ಆ್ಯಪ್ನಗರ

ಪಾ ರಂಜಿತ್ ನಿರ್ದೇಶನದಲ್ಲಿ ಸಿಲ್ಕ್ ಸ್ಮಿತಾ ಬಯೋಪಿಕ್

ಇದೀಗ ಸಿಲ್ಕ್ ಸ್ಮಿತಾ ಜೀವನ ಆಧಾರವಾಗಿ ವೆಬ್ ಸೀರೀಸ್ ರೂಪಿಸಲು ಕಾಲಾ, ಕಬಾಲಿ ಸಿನಿಮಾಗಳ ನಿರ್ದೇಶಕ ಪಾ ರಂಜಿತ್ ಸಿದ್ಧತೆ ನಡೆಸಿದ್ದಾರಂತೆ.

Samayam Telugu 17 Aug 2018, 3:05 pm
ಸಿಲ್ಕ್ ಸ್ಮಿತಾ ಜೀವನ ಮತ್ತೊಮ್ಮೆ ಚಿತ್ರರಸಿಕರ ಮುಂದೆ ಬರುತ್ತಿದೆ. ಅವರ ಜೀವನ ಕಥೆಯಾಧಾರಿತವಾಗಿ ತೆರೆಗೆ ಬಂದ 'ಡರ್ಟಿ ಪಿಕ್ಚರ್' ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಸಿಲ್ಕ್ ಸ್ಮಿತಾ ಪಾತ್ರದಲ್ಲಿ ವಿದ್ಯಾ ಬಾಲನ್ ಅಮೋಘವಾಗಿ ನಟಿಸಿದ್ದಾರೆ. ಇದೀಗ ಸಿಲ್ಕ್ ಸ್ಮಿತಾ ಜೀವನ ಆಧಾರವಾಗಿ ವೆಬ್ ಸೀರೀಸ್ ರೂಪಿಸಲು ಕಾಲಾ, ಕಬಾಲಿ ಸಿನಿಮಾಗಳ ನಿರ್ದೇಶಕ ಪಾ ರಂಜಿತ್ ಸಿದ್ಧತೆ ನಡೆಸಿದ್ದಾರಂತೆ.
Vijaya Karnataka Web silk-smitha


ಈ ವೆಬ್ ಸೀರೀಸನ್ನು ಮುಂಬೈ ಮೂಲದ ನಿರ್ಮಾಣ ಸಂಸ್ಥೆಯೊಂದರ ಜತೆಗೆ ಕೈಜೋಡಿಸಿ ನಿರ್ಮಿಸುವುದಾಗಿ ಮೂಲಗಳು ತಿಳಿಸಿವೆ. ಎಪಿಸೋಡ್‍ಗಳ ಲೆಕ್ಕಾಚಾರದಲ್ಲಿ ಈ ವೆಬ್ ಸೀರೀಸನ್ನು ಪ್ರಸಾರ ಮಾಡಲಿದ್ದಾರೆ.

ಸಿಲ್ಕ್ ಸ್ಮಿತಾ ಜೀವನವನ್ನು ಸಂಪೂರ್ಣವಾಗಿ ತೆರೆಗೆ ತರುವುದು ಅಸಾಧ್ಯ. ಆದಕಾರಣ ವೆಬ್ ಸೀರೀಸ್ ರೂಪದಲ್ಲಿ ತೆರೆಗೆ ತರುವುದಾಗಿ ಪಾ ರಂಜಿತ್ ತಿಳಿಸಿದ್ದಾರೆ. ಸದ್ಯಕ್ಕೆ ತಾರಾಬಳಗ, ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಬಿಝಿಯಾಗಿದ್ದಾರೆ. ಶೀಘ್ರದಲ್ಲೇ ವೆಬ್ ಸೀರೀಸ್‌ಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಹೊರಬೀಳಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌