ಕುತೂಹಲ ಮೂಡಿಸುವ ಪಾತ್ರದಲ್ಲಿ ನೇಹಾ
ನೇಹಾ ಪಾಟೀಲ್ ಮತ್ತೆ ಸುದ್ದಿಯಲ್ಲಿದ್ದಾರೆ ಗರ ಸಿನಿಮಾದಲ್ಲಿ ಅವರು ವಿಭಿನ್ನವಾದ ಪಾತ್ರ ಮಾಡಿದ್ದಾರೆ..
Vijaya Karnataka 16 Jan 2019, 5:00 am
ನೇಹಾ ಪಾಟೀಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಗರ ಸಿನಿಮಾದಲ್ಲಿ ಅವರು ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಪಾತ್ರದ ಬಗ್ಗೆ ಅವರು ಹೇಳುವುದು ಹೀಗೆ, 'ನನ್ನ ಪಾತ್ರ ಎಂಟ್ರಿ ಕೊಟ್ಟ ನಂತರ ಕಥೆಯಲ್ಲಿ ಒಂದಷ್ಟು ತಿರುವುಗಳು ಸಿಗುತ್ತವೆ. ಆ ಪಾತ್ರ ಯಾಕೆ ಬಂತು, ಇವಳಿಂದ ಇದೆಲ್ಲ ಆಗುವುದಕ್ಕೆ ಸಾಧ್ಯವಾ ಎಂದು ಅಚ್ಚರಿ ಮೂಡಿಸುವಂಥ ಪಾತ್ರ ಅದಾಗಿದೆ. ಮೊದಲ ಬಾರಿಗೆ ನಾನು ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ' ಎಂದಿದ್ದಾರೆ ನೇಹಾ.
ನಿಶ್ಚಿತಾರ್ಥದ ನಂತರ ಇವರು ಮತ್ತೆ ಸಿನಿಮಾದಲ್ಲಿ ನಟಿಸಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಅದೆಲ್ಲವೂ ಸುಳ್ಳು ಅಂತಾರೆ. ಒಳ್ಳೆಯ ಪಾತ್ರ ಸಿಕ್ಕರೆ ಮತ್ತು ಕಥೆ ಉತ್ತಮವಾಗಿದ್ದರೆ ನಾನು ನಟಿಸುತ್ತೇನೆ ಎನ್ನುವುದು ನೇಹಾ ಮಾತು.
ಸಿನಿಮಾ ನಟನೆಯ ನಂತರ ಇವರು ಧಾರಾವಾಹಿ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ಕಿರುತೆರೆಯಲ್ಲಿ ಈಗಲೂ ಸಾಕಷ್ಟು ಅವಕಾಶಗಳು ಬರುತ್ತಿದ್ದರೂ, ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರಂತೆ.
'ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಇನ್ನೆರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಕಥೆಗಳನ್ನು ಕೇಳುತ್ತಲೇ ಇದ್ದೇನೆ. ಹೀಗೆ ಜೀವನ ಸಾಗಿದೆ' ಎಂದಿದ್ದಾರೆ ನೇಹಾ.