಲೀಸ್‌ ಅಧಿಕಾರಿಯೊಬ್ಬರು ಕರ್ನಾಟಕದ ಸಿಂಗಂ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದಾರೆ.

Vijaya Karnataka 1 Jun 2019, 2:03 pm
* ಶರಣು ಹುಲ್ಲೂರು
Vijaya Karnataka Web anna-malai


ಚಿಕ್ಕ ವಯಸ್ಸಿನಲ್ಲೇ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ ಎಲ್ಲರನ್ನೂ ಅಚ್ಚರಿಗೆ ಗುರಿಮಾಡಿರುವ ಐಪಿಎಸ್‌ ಅಧಿಕಾರಿ ಅಣ್ಣಾಮಲೈಕುರಿತಾಗಿ ಸಿನಿಮಾ ಮಾಡಲು ಚಿಕ್ಕಮಗಳೂರಿನ ಪೊಲೀಸ್‌ ಅಧಿಕಾರಿ ಎಂ.ಎಚ್‌. ಉಮಾಶಂಕರ್‌ ಮುಂದಾಗಿದ್ದಾರೆ. ಈ ಚಿತ್ರಕ್ಕೆ ಅಣ್ಣಾ ಐಪಿಎಸ್‌ ಎಂದು ಹೆಸರಿಡಲಾಗಿದೆ.

ಈಗಾಗಲೇ ಇವರು ಅಣ್ಣಾಮಲೈ ಕುರಿತು ಹಾಡೊಂದನ್ನು ಬರೆದಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರೀಯಾಗಿ ಹರಿದಾಡುತ್ತಿದೆ. ಈ ಕುರಿತು ಲವಲವಿಕೆ ಜತೆ ಮಾತನಾಡಿದ ಉಮಾಶಂಕರ್‌, 'ಅಣ್ಣಾಮಲೈ ಜೀವನವೇ ಒಂದು ರೋಚಕ ಸ್ಟೋರಿ. ಅವರು ನಡೆದು ಬಂದ ಹಾದಿ ಎಲ್ಲರಿಗೂ ಮಾದರಿ. ಚಿಕ್ಕಮಗಳೂರು ಮಾತ್ರವಲ್ಲ, ಅವರು ಕೆಲಸ ಮಾಡಿದ ಎಲ್ಲ ಕಡೆಗಳಲ್ಲೂ ಒಳ್ಳೆಯ ಹೆಸರು ಮಾಡಿದ್ದಾರೆ. ಜನಸ್ನೇಹಿ ಪೊಲೀಸ್‌ ಅಧಿಕಾರಿ ಅವರಾಗಿದ್ದರು. ಹಾಗಾಗಿ ಅವರ ಬಗ್ಗೆ ಸಿನಿಮಾ ಮಾಡಲು ಯೋಚನೆ ಮಾಡಿದ್ದೇನೆ. ಸದ್ಯದಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜತೆ ಮಾತನಾಡಿ ಟೈಟಲ್‌ ನೋಂದಾಯಿಸುತ್ತೇನೆ' ಎಂದಿದ್ದಾರೆ.

'ಅಣ್ಣಾಮಲೈ ಅವರು 9 ವರ್ಷ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಉದ್ಯಮಿಯ ಮಗನಾಗಿದ್ದರೂ, ಆಯ್ಕೆ ಮಾಡಿಕೊಂಡಿದ್ದು ಪೊಲೀಸ್‌ ಸೇವೆಯನ್ನು. ಇಂತಹ ಅಧಿಕಾರಿಯ ಜೀವನ ಎಲ್ಲರಿಗೂ ಆದರ್ಶವಾಗಿರಲಿ ಎನ್ನುವುದೇ ಸಿನಿಮಾದ ಉದ್ದೇಶ. ಹಾಗಾಗಿ ಗೆಳೆಯರ ಜತೆ ಸೇರಿ ಈ ಸಿನಿಮಾ ಮಾಡುವಂಥ ಪ್ಲಾನ್‌ ಮಾಡಿದ್ದೇನೆ. ಈ ಚಿತ್ರ ಮುಗಿದ ನಂತರ ರವಿ ಡಿ. ಚೆನ್ನಣ್ಣನವರ ಸಿನಿಮಾ ಮಾಡುವೆ ' ಎಂದು ಉಮಾಶಂಕರ್‌ ತಿಳಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳ ಜೀವನವನ್ನು ಆಧರಿಸಿದ ಸಿನಿಮಾಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ಎಸ್‌ಪಿ ಸಾಂಗ್ಲಿಯಾನ, ಕಿರಣ್‌ ಬೇಡಿ ಅವರ ಜೀವನವನ್ನು ಸಿನಿಮಾ ಮಾಡಲಾಗಿದೆ. ಅಲ್ಲದೇ, ಐಎಎಸ್‌ ಅಧಿಕಾರಿ ಡಿ.ಕೆ.ರವಿ ಕಥೆಯನ್ನೂ ಆಧರಿಸಿದ ಚಿತ್ರ ಬಂದಿದೆ.

ಅಣ್ಣಾಮಲೈ ಜೀವನ ಎಲ್ಲರಿಗೂ ಸ್ಫೂರ್ತಿ ಆಗುವಂಥದ್ದು. ಚಿಕ್ಕ ವಯಸ್ಸಿನಲ್ಲೇ ಅಗಾಧ ಸಾಧನೆ ಮಾಡಿದ್ದಾರೆ. ಹಾಗಾಗಿ ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾಡಲು ಪ್ಲ್ಯಾನ್‌ ಮಾಡುತ್ತಿದ್ದೇವೆ. ಗೆಳೆಯರ ಜತೆಗೂಡಿ ಇಂಥದ್ದೊಂದು ಸಿನಿಮಾ ಮಾಡಲು ಚರ್ಚೆ ನಡೆಸಲಾಗುತ್ತಿದೆ.

-ಎಂ.ಎಚ್‌.ಉಮಾಶಂಕರ್‌, ಪೊಲೀಸ್‌ ಅಧಿಕಾರಿ

ವಾಣಿಜ್ಯ ಮಂಡಳಿಗೆ ಈವರೆಗೂ ಯಾರೂ ಟೈಟಲ್‌ ನೋಂದಣಿಗಾಗಿ ಸಂಪರ್ಕ ಮಾಡಿಲ್ಲ. ಅಣ್ಣಾಮಲೈ ಅವರು ಒಪ್ಪಿಕೊಂಡರೆ ಟೈಟಲ್‌ ಕೊಡಲು ನಮ್ಮದೇನೂ ಅಭ್ಯಂತರವಿಲ್ಲ.

- ಭಾ.ಮಾ.ಹರೀಶ್‌, ಕಾರ್ಯದಶಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌