ಆ್ಯಪ್ನಗರ

4 ಸಿನಿಮಾದಲ್ಲಿ ಬಿಝಿಯಾದ ಮಾನ್ವಿತಾ

ಟಗರು ಪುಟ್ಟಿ ಮಾನ್ವಿತಾ ಹರೀಶ್‌ ಮೇಷ್ಟ್ರು ಸಿನಿಮಾಗಾಗಿ ಸದ್ಯದಲ್ಲೇ ಲಂಡನ್‌ಗೆ ಹಾರಲಿದ್ದು, ಅದರ ಜತೆಯಲ್ಲಿ ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರಂತೆ.

Vijaya Karnataka 2 Aug 2018, 11:36 am
ಟಗರು ನಂತರ ಮಾನ್ವಿತಾ ರಿಲ್ಯಾಕ್ಸ್‌ ಸತ್ಯ, ತಾರಕಾಸುರ, ಅರಿಷಡ್ವರ್ಗ ಹಾಗೂ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಗತಿಹಳ್ಳಿಯವರ ಸಿನಿಮಾ ಬಿಟ್ಟು ಉಳಿದ ಮೂರು ಚಿತ್ರಗಳ ಶೂಟಿಂಗ್‌ ಕೊನೆಯ ಹಂತದಲ್ಲಿದೆ, ಹಾಗಾಗಿ ಸದ್ಯದಲ್ಲೇ ಲಂಡನ್‌ಗೆ ಹೋಗಲು ಮಾನ್ವಿತಾ ಸಿದ್ಧತೆ ನಡೆಸುತ್ತಿದ್ದಾರೆ. 'ಈಗಾಗಲೇ ಲಂಡನ್‌ಗೆ ಹೋಗಲು ಎಲ್ಲವನ್ನು ರೆಡಿ ಮಾಡಿಕೊಂಡಿದ್ದೇನೆ. ಇಲ್ಲೆ ಶಾಪಿಂಗ್‌ ಮಾಡಿದ್ದೇನೆ. ನಾಗತಿಹಳ್ಳಿಯ ಸಿನಿಮಾವಾದ ಮೇಲೆ ಬಹುಷಃ ರಾಮ್‌ಗೋಪಾಲ್‌ ವರ್ಮಾ ಅವರ ಚಿತ್ರ ಆರಂಭವಾಗುತ್ತದೆ. ಆರ್‌ಜಿವಿ ಪ್ರಾಜೆಕ್ಟ್ ಆರಂಭವಾಗಬೇಕಿತ್ತು,ಆದರೆ ನಾನು ಬೇರೆ ಚಿತ್ರಗಳ ಕೆಲಸದಲ್ಲಿ ಬಿಝಿ ಇದ್ದೆ, ಅವರು ಬೇರೆ ಬೇರೆ ಕೆಲಸದಲ್ಲಿದ್ದ ಕಾರಣ ತಡವಾಗಿದೆ. ಪ್ರತಿ ದಿನ ಸಿನಿಮಾ ವಿಷಯಗಳ ಬಗ್ಗೆ, ಪಾತ್ರದ ಬಗ್ಗೆ ಆರ್‌ಜಿವಿಯವರು ನಾನು ಫೋನ್‌ನಲ್ಲಿ ಮಾತನಾಡುತ್ತೇವೆ,'ಎನ್ನುತ್ತಾರೆ ಮಾನ್ವಿತಾ.
Vijaya Karnataka Web 29501294515_01588f7d29_b


ಟಗರು ಚಿತ್ರದ ನಂತರ ಮಾನ್ವಿತಾಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಜನರು ಅವರನ್ನು ಪ್ರೀತಿಸುವ ಪರಿಗೆ ಅವರು ಬೆರೆಗಾಗಿದ್ದಾರಂತೆ. ಜನರ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ, ಸಾಕಷ್ಟು ಮಂದಿ ನನಗೆ ಲವ್‌ ಪ್ರಪೋಸ್‌ ಮಾಡಿದ್ದಾರೆ, ಆದರೆ ಅದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ, ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದೇನೆ,'ಎಂದು ಹೇಳುತ್ತಾರವರು.

ಸಂಜು ಸಿನಿಮಾದಲ್ಲಿ ರಾಮ್‌ಗೋಪಾಲ್‌ ವರ್ಮಾ ಬಿಝಿಯಾಗಿರುವುದರಿಂದ ನನ್ನ ಸಿನಿಮಾ ತಡವಾಗುತ್ತಿದೆ, ಕೆಲ ದಿನಗಳಲ್ಲಿಯೇ ಅದು ಆರಂಭವಾಗುತ್ತದೆ.
ಮಾನ್ವಿತಾ ಹರೀಶ್‌, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌