ಆ್ಯಪ್ನಗರ

ಮಧ್ಯರಾತ್ರಿಯಿಂದಲೇ ನಟಸಾರ್ವಭೌಮ ಆರ್ಭಟ ಶುರು

ಕ್ಲಾಸ್‌ ಮತ್ತು ಮಾಸ್‌ ಅಭಿಮಾನಿಗಳನ್ನು ಹೊಂದಿರುವ ಪುನೀತ್‌ರಾಜ್‌ಕುಮಾರ್‌ ಅವರ ಕರಿಯರ್‌ನಲ್ಲಿ ಮಧ್ಯರಾತ್ರಿ 12ಕ್ಕೆ ಪ್ರದರ್ಶನಗೊಳ್ಳುತ್ತಿರುವ ಮೊದಲ ಚಿತ್ರ ಇದಾಗಿದೆ.

Vijaya Karnataka 5 Feb 2019, 8:47 am
ಪವನ್‌ ಒಡೆಯರ್‌ ಆ್ಯಕ್ಷನ್‌ ಕಟ್‌ ಹೇಳಿರುವ ನಟ ಸಾರ್ವಭೌಮ ಚಿತ್ರದ ಮೊದಲ ಶೋ ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12ಕ್ಕೆ ಆಗಲಿದೆ.
Vijaya Karnataka Web Puneet 1200


ಕ್ಲಾಸ್‌ ಮತ್ತು ಮಾಸ್‌ ಅಭಿಮಾನಿಗಳನ್ನು ಹೊಂದಿರುವ ಪುನೀತ್‌ರಾಜ್‌ಕುಮಾರ್‌ ಅವರ ಕರಿಯರ್‌ನಲ್ಲಿ ಮಧ್ಯರಾತ್ರಿ 12ಕ್ಕೆ ಪ್ರದರ್ಶನಗೊಳ್ಳುತ್ತಿರುವ ಮೊದಲ ಚಿತ್ರ ಇದಾಗಿದೆ. ಈಗಾಲೇ ಬೆಂಗಳೂರಿನ ಊರ್ವಶಿ ಚಿತ್ರಮಂದಿರದ ಬೆಳಗಿನ 4 ಗಂಟೆಯ ಶೋದ ಎಲ್ಲ ಟಿಕೇಟುಗಳನ್ನು ಒಬ್ಬನೇ ಅಭಿಮಾನಿ ಕೊಂಡುಕೊಂಡಿದ್ದಾರೆ. ಈ ಬಗ್ಗೆ ಪುನೀತ್‌ ಸಹ ಸಂತಸ ಮತ್ತು ಆ ಅಭಿಮಾನಿಗೆ ಧನ್ಯವಾದ ಅರ್ಪಿಸಿದ್ದರು.ಈಗ ಸಿಕ್ಕಿರುವ ಮಾಹಿತಿ ಎಂದರೆ ಸಿನಿಮಾದ ಪ್ರದರ್ಶನ ಗುರುವಾರ ಮಧ್ಯರಾತ್ರಿ 12ಕ್ಕೆ ಆರಂಭವಾಗುತ್ತದೆ.

ವಿಶೇಷ ಎಂದರೆ 12ರಿಂದ ಮರುದಿನ ರಾತ್ರಿ 12ರವರೆಗೆ ಶೋ ನಡೆಯಲಿದೆ. ಈಗಾಗಲೇ ಇದರ ಬುಕ್ಕಿಂಗ್‌ಗಳು ಆರಂಭವಾಗಿದ್ದು, ಜನ ಮುಗಿಬಿದ್ದು ಟಿಕೇಟ್‌ ಖರೀದಿಸುತ್ತಿದ್ದಾರೆ. ದಕ್ಷಿಣ ಭಾರತದ ಇತಿಹಾಸದಲ್ಲಿಯೇ ಬರೋಬ್ಬರಿ 24 ಗಂಟೆಗಳ ಕಾಲ ಪ್ರದರ್ಶನ ಕಾಣಲಿರುವ ಮೊದಲ ಚಿತ್ರ ನಟಸಾರ್ವಭೌಮ ಆಗಲಿದೆ. ಈ ಸಿನಿಮಾದಲ್ಲಿ ಪುನೀತ್‌ ಫೋಟೋ ಜರ್ನಲಿಸ್ಟ್‌ ರೋಲ್‌ನಲ್ಲಿ ಮಿಂಚಿದ್ದಾರೆ. ಪುನೀತ್‌ಗೆ ರಚಿತಾ ರಾಮ್‌ ಮತ್ತು ಅನುಪಮಾ ಪರಮೇಶ್ವರನ್‌ ಜೋಡಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌