ಆ್ಯಪ್ನಗರ

Yajamana Ticket Booking: ಒಂದು ವಾರಕ್ಕೂ ಮುನ್ನವೇ 'ಯಜಮಾನ' ಆನ್‍ಲೈನ್ ಟಿಕೆಟ್

'ಮಾ.1ರಂದು ಯಜಮಾನ ಚಿತ್ರ ರಿಲೀಸ್‌ ಆಗುತ್ತಿದೆ. ಅದಕ್ಕೂ ಮುನ್ನ ವೀಕೆಂಡ್‌ನಲ್ಲಿ ಟಿಕೆಟ್‌ ಸಿಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಲಭ್ಯ ಇರಲಿವೆ' ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್‌.

Vijaya Karnataka 19 Feb 2019, 5:46 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಟ್ರೇಲರ್‌ನಲ್ಲೇ ಸಿನಿಮಾ ಏನು ಎಂಬುದು ಅರ್ಥವಾಗಿದೆ. ಇದೇ ಮಾರ್ಚ್ 1ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ. ಹಾಗಾಗಿ ದರ್ಶನ್‌ ನಟನೆಯ 'ಯಜಮಾನ' ಸಿನಿಮಾ ಸಖತ್‌ ಹವಾ ಕ್ರಿಯೇಟ್‌ ಮಾಡಿದೆ.
Vijaya Karnataka Web yajamana


ಒಂದು ವಾರ ಮುಂಚೆಯೇ ಆನ್‌ಲೈನ್‌ನಲ್ಲಿ ಟಿಕೆಟ್‌ ಸಿಗುವಂತೆ ಮಾಡಬೇಕೆಂದು ನಿರ್ಮಾಪಕರ ಮೇಲೆ ಅಭಿಮಾನಿಗಳು ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ಒಂದು ವಾರ ಮುಂಚೆ ಆನ್‌ಲೈನ್‌ ಟಿಕೆಟ್‌ ಸಿಗುವುದಾಗಿ ಚಿತ್ರತಂಡ ಹೇಳಿದೆ.

'ಮಾ.1ರಂದು ಯಜಮಾನ ಚಿತ್ರ ರಿಲೀಸ್‌ ಆಗುತ್ತಿದೆ. ಅದಕ್ಕೂ ಮುನ್ನ ವೀಕೆಂಡ್‌ನಲ್ಲಿ ಟಿಕೆಟ್‌ ಸಿಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಲಭ್ಯ ಇರಲಿವೆ' ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್‌.

ಒಂದೂವರೆ ವರ್ಷದ ನಂತರ ದರ್ಶನ್‌ ಸಿನಿಮಾ ರಿಲೀಸ್‌ ಆಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಅಲ್ಲದೇ, ಟ್ರೇಲರ್‌ ಕೂಡ ಟ್ರೆಂಡ್‌ ಸೆಟ್‌ ಮಾಡಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ದರ್ಶನ್‌ ಜತೆ ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ಧನಂಜಯ್‌ ಸೇರಿದಂತೆ ಹೆಸರಾಂತ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ.

ಈಗಾಗಲೆ ಯಜಮಾನ ಟ್ರೇಲರ್ 1.67 ಕೋಟಿ ವೀಕ್ಷಣೆ ಪಡೆದಿದೆ. ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಿಸಿರುವ ಈ ಚಿತ್ರವನ್ನು ವಿ ಹರಿಕೃಷ್ಣ ನಿರ್ದೇಶಿಸಿದ್ದು ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಿಸಿದ್ದಾರೆ. ಸಂಗೀತದ ಜವಾಬ್ದಾರಿಯನ್ನೂ ವಿ ಹರಿಕೃಷ್ಣ ಹೊತ್ತಿರುವುದು ವಿಶೇಷ. ತಾರಾಗಣದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ಧನಂಜಯ್, ರವಿಶಂಕರ್, ಸಾಧು ಕೋಕಿಲ, ಮಂಡ್ಯ ರಮೇಶ್ ಮತ್ತು ದತ್ತಣ್ಣ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌