ಆ್ಯಪ್ನಗರ

Seetharama Kalyana: ಜ.25ಕ್ಕೆ ತೆರೆಗೆ, 400 ಚಿತ್ರಮಂದಿರಗಳಲ್ಲಿ 'ಕಲ್ಯಾಣ'

ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಜೋಡಿಯ ಸೀತಾರಾಮ ಕಲ್ಯಾಣ ಸಿನಿಮಾ ಇದೇ ಜನವರಿ 25ರಂದು ತೆರೆಕಾಣುತ್ತಿದೆ. ಈಗಾಗಲೆ ಸೆನ್ಸಾರ್‌ನಿಂದ ಸಿನಿಮಾ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಒಟ್ಟು 400 ಚಿತ್ರಮಂದಿರಗಳಲ್ಲಿ 'ಸೀತಾರಾಮ ಕಲ್ಯಾಣ' ನಡೆಯಲಿದೆ.

Vijaya Karnataka Web 16 Jan 2019, 5:28 pm
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿರುವ 'ಸೀತಾರಾಮ ಕಲ್ಯಾಣ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಸೆನ್ಸಾರ್‌ನಲ್ಲಿ ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದ್ದು ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ.

ಎ ಹರ್ಷ ನಿರ್ದೇಶನದ ಈ ಸಿನಿಮಾ ಇದೇ ಜನವರಿ 25ಕ್ಕೆ ತೆರೆಗೆ ಬರುತ್ತಿದೆ. ನಿಖಿಲ್ ಕುಮಾರ್ ಅಭಿನಯದ ಎರಡನೇ ಸಿನಿಮಾ ಇದು. ಒಟ್ಟು 400 ಚಿತ್ರಮಂದಿರಗಳಲ್ಲಿ 'ಸೀತಾರಾಮ ಕಲ್ಯಾಣ' ನಡೆಯಲಿದೆ. ರಾಜ್ಯದಲ್ಲೇ 300 ತೆರೆಗಳನ್ನು ಈ ಸಿನಿಮಾ ಅಲಂಕರಿಸುತ್ತಿದೆ ಎಂಬುದು ವಿಶೇಷ.

'ಜಾಗ್ವಾರ್' ಬಳಿಕ ನಿಖಿಲ್ ಅಭಿನಯದ ಚಿತ್ರ ಇದು. ಇನ್ನು ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳು ಇವೆ. ಇದೊಂದು ಪಕ್ಕಾ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಬಾಲಿವುಡ್ ಸೇರಿದಂತೆ ದಕ್ಷಿಣದ ಹಲವಾರು ತಾರೆಗಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅನೂಪ್ ರೂಬೇನ್ ಸಂಗೀತ ಜೆ ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ.

ರಚಿತಾ ರಾಮ್ ನಾಯಕಿಯಾದರೆ ತಾರಾಗಣದಲ್ಲಿ ಶಾರ್ಮಿಳಾ ಮಾಂಡ್ರೆ, ಮಾನ್ವಿತಾ ಕಾಮತ್ (ಮಾನ್ವಿತಾ ಹರೀಶ್) ಹಾಗೂ ಆಶಿಕಾ ರಂಗನಾಥ್, ಶರತ್‌ಕುಮಾರ್‌, ಸಾಧು ಕೋಕಿಲಾ, ಚಿಕ್ಕಣ್ಣ ಸೇರಿದಂತೆ ಅನುಭವಿ ಕಲಾವಿದರೇ ಚಿತ್ರದಲ್ಲಿದ್ದಾರೆ. 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ ಅಪ್ಪಟ ಹಳ್ಳಿ ಹುಡುಗಿ. ಅಯೋಗ್ಯ ಸಿನಿಮಾದ ನಂತರ ಅವರು ಮತ್ತೆ ಈ ಬಗೆಯ ಪಾತ್ರ ಪೋಷಿಸಿದ್ದಾರೆ.

ಚಿತ್ರದಲ್ಲಿ ರಚಿತಾ ತುಂಬಾ ನಾಚುವಂತಹ ಹುಡುಗಿಯಾಗಿ ಕಾಣಿಸಲಿದ್ದಾರೆ. ಎಂಥವರೇ ಆಗಿರಲಿ ಒಂದು ಸಿಂಪತಿ ಮೂಡಿ ಬಿಡಬೇಕು, ಅಷ್ಟು ಮುಗ್ಧತೆ ಅವಳ ಮುಖದಲ್ಲಿ. ಹಾಗಾಗಿ ರಚಿತಾ ಅವರಿಗೆ ಒಂದು ರೀತಿಯಲ್ಲಿ ಖುಷಿಕೊಟ್ಟ ಪಾತ್ರ ಅದಾಗಿದೆ. ಹೀಗಾಗಿ ಪಾತ್ರ ನನಗೆ ತುಂಬಾ ಇಷ್ಟವಾಗಿದೆ ಎಂದು ರಚಿತಾ ತಿಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌