ಆ್ಯಪ್ನಗರ

ಐಎಂಡಿಬಿ ಟಾಪ್ 10 ಕನ್ನಡ ಸಿನಿಮಾಗಳಲ್ಲಿ 'ಆಪರೇಷನ್ ನಕ್ಷತ್ರ'

ಬಿಡುಗಡೆಗೂ ಮುನ್ನವೇ ಹೊಸಬರ ಆಪರೇಷನ್ ನಕ್ಷತ್ರ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾ ಇಂಟರ್‌ನೆಟ್ ಮೂವಿ ಡೇಟಾ ಬೇಸ್‌ನಲ್ಲಿ (ಐಎಂಡಿಬಿ) ಸ್ಥಾನ ಪಡೆದಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಧುಸೂಧನ್.ಕೆ.ಆರ್.

Vijaya Karnataka Web 9 Jul 2019, 6:30 pm
ಒಂದಷ್ಟು ಸಿನಿಮಾಗಳು ಬಿಡುಗಡೆ ಮುಂಚೆಯೇ ಸದ್ದು ಮಾಡುತ್ತವೆ. ಆ ಸಾಲಿಗೆ 'ಆಪರೇಶನ್ ನಕ್ಷತ್ರ' ಚಿತ್ರವು ಸೇರ್ಪಡೆಯಾಗಿದೆ. ಇಂಟರ್‍ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ) ಸಂಸ್ಥೆಯು ಈ ವರ್ಷದಲ್ಲಿ ಹತ್ತು ಕನ್ನಡ ಚಿತ್ರಗಳನ್ನು ಉತ್ತಮ ಸಿನಿಮಾವೆಂದು ಹೇಳಿಕೊಂಡಿದ್ದು, ಅದರಲ್ಲಿ ಈ ಸಿನಿಮಾ ಸಹ ಸೇರಿದೆ.
Vijaya Karnataka Web operation-nakshatra


ಎರಡನೆಯದಾಗಿ ಟೀಸರ್, ಟ್ರೈಲರ್ ವೀಕ್ಷಿಸಿರುವ ಟಾಲಿವುಡ್ ನಿರ್ಮಾಪಕರೊಬ್ಬರು ರಿಮೇಕ್ ಮಾಡಲು ಉತ್ಸುಕರಾಗಿದ್ದು, ಸದ್ಯದಲ್ಲೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಇಂತಹ ಸಕರಾತ್ಮಕ ಬೆಳವಣಿಗೆಯಿಂದ ಐವರು ನಿರ್ಮಾಪಕ, ನಿರ್ದೇಶಕರಿಗೆ ಖುಷಿ ತಂದುಕೊಟ್ಟಿದೆ. ಸಿನಿಮಾ ಕುರಿತು ಹೇಳುವುದಾದರೆ ನಾವು ಒಬ್ಬರಿಗೆ ಯಾಮಾರಿಸಿದರೆ, ಬೇರೆಯವರಿಂದ ನಾವುಗಳು ಯಾವ ರೀತಿ ಮೋಸ ಹೋಗುತ್ತೇವೆ. ಎಲ್ಲಿಯವರೆವಿಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ಇದೆಲ್ಲವೂ ನಡೆಯುತ್ತಲೇ ಇರುತ್ತದೆ. ನಿಸ್ವಾರ್ಥ ಮುಖವಾಡಗಳ ಮಧ್ಯೆ ಸ್ವಾರ್ಥ ಮನಸ್ಸು ಇದ್ದವರಿಗೆ ದುಡ್ಡು ಬಂದಾಗ ಏನಾಗುತ್ತಾರೆ ಎಂಬುದು ಸಿನಿಮಾದ ಸಾರಾಂಶ. [ಸದ್ದಿಲ್ಲದೆ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ ಯಜ್ಞಾ ಶೆಟ್ಟಿ]

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ಮಧುಸೂಧನ್.ಕೆ.ಆರ್. ಮೈಂಡ್ ಗೇಮ್ ಕತೆಯಲ್ಲಿ ನಾಲ್ಕು ಪಾತ್ರಗಳು ಜೀವಾಳವಾಗಿದೆ. ಕೆಲವೊಂದು ಘಟನೆಗಳು ಅವರ ಬದುಕಿನಲ್ಲಿ ಬಂದಾಗ, ಅವರುಗಳ ಮನಸ್ಥಿತಿ ಹೇಗಿರುತ್ತದೆ. ಇದನ್ನು ಯಾವರೀತಿಯಲ್ಲಿ ಎದುರಿಸುತ್ತಾರೆಂದು ಕಾಲ್ಪನಿಕವಾಗಿತೋರಿಸಲಾಗಿದೆ. ಪೂರ್ಣ ಮನರಂಜನೆ ಇರುವುದರಿಂದ ಸಂದೇಶ ಅಂತ ಇರುವುದಿಲ್ಲವಂತೆ.

ಮುಖ್ಯ ಪಾತ್ರದಲ್ಲಿ ನಿರಂಜನ್ ಒಡೆಯರ್, ಅದಿತಿ ಪ್ರಭುದೇವ, ಯಜ್ಞಾ ಶೆಟ್ಟಿ, ಲಿಖಿತ್ ಸೂರ್ಯ ಇವರೆಲ್ಲರಿಗೂ ಎರಡು ಶೇಡ್‍ಗಳು ಇರಲಿದೆ. ಉಳಿದಂತೆ ಅಮಾಯಕನಾಗಿ ಮೋಸ ಹೋಗುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ಭ್ರಷ್ಟ ಆಯುಕ್ತರಾಗಿ ಪ್ರಶಾಂತ್ ನಟನ, ಶ್ರೀನಿವಾಸಮೂರ್ತಿ, ದೀಪಕ್‍ರಾಜ್ ಶೆಟ್ಟಿ, ವಿಕ್ಟರಿ ವಾಸು ಮುಂತಾದವರು ಅಭಿನಯಿಸಿದ್ದಾರೆ.

ಹಿರಿಯ ಪತ್ರಕರ್ತ ವಿಜಯ ಭರಮಸಾಗರ ಸಾಹಿತ್ಯದ ಎರಡು ಗೀತೆಗಳಿಗೆ ವೀರಸಮರ್ಥ ರಾಗ ಸಂಯೋಜಿಸಿದ್ದು, ಮೊದಲ ಪ್ರಯತ್ನ ಎನ್ನುವಂತೆ ಕ್ರಾಕ್ ಮಾದರಿಯಲ್ಲಿ ಸಂಗೀತ ಒದಗಿಸಿರುವುದು ವಿಶೇಷ. ಛಾಯಾಗ್ರಹಣ ಶಿವಸೀನು, ಸಂಕಲನ ಅರ್ಜುನ್‍ಕಿಟ್ಟು ನಿರ್ವಹಿಸಿದ್ದಾರೆ. ಗೆಳಯರುಗಳಾದ ಎನ್.ನಂದಕುಮಾರ್, ಅರವಿಂದಮೂರ್ತಿ, ಟಿ.ಎಸ್.ರಾಧಕೃಷ್ಣ ಹಾಗೂ ಸಿ.ಎಸ್.ಕಿಶೋರ್ ಮೇಗಳ ಮನೆ ಜಂಟಿಯಾಗಿ ಫೈವ್ ಸ್ಟಾರ್ ಸಂಸ್ಥೆ ಹುಟ್ಟುಹಾಕಿ ಇದರ ಮೂಲಕ ಸಿನಿಮಾಕ್ಕೆ ಹಣ ಹೂಡಿದ್ದಾರೆ. ವಿತರಕ ವಿಜಯ್ ಇದೇ ಶುಕ್ರವಾರದಂದು ಸುಮಾರು ಎಂಬತ್ತು ಕೇಂದ್ರಗಳಲ್ಲಿ ಜನರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌