ಆ್ಯಪ್ನಗರ

ಟಾಲಿವುಡ್ ಆಯಿತು ಈಗ ಕಾಲಿವುಡ್‌ಗೆ ನಭಾ ನಟೇಶ್ ಪದಾರ್ಪಣೆ

ನಭಾ ನಟೇಶ್ ಒಂದೊಂದೆ ಅವಕಾಶಗಳನ್ನು ಬಾಚಿಕೊಳ್ಳುತ್ತಾ ದಕ್ಷಿಣದಲ್ಲಿ ಮುನ್ನುಗ್ಗುತ್ತಿದ್ದಾರೆ. ಟಾಲಿವುಡ್‍ನ ಕೆಲ ಸಿನಿಮಾಗಳ ಬಳಿಕ ಈಗ ಕಾಲಿವುಡ್‍‌ಗೆ ಅಡಿಯಿಡುವ ಸೂಚನೆ ನೀಡಿದ್ದಾರೆ.

Vijaya Karnataka Web 6 Aug 2019, 4:27 pm
ಕನ್ನಡದ ವಜ್ರಕಾಯ, ಲೀ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ನಭಾ ನಟೇಶ್ ಈಗ ಕಾಲಿವುಡ್‍ಗೆ ಪದಾರ್ಪಣೆ ಮಾಡಲಿದ್ದಾರೆ. ಟಾಲಿವುಡ್‌ನಲ್ಲಿ ನಭಾ ನಟನೆಯ 'ಇಸ್ಮಾರ್ಟ್ ಶಂಕರ್' ಸಿನಿಮಾ ಹಿಟ್ ಆಗಿದ್ದು ಇದೀಗ ಕಾಲಿವುಡ್‍ಗೂ ಅಡಿಯಿಟ್ಟಿದ್ದಾರೆ.
Vijaya Karnataka Web nabha-natesh


ತೆಲುಗಿನ 'ನನ್ನು ದೋಚುಕುಂದುವಟೆ' ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಬಣ್ಣ ಹಚ್ಚಿದ ನಭಾ ಅಭಿನಯದ 'ಇಸ್ಮಾರ್ಟ್ ಶಂಕರ್' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಭಾ ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕಾಲಿವುಡ್ ಅಭಿಮಾನಿಗಳು ತಮಿಳು ಸಿನಿಮಾದಲ್ಲಿ ಯಾವಾಗ ಅಭಿನಯಿಸುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, "ಸಿನಿಮಾ ಒಂದರಲ್ಲಿ ಅಭಿನಯಿಸಲು ಸಹಿ ಹಾಕಿದ್ದೇನೆ. ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ಪ್ರಕಟಿಸಲಿದೆ. ತಮಿಳು ಪ್ರೇಕ್ಷಕರನ್ನು ಶೀಘ್ರ ಭೇಟಿಯಾಗುತ್ತೇನೆ" ಎಂದಿದ್ದಾರೆ. [ಡಿಸ್ಕೋ ರಾಜನಿಗೆ ಜತೆಯಾದ ನಭಾ ನಟೇಶ್‌, ತಾನ್ಯಾ]

ಕಾಲಿವುಡ್‌ನ ಖ್ಯಾತ ನಟರೊಬ್ಬರ ಜತೆಗೆ ನಭಾ ನಟಿಸಲಿದ್ದಾರೆ ಎನ್ನಲಾಗಿದೆ. ಆ ಹೀರೋ ಯಾರು? ಏನು ಎತ್ತ ಎಂಬಿತ್ಯಾದಿ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ತೆಲುಗಿನಲ್ಲಿ ರವಿತೇಜ ಜತೆಗಿನ 'ಡಿಸ್ಕೋ ರಾಜ' ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. [ನಭಾ ನಟೇಶ್ ಮೈಮೇಲೆ ಬಿಯರ್ ಚೆಲ್ಲಿದ ರಾಮ್ ಗೋಪಾಲ್ ವರ್ಮಾ!]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌