ಆ್ಯಪ್ನಗರ

ತನ್ನ ಸಾಲುಗಳಿಗೆ ರಾಜಕೀಯ ಬಣ್ಣ, ಯೋಗರಾಜ್ ಭಟ್ ಸಿಡಿಮಿಡಿ

ನಾನು ಯಾವುದೇ ಥರದ ರಾಜಕಾರಣದ ಆರಾಧಕ ಅಲ್ಲ. ಎಡ ಬಲ ಮಧ್ಯ ಮೇಲೆ ಕೆಳಗೆ ಜಾತಿವಾದ ಯಾವುದಕ್ಕೂ ನಾ ಸೇರಿಲ್ಲ ಎಂದಿದ್ದಾರೆ ಗೀತ ಸಾಹಿತಿ ಯೋಗರಾಜ್ ಭಟ್.

Vijaya Karnataka Web 26 Mar 2019, 6:10 pm
ಗೀತರಚನೆಕಾರ, ನಿರ್ದೇಶಕ, ನಿರ್ಮಾಪಕ ಯೋಗರಾಜ್ ಭಟ್ ಸಿಡಿಮಿಡಿಗೊಂಡಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅವರ ಯಾವುದೋ ಕವನ ಒಂದರ ಸಾಲುಗಳನ್ನು ರಾಜಕೀಯ ಪಕ್ಷಗಳು ಬಳಸಿಕೊಂಡಿವೆ. ಜೊತೆಗೆ "ಎಂತಹ ಮಾತು ಭಟ್ರೆ" ಎಂಬ ಸಾಲನ್ನು ಸೇರಿಸಿ ಯೋಗರಾಜ್ ಭಟ್ ಅವರೇ ಹೇಳಿದ್ದಾರೆ ಎಂಬಂತೆ ಮತದಾರರನ್ನು ಸೆಳೆಯಲು ಕಸರತ್ತು ಮಾಡಿವೆ. ಈ ಬಗ್ಗೆ ಅವರು ಭಟ್ಟರು ತಮ್ಮ ದುಮ್ಮಾನ ತೋಡಿಕೊಂಡಿದ್ದಾರೆ.
Vijaya Karnataka Web yograjbhat


ಈ ಸಂಬಂಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ತಮ್ಮ ಅಭಿಮಾನಿಗಳಲ್ಲಿ ವಿನಂತಿಕೊಂಡಿದ್ದಾರೆ. ಅವರ ಪತ್ರದ ಒಕ್ಕಣೆ ಹೀಗಿದೆ, "ನಾನು ಯಾವುದೇ ಥರದ ರಾಜಕಾರಣದ ಆರಾಧಕ ಅಲ್ಲ. ಎಡ ಬಲ ಮಧ್ಯ ಮೇಲೆ ಕೆಳಗೆ ಜಾತಿವಾದ ಯಾವುದಕ್ಕೂ ನಾ ಸೇರಿಲ್ಲ" ಎಂದಿದ್ದಾರೆ.

ನನ್ನ ಕೆಲವು ಕವನದ ಸಾಲುಗಳನ್ನು, ಗಾದೆ ರೀತಿಯ ಬರಹಗಳನ್ನು ರಾಜಕೀಯ ಪಕ್ಷಗಳು ಸುಮ್ಮನೇ ಬಳಸಿಕೊಳ್ಳುತ್ತಿವೆ. ಅದೊಂಥರ ಹಿಂಸೆ. ಆದ್ದರಿಂದ ಓದುಗರು, ನೋಡುಗರು ನನ್ನನ್ನು ಯಾವುದೇ ಪಕ್ಷಕ್ಕೂ ಸೇರಿಸದೆ, ಜೋಡಿಸದೆ ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಬೇಕಾಗಿ ಪ್ರಾರ್ಥನೆ" ಎಂದಿದ್ದಾರೆ.

ಇತ್ತೀಚೆಗೆ ಯೋಗರಾಜ್ ಭಟ್ ಹೇಳಿದ್ದಾರೆ ಎಂಬ ಸಾಲುಗಳು ರಾಜಕೀಯ ಪಕ್ಷವೊಂದು ಬಳಸಿಕೊಂಡಿತ್ತು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯವಾಗಿ ವಾಟ್ಸಾಪ್‌ನಲ್ಲಿ ಸಿಕ್ಕಾಪಟ್ಟೆ ಫಾರ್ವಡ್ ಆಗಿದೆ. "ಎಂತಹ ಸಾಲುಗಳು ಭಟ್ರೆ... ಕಾಡು ಕ್ರಮೇಣ ಕ್ಷೀಣಿಸುತ್ತಿತ್ತು ಆದರೂ ಕೂಡಾ, ಕಾಡಿನ ಮರಗಳು ಕೊಡಲಿಗೆ ಓಟು ಹಾಕುತ್ತಿದ್ದವು. ಏಕೆಂದರೆ ಕೊಡಲಿಯ ಹಿಂದಿರುವ ಕಟ್ಟಿಗೆಯ ಹಿಡಿಕೆ "ನಮ್ಮ ಜಾತಿಯವನು" ಎಂದು ನಂಬಿದ್ದವು" ಎಂಬ ಸಾಲುಗಳು ಹರಿದಾಡಿವೆ. ಈ ಸಲ ಯೋಚಿಸಿ ಮತ ಚಲಾಯಿಸಿ ಎಂದು ರಾಜಕೀಯ ಪಕ್ಷಗಳು ಬಳಸಿಕೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌