ಆ್ಯಪ್ನಗರ

ನಮ್ಮ ಸಿನಿಮಾದವರನ್ನು ಬಿಟ್ಟು ಬಿಡಿ ಮಿಸ್ಟರ್ ಪಿಎಂ: ಪ್ರಕಾಶ್ ರೈ ಪತ್ನಿ

ನಟ ನಟಿಯರು ಮೋದಿಗೆ 'ನೋ' ಹೇಳಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ನನಗೆ ಅರ್ಥವಾಗಿದೆ ಎಂದಿದ್ದಾರೆ. "ನಮ್ಮ ಚಿತ್ರೋದ್ಯಮವನ್ನು ಬಿಟ್ಟುಬಿಡಿ ಎಂದು ಪ್ರಧಾನಿಯಲ್ಲಿ ವಿನಂತಿಸಿಕೊಂಡಿದ್ದಾರೆ. ನಿಮ್ಮ ಚುನಾವಣೆಗಾಗಿ ನಮ್ಮನ್ನು ಬಳಸಿಕೊಳ್ಳಬೇಡಿ. ನನಗೆ ಅವರ (ಬೆಂಬಲಿಸುತ್ತಿರುವ ನಟ ನಟಿಯರು) ಪರಿಸ್ಥಿತಿ ಅರ್ಥವಾಗಿದೆ. ಅವರಿಗೆ ಇಷ್ಟವಿಲ್ಲದಿದ್ದರೂ, ನಿಮಗೆ ನೋ ಹೇಳಲು ಹೇಗೆ ಸಾಧ್ಯ.

Vijaya Karnataka Web 4 May 2019, 10:46 am
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರೈ ಪತ್ನಿ, ಕೊರಿಯೋಗ್ರಾಫರ್ ಪೋನಿ ವರ್ಮಾ ಟ್ವೀಟ್ ಮಾಡಿದ್ದು, ನಮ್ಮ ಸಿನಿಮಾದವರನ್ನು ನಿಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಮೋದಿಯನ್ನು ಸಂದರ್ಶಿಸಿದ್ದು ಗೊತ್ತೇ ಇದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಚಿತ್ರದೋತ್ಯವನ್ನು ಬಿಟ್ಟುಬಿಡಿ ಎಂದು ಪೋನಿ ವರ್ಮಾ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾರೆ.
Vijaya Karnataka Web pony-varma


ನಟ ನಟಿಯರು ಮೋದಿಗೆ 'ನೋ' ಹೇಳಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ನನಗೆ ಅರ್ಥವಾಗಿದೆ ಎಂದಿದ್ದಾರೆ. "ನಮ್ಮ ಚಿತ್ರೋದ್ಯಮವನ್ನು ಬಿಟ್ಟುಬಿಡಿ ಎಂದು ಪ್ರಧಾನಿಯಲ್ಲಿ ವಿನಂತಿಸಿಕೊಂಡಿದ್ದಾರೆ. ನಿಮ್ಮ ಚುನಾವಣೆಗಾಗಿ ನಮ್ಮನ್ನು ಬಳಸಿಕೊಳ್ಳಬೇಡಿ. ನನಗೆ ಅವರ (ಬೆಂಬಲಿಸುತ್ತಿರುವ ನಟ ನಟಿಯರು) ಪರಿಸ್ಥಿತಿ ಅರ್ಥವಾಗಿದೆ. ಅವರಿಗೆ ಇಷ್ಟವಿಲ್ಲದಿದ್ದರೂ, ನಿಮಗೆ ನೋ ಹೇಳಲು ಹೇಗೆ ಸಾಧ್ಯ. ನೀವು ಕೊನೆಗೆ ಖಾನ್ಸ್ ಜತೆಗೆ ಸಂದರ್ಶನ ಮಾಡಿಕೊಂಡರೂ ಅಚ್ಚರಿಯಿಲ್ಲ. ದಯವಿಟ್ಟು ಅವರನ್ನು ಬಿಟ್ಟುಬಿಡಿ" ಎಂದಿದ್ದಾರೆ ಪೋನಿ ವರ್ಮಾ.

ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರೈ ಸ್ಪರ್ಧಿಸಿದ್ದಾರೆ. ಜನರಿಗೆ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಅವರು ರಾಜಕೀಯಕ್ಕೆ ಬಂದಿದ್ದಾರೆ. ಅವರಿಗೆ ಅವರ ನೋವು ಅರ್ಥವಾಗುತ್ತದೆ ಎಂದು ಪೋನಿ ವರ್ಮಾ ತಮ್ಮ ಗಂಡನನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಅವರು ದತ್ತು ತೆಗೆದುಕೊಂಡಿರುವ ಗ್ರಾಮಗಳಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌