ಆ್ಯಪ್ನಗರ

ಜಾಲತಾಣಗಳಲ್ಲಿ ಟ್ರೆಂಡ್ ಆದ ನಡುವೆ ಅಂತರವಿರಲಿ

ಈ ವಾರ ರಿಲೀಸ್‌ ಆಗಿರುವ 'ನಡುವೆ ಅಂತರವಿರಲಿ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ರವೀಣ್‌ ಇಲ್ಲಿ ಮಾತನಾಡಿದ್ದಾರೆ.

Vijaya Karnataka 10 Oct 2018, 11:16 am
* ಶರಣು ಹುಲ್ಲೂರು
Vijaya Karnataka Web naduve-antaravirali2


ನಡುವೆ ಅಂತರವಿರಲಿ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರೂ ಸಿನಿಮಾ ನೋಡುತ್ತಿದ್ದಾರೆಂದು ಹೇಳಿದ್ದಾರೆ ನಿರ್ದೇಶಕ ರವೀಣ್‌.

ಸುಮಾರು ವರ್ಷಗಳ ನಂತರ ಫ್ಯಾಮಿಲಿ ಪ್ರೇಕ್ಷಕರು ಮತ್ತೆ ಥಿಯೇಟರ್‌ಗಳತ್ತ ಬರುತ್ತಿದ್ದಾರೆ. 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿದ್ದ ಸಿನಿಮಾಗೆ ವಿಮರ್ಶಕರಿಂದಲೂ ಮೆಚ್ಚುಗೆ ಸಿಕ್ಕಿದೆ. ಹೀಗಾಗಿ ಸಹಜವಾಗಿಯೇ ಥಿಯೇಟರ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲೂ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಪ್ರಮಾಣದಲ್ಲಿ ಪ್ರೇಕ್ಷಕರು ನನ್ನ ಸಿನಿಮಾ ಒಪ್ಪಿಕೊಳ್ಳುತ್ತಾರೆಂದು ಅಂದುಕೊಂಡಿರಲಿಲ್ಲ. ಸಿನಿಮಾ ನೋಡಿದ ಪ್ರೇಕ್ಷಕರು, ಸ್ವತಃ ಅವರೇ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ನೋಡುವಂತೆ ಬೇರೆಯವರಿಗೂ ಹೇಳುತ್ತಿದ್ದಾರೆ. ಅದರಲ್ಲೂ ಪೋಷಕರು ತಮ್ಮ ಮಕ್ಕಳೊಂದಿಗೆ ಸಿನಿಮಾ ನೋಡುತ್ತಿದ್ದಾರೆ. ಹೊಸ ತಂಡಕ್ಕೆ ಸಿಕ್ಕಿರುವ ಪ್ರೋತ್ಸಾಹಕ್ಕೆ ನಾವು ಋುಣಿ ಆಗಿದ್ದೇವೆ ಎಂದು ರವೀಣ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಟೀನೇಜ್‌ ಯುವಕ ಯುವತಿಯರ ಕಥೆ ಸಿನಿಮಾದಲ್ಲಿದ್ದರೂ ಎಲ್ಲರಿಗೂ ಇಷ್ಟವಾಗುವಂಥ ಅಂಶಗಳು ಕಥೆಯಲ್ಲಿವೆ. ಅದನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದರಿಂದ ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತಿದೆ ಎನ್ನುತ್ತಾರೆ ಅವರು.

ಕ್ಲೈಮ್ಯಾಕ್ಸ್‌ ಬಗ್ಗೆಯೇ ಪ್ರೇಕ್ಷಕರು ಮಾತನಾಡಿದ್ದಾರೆ. ಕಣ್ಣೀರಿಟ್ಟಿದ್ದಾರೆ. ನಗಿಸುತ್ತಲೇ ಸಾಗುವ ಕಥೆ ಕೊನೆಯಲ್ಲಿ ಭಾವುಕ ಸ್ಥಿತಿಗೆ ತಲುಪುತ್ತದೆ. ಇದೊಂದು ಪರಿಪೂರ್ಣ ಮನರಂಜನೆಯ ಸಿನಿಮಾ ಎಂಬ ಹೊಗಳಿಕೆಯೂ ವ್ಯಕ್ತವಾಗಿದೆ. ಮಹಿಳಾ ತಂಡಗಳು, ಕಾಲೇಜು ವಿದ್ಯಾರ್ಥಿಗಳು ಸಿನಿಮಾ ನೋಡಲು ಬರುತ್ತಿದ್ದಾರೆ ಎನ್ನುವುದು ನಿರ್ದೇಶಕರ ಮಾತು.

ಐಶಾನಿ ಶೆಟ್ಟಿ ನಾಯಕಿ, ಪ್ರಖ್ಯಾತ್‌ ನಾಯಕನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ತುಳಸಿ ಶಿವಮಣಿ, ಅರುಣಾ ಬಾಲರಾಜ್‌, ಚಿಕ್ಕಣ್ಣ ಹೀಗೆ ನುರಿತ ಕಲಾವಿದರೇ ತಾರಾಗಣದಲ್ಲಿದ್ದಾರೆ. ಬೃಂದಾ ಪ್ರೊಡಕ್ಷನ್‌ ಲಾಂಛನದಲ್ಲಿ ರವೀಣ್‌ ಮತ್ತು ಜಿ.ಕೆ. ನಾಗರಾಜು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸ್ವತಃ ನೋಡುಗರೇ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಹೊಸ ತಂಡಕ್ಕೆ ಈ ರೀತಿ ಸಿಕ್ಕಿರುವ ಪ್ರೋತ್ಸಾಹಕ್ಕೆ ತುಂಬಾ ಖುಷಿ ಆಗಿದೆ. ತಂಡೋಪ ತಂಡವಾಗಿ ಬಂದು ಜನರು ಸಿನಿಮಾ ನೋಡುತ್ತಿದ್ದಾರೆ.
ರವೀಣ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌