ಆ್ಯಪ್ನಗರ

Parul Yadav: ತಮನ್ನಾ, ಕಾಜಲ್‌ ಮುಂದೆ ಡಾ.ರಾಜ್‌ ಗುಣಗಾನ ಮಾಡಿದ ಪಾರೂಲ್‌

ಕನ್ನಡದ ವರನಟ ಡಾ ರಾಜ್‌ಕುಮಾರ್‌ ಅವರು ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದು ಕರೆಯುತ್ತಿದ್ದರು...

Vijaya Karnataka 23 Jan 2019, 9:46 am
ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರು ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದು ಕರೆಯುತ್ತಿದ್ದರು. ಸಿನಿಮಾ ನೋಡಿ ಪ್ರೋತ್ಸಾಹ ನೀಡುವ ಅಭಿಮಾನಿಗಳನ್ನು ಅವರು ತುಂಬಾ ಪ್ರೀತಿಸಿ ಗೌರವಿಸುತ್ತಿದ್ದರು ಎಂದು ನಟಿಯರಾದ ತಮನ್ನಾ ಭಾಟಿಯಾ ಹಾಗೂ ಕಾಜಲ್‌ ಅಗರಲ್‌ವಾಲ್‌ ಮುಂದೆ ಡಾ. ರಾಜ್‌ ಗುಣಗಾನ ಮಾಡಿದ್ದಾರೆ ನಟಿ ಪಾರುಲ್‌ ಯಾದವ್‌.
Vijaya Karnataka Web Parul


ತಮ್ಮ ಹೊಸ ಚಿತ್ರವೊಂದರ ಚರ್ಚೆಯ ವೇಳೆ ತಮನ್ನಾ ಹಾಗೂ ಕಾಜಲ್‌ ಜತೆ ಕೂತಿದ್ದ ಪಾರುಲ್‌, ಅಣ್ಣಾವ್ರನ್ನು ಸ್ಮರಿಸಿಕೊಂಡಿದ್ದಾರಲ್ಲದೆ, ಅಭಿಮಾನಿಗಳನ್ನು ಯಾವಾಗಲೂ ಅವರದ್ದೇ ಭಾಷೆಯಲ್ಲಿ ಮಾತನಾಡಬೇಕು. ಮಾತೃಭಾಷೆಯನ್ನು ಅಭಿಮಾನದಿಂದ ಮಾತನಾಡಬೇಕು ಎಂದು ರಾಜ್‌ ಅವರು ಸದಾ ಹೇಳುತ್ತಿದ್ದರು. ನಾನು ಅವರ ಮಾತುಗಳನ್ನು ಅಕ್ಷರಶಃ ಪಾಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಪಾರುಲ್‌ ಮಾತಿಗೆ ತಲೆದೂಗಿದ ತಮನ್ನಾ ಮತ್ತು ಕಾಜೋಲ್‌, ನಿಜಕ್ಕೂ ಡಾ.ರಾಜ್‌ ನಮಗೆಲ್ಲರಿಗೂ ಮುಂಬರುವ ಕಲಾವಿದರಿಗೂ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read: ಶಕೀಲಾ ಕ್ಯಾಲೆಂಡರ್‌ನಲ್ಲಿ ರಿಚಾ ಛಡ್ಡಾ ರಾಕಿಂಗ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌