ಆ್ಯಪ್ನಗರ

ಫಿಟ್‌ನೆಸ್‌ ನಂತರ ಈಗ ಗಿಡ ನೆಡುವ, ಮರ ಉಳಿಸುವ ಚಾಲೆಂಜ್‌

ಈಗ ಎಲ್ಲೆಲ್ಲೂ ಚಾಲೆಂಜ್‌ಗಳದ್ದೇ ಹವಾ. ಫಿಟ್‌ನೆಸ್‌ ಚಾಲೆಂಜ್‌ ನಂತರ ಗಿಡ ನೆಡುವ ಸವಾಲು ಶುರುವಾಗಿದೆ. ಪ್ಲಾಂಟ್‌ ಎ ಟ್ರೀ ಮತ್ತು ಹಗ್‌ ಎ ಟ್ರೀ ಚಾಲೆಂಜ್‌ಗಳನ್ನು ಕೂಡಾ ಮಾಡಿ ಇನ್ನೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

Vijaya Karnataka 18 Jun 2018, 5:00 am
ಈಗ ಎಲ್ಲೆಲ್ಲೂ ಚಾಲೆಂಜ್‌ಗಳದ್ದೇ ಹವಾ. ಫಿಟ್‌ನೆಸ್‌ ಚಾಲೆಂಜ್‌ ನಂತರ ಗಿಡ ನೆಡುವ ಸವಾಲು ಶುರುವಾಗಿದೆ. ಪ್ಲಾಂಟ್‌ ಎ ಟ್ರೀ ಮತ್ತು ಹಗ್‌ ಎ ಟ್ರೀ ಚಾಲೆಂಜ್‌ಗಳನ್ನು ಕೂಡಾ ಮಾಡಿ ಇನ್ನೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.
Vijaya Karnataka Web nabha


ಪದ್ಮಾ ಶಿವಮೊಗ್ಗ


ಫಿಟ್‌ನೆಸ್‌ ಚಾಲೆಂಜ್‌ ದೇಶಾದ್ಯಂತ ಧೂಳೆಬ್ಬಿಸುತ್ತಿರುವ ಬೆನ್ನಲ್ಲೇ ಇದೀಗ ಹೊಸ ಹೊಸ ಬಗೆಯ ಚಾಲೆಂಜ್‌ಗಳು ಹುಟ್ಟಿಕೊಳ್ಳುತ್ತಿವೆ. ಅದು ಉತ್ತಮ ಉದ್ದೇಶಕ್ಕಾಗಿ.. ಅದೇ ಸಾಲಿಗೆ ಇದೀಗ ಪ್ಲಾಂಟ್‌ ಎ ಟ್ರಿ (p್ಝa್ಞಠಿ a ಠ್ಟಿಛಿಛಿ) ಚಾಲೆಂಜ್‌ ಸದ್ದು ಮಾಡುತ್ತಿದೆ.

ಕಿಚ್ಚ ಸುದೀಪ್‌ ಪೈಲ್ವಾನ್‌ ಚಿತ್ರದಲ್ಲಿ ನಟಿಸುತ್ತಿದ್ದು, ಪೈಲ್ವಾನ್‌ಇನ್‌ಯು ಚಾಲೆಂಜ್‌ ಮಾಡಿದ್ದರು. ಇದಕ್ಕೆ ಅಭಿಮಾನಿಗಳು ನಟರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಹಗ್‌ ಎ ಟ್ರೀ (ಮರ ಅಪ್ಪಿಕೋ) ಚಾಲೆಂಜ್‌ ಶುರುವಾಗಿದೆ. ಇನ್ನೂ ಕೆಲವು ಇನ್ನೂ ಅರ್ಥಪೂರ್ಣವಾಗಿ ಪ್ಲಾಂಟ್‌ ಎ ಟ್ರೀ ಚಾಲೆಂಜ್‌ ಹಾಕುತ್ತಿದ್ದಾರೆ. ಈ ಚಾಲೆಂಜ್‌ಗಳನ್ನು ಸ್ಯಾಂಡಲ್‌ವುಡ್‌ ಸೇರಿದಂತೆ ದೇಶದಾದ್ಯಂತ ಸಿಲೆಬ್ರಿಟಿಗಳು ಅಕ್ಸೆಪ್ಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಜತೆಗೆ ಮೆಸೇಜ್‌ ಹಾಕಿ ಇತರರನ್ನು ಟ್ಯಾಗ್‌ ಮಾಡುತ್ತಿದ್ದಾರೆ.

ಹಗ್‌ಎಟ್ರೀ ಚಾಲೆಂಜ್‌ ಮಾಡಿರುವ ನಭಾ ನಟೇಶ್‌ ಮರವನ್ನು ಅಪ್ಪಿಕೊಂಡಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದರ ಜತೆ 'ಮರಗಳು ನಮ್ಮ ಬೆಸ್ಟ್‌ ಫ್ರೆಂಡ್ಸ್‌. ನಮ್ಮನ್ನು ಹೆಚ್ಚು ಕಾಪಾಡುತ್ತವೆ. ನಾವೂ ಕೂಡಾ ಮರಗಳನ್ನು ಕಾಪಾಡಬೇಕಿದೆ. ಅವುಗಳ ಬಗ್ಗೆ ನಮ್ಮ ಪ್ರೀತಿಯನ್ನು ತೋರಿಸೋಣ, ಅಪ್ಪಿಕೊಳ್ಳೋಣ' ಎಂದು ಮೆಸೇಜ್‌ ಹಾಕಿದ್ದಾರೆ. ತೆಲುಗು ನಟ ಸುಧೀರ್‌ ಬಾಬು, ನಟ ನಿರೂಪ್‌ ಭಂಡಾರಿ, ನಟಿ ಮಾನ್ವಿತಾ ಹರೀಶ್‌ ಮತ್ತಿತರ ಮಾಧ್ಯವದವನ್ನೂ ಅವರು ಟ್ಯಾಗ್‌ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಕೃತಿ ಕರಬಂಧ ಕೂಡಾ ಮರವನ್ನು ಅಪ್ಪಿಕೊಂಡು ಫೋಟೋ ಅಪ್‌ಲೋಡ್‌ ಮಾಡಿದ್ದಾರೆ. ತೆಲುಗು ನಟ ಸುಮಂತ್‌ ಹಾಕಿದ ಚಾಲೆಂಜ್‌ ಸ್ವೀಕರಿಸಿದ ಕೃತಿ ತಮ್ಮ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಸುಮಂತ್‌ ತಮ್ಮ ಪ್ರೀತಿಯ ನಾಯಿಯ ಜತೆ ಮರವನ್ನು ಅಪ್ಪಿಕೊಂಡಿದ್ದಾರೆ.

ದಕ್ಷಿಣ ಭಾರತದ ಜನಪ್ರಿಯ ನಟ ರಾಣಾ ದಗ್ಗುಬಾಟಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. 'ಹಗ್‌ ಎ ಟ್ರೀ. ಇದು ಅವುಗಳ ಪ್ಲಾನೆಟ್‌. ನಾವು ಅವರ ಜಾಗದಲ್ಲಿ ಜೀವಿಸುತ್ತಿದ್ದೇವೆ' ಎಂದು ಟ್ವೀಟ್‌ ಮಾಡಿದ್ದಾರೆ.

ನಟ ವಿಜಯ ಸೂರ್ಯ ಗಿಡವೊಂದನ್ನು ತಮ್ಮ ಮನೆಯ ಮುಂದೆ ನೆಟ್ಟು ಪರಿಸರ ಪ್ರೇಮವನ್ನು ತೋರಿದ್ದಾರೆ. 'ನಿಮ್ಮ ಗಿಡ ನಮ್ಮ ಮನೆ ಮುಂದೆ' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌