ಆ್ಯಪ್ನಗರ

ರವಿಚಂದ್ರನ್ ಎರಡನೇ ಮಗನಿಗೆ ನಿರ್ದೇಶಕರು ಪಕ್ಕಾ ಆಯ್ತು

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ 'ವಿಕ್ರಮ್'. 2014ರಲ್ಲಿ ಬಿಡುಗಡೆಯಾದ 'ಕ್ರೇಜಿಸ್ಟಾರ್' ಸಿನಿಮಾದಲ್ಲಿ ರವಿಚಂದ್ರನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು ವಿಕ್ರಮ್. ಇದೀಗ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಲು ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 28 Jun 2017, 10:30 pm
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ 'ವಿಕ್ರಮ್'. 2014ರಲ್ಲಿ ಬಿಡುಗಡೆಯಾದ 'ಕ್ರೇಜಿಸ್ಟಾರ್' ಸಿನಿಮಾದಲ್ಲಿ ರವಿಚಂದ್ರನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು ವಿಕ್ರಮ್. ಇದೀಗ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಲು ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ.
Vijaya Karnataka Web nagashekhar to direct ravichandaran son vikram
ರವಿಚಂದ್ರನ್ ಎರಡನೇ ಮಗನಿಗೆ ನಿರ್ದೇಶಕರು ಪಕ್ಕಾ ಆಯ್ತು


ವಿಕ್ರಮ್‌ಗೆ ಆಕ್ಷನ್ ಕಟ್ ಹೇಳಲಿರುವುದು 'ಮಾಸ್ತಿಗುಡಿ', ಮೈನಾ, ಸಂಜು ವೆಡ್ಸ್ ಗೀತಾ ಸಿನಿಮಾಗಳ ಯಶಸ್ವಿ ನಿರ್ದೇಶಕ ನಾಗಶೇಖರ್. ಈ ಸಿನಿಮಾ ದ್ವಿಭಾಷಾ ಚಿತ್ರವಾಗಿದ್ದು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಸೆಟ್ಟೇರಲಿದೆ.

ಈಗಾಗಲೆ ಚಿತ್ರಕಥೆಯನ್ನು ರವಿಚಂದ್ರನ್ ಒಪ್ಪಿದ್ದು ಇನ್ನೇನು ಸೆಟ್ಟೇರುವುದೊಂದು ಬಾಕಿ ಉಳಿದಿದೆ. ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಸಿನಿಮಾದ ಶೂಟಿಂಗ್ ಆಗಸ್ಟ್‌ನಲ್ಲಿ ಆರಂಭವಾಗಲಿದೆ ಎನ್ನುತ್ತಿವೆ ಮೂಲಗಳು. ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಈಗ 'ಸಾಹೇಬ' ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌