ಆ್ಯಪ್ನಗರ

ನಿಖಿಲ್‌ ಕಲ್ಯಾಣಕ್ಕೆ ಸಿದ್ಧತೆ

ನಿಖಿಲ್‌ ಕುಮಾರ್‌ ನಟನೆಯ 'ಸೀತಾರಾಮ ಕಲ್ಯಾಣ' ಸಿನಿಮಾದ ಶೂಟಿಂಗ್‌ಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ...

Vijaya Karnataka 29 Nov 2017, 5:00 am

ನಿಖಿಲ್‌ ಕುಮಾರ್‌ ನಟನೆಯ 'ಸೀತಾರಾಮ ಕಲ್ಯಾಣ' ಸಿನಿಮಾದ ಶೂಟಿಂಗ್‌ಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲವು ಗೊಂದಲಗಳಿಗೆ ತೆರೆ ಎಳೆಯುವ ಮೂಲಕ ಶೂಟಿಂಗ್‌ಗೆ ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕ ಹರ್ಷ. ಈ ಚಿತ್ರದ ಟೈಟಲ್‌ ಕೇಳಿದವರು ಇದೊಂದು ಪೌರಾಣಿಕ ಸಿನಿಮಾನಾ ಎಂಬ ಪ್ರಶ್ನೆ ಎತ್ತಿದ್ದರು. ಆದರೆ, ಇದು ಪೌರಾಣಿಕ ಸಿನಿಮಾ ಅಲ್ಲವಂತೆ.

Vijaya Karnataka Web nikhil kumar ready for new movie
ನಿಖಿಲ್‌ ಕಲ್ಯಾಣಕ್ಕೆ ಸಿದ್ಧತೆ


ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಮೂಡಿ ಬರುತ್ತಿರುವ ಚಿತ್ರವಂತೆ. ಅಲ್ಲದೇ, ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಬ ಮಾತು ಕೇಳಿ ಬಂದಿತ್ತು. ಅದಕ್ಕೂ ಉತ್ತರ ಕೊಟ್ಟಿದ್ದಾರೆ ನಿರ್ದೇಶಕರು. ಇದೊಂದು ಕಾಲ್ಪನಿಕ ಕತೆಯಂತೆ. ಅಲ್ಲದೇ, ಕ್ಯೂಟ್‌ ಲವ್‌ಸ್ಟೋರಿಯನ್ನು ಈ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು.

ಡಿ.10ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಇಂದು ಚಿತ್ರಕ್ಕೆ ಮುಹೂರ್ತ. ಹಲವು ವಿಶೇಷತೆಗಳು ಈ ಸಿನಿಮಾದಲ್ಲಿ ಇವೆಯಂತೆ. ದಕ್ಷಿಣ ಭಾರತದ ಖ್ಯಾತ ನಟ ಶರತ್‌ ಕುಮಾರ್‌ ಸೇರಿದಂತೆ ಹೆಸರಾಂತ ಕಲಾವಿದರು ತಾರಾಗಣದಲ್ಲಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌