ಆ್ಯಪ್ನಗರ

ಬಾಲಕಿಯ ಓದಿಗೆ ನೆರವಾದ ಒಳ್ಳೆ ಹುಡುಗ ಪ್ರಥಮ್‌

ಆ ಹುಡುಗಿಯ ಕುಟುಂಬ ಸ್ಥಿತಿಗತಿ ನೋಡಿದೆ. ಪಿಯುಸಿಯಲ್ಲಿ ಶೇ.92 ಅಂಕ ತೆಗೆದಿದ್ದಾರೆ. ಆದರೆ, ಫೀಸ್‌ ಕಟ್ಟಲು ಹಣವಿಲ್ಲದ ಕಾರಣಕ್ಕಾಗಿ ಓದನ್ನು ಮೊಟುಕುಗೊಳಿಸುವುದಾಗಿ ಹೇಳಿದರು. ಕೂಡಲೇ ಅವರ ಬಳಿ ಹೋಗಿ ಸಹಾಯ ಮಾಡಿಬಂದೆ' ಎನ್ನುತ್ತಾರೆ ಪ್ರಥಮ್‌.

Vijaya Karnataka 8 May 2019, 7:30 pm
ನಿರ್ದೇಶಕ, ನಟ ಪ್ರಥಮ್‌, ಈಗಾಗಲೇ ರಿಯಾಲಿಟಿ ಶೋನಿಂದ ಬಂದ ಹಣವನ್ನು ತಮ್ಮೂರಿನ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ. ಅಲ್ಲದೇ, ಅನಾಥ ಮಕ್ಕಳ ಆಸರೆಗೆ ಖರ್ಚು ಮಾಡಿದ್ದಾರೆ. ಈ ಬಾರಿ ಬಡ ಹುಡುಗಿಯ ಶಿಕ್ಷಣಕ್ಕಾಗಿ ನೆರವಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಹಲಗಾಪೂರ ಗ್ರಾಮದ ಕೂಲಿ ಕಾರ್ಮಿಕರ ಮಗಳು ಮೇಘಾಳ ಪದವಿ ಶಿಕ್ಷಣಕ್ಕಾಗಿ ಪ್ರಥಮ್‌ ಸಹಾಯ ಹಸ್ತ ಚಾಚಿದ್ದು, ಪದವಿ ಶಿಕ್ಷಣ ಮುಗಿಯುವ ತನಕ ಆ ಹುಡುಗಿಯ ಓದಿನ ಜವಾಬ್ದಾರಿ ಹೊತ್ತಿದ್ದಾರೆ.
Vijaya Karnataka Web pratham1


'ನಮ್ಮ ತಂದೆ ಸತತವಾಗಿ ಫೋನ್‌ ಕಾಲ್‌ ಮಾಡುತ್ತಿದ್ದರು. ಅವರು ಮದುವೆಗೆ ಒತ್ತಾಯಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಕಾಲ್‌ ರಿಸೀವ್‌ ಮಾಡಲಿಲ್ಲ. ಆಮೇಲೆ ಗೊತ್ತಾಯಿತು ಅವರು ಫೋನ್‌ ಮಾಡಿದ್ದು ಮೇಘಾ ಎನ್ನುವ ಹುಡುಗಿಗಾಗಿ ಎಂದು. ಆ ಹುಡುಗಿಯ ಕುಟುಂಬ ಸ್ಥಿತಿಗತಿ ನೋಡಿದೆ. ಪಿಯುಸಿಯಲ್ಲಿ ಶೇ.92 ಅಂಕ ತೆಗೆದಿದ್ದಾರೆ. ಆದರೆ, ಫೀಸ್‌ ಕಟ್ಟಲು ಹಣವಿಲ್ಲದ ಕಾರಣಕ್ಕಾಗಿ ಓದನ್ನು ಮೊಟುಕುಗೊಳಿಸುವುದಾಗಿ ಹೇಳಿದರು. ಕೂಡಲೇ ಅವರ ಬಳಿ ಹೋಗಿ ಸಹಾಯ ಮಾಡಿಬಂದೆ' ಎನ್ನುತ್ತಾರೆ ಪ್ರಥಮ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌