ಆ್ಯಪ್ನಗರ

'ಬಾಹುಬಲಿ' ಪ್ರಭಾಸ್‌ ಜತೆ 'ಕಿರಿಕ್‌ ಪಾರ್ಟಿ' ಸಾನ್ವಿ?

'ಬಾಹುಬಲಿ'ಯಾಗಿ ಮೆರೆಯುತ್ತಿರುವ ಪ್ರಭಾಸ್‌ ಚಿತ್ರದಲ್ಲಿ ಕಿರಿಕ್‌ ಪಾರ್ಟಿ ಸಾನ್ವಿ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬಂದಿವೆ.

ಟೈಮ್ಸ್ ಆಫ್ ಇಂಡಿಯಾ 8 May 2017, 11:13 am
ರಿಷಬ್‌ ಶೆಟ್ಟಿ ನಿರ್ದೇಶನದ 'ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ ಈಗ ಬಹುಬೇಡಿಕೆಯ ನಟಿ. ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್‌ನಿಂದ ಈ ಚೆಲುವೆಗೆ ಸಾಲು ಸಾಲಾಗಿ ಆಫರ್‌ಗಳು ಬರುತ್ತಿವೆ.
Vijaya Karnataka Web prabhas new heroine will it be rashmika
'ಬಾಹುಬಲಿ' ಪ್ರಭಾಸ್‌ ಜತೆ 'ಕಿರಿಕ್‌ ಪಾರ್ಟಿ' ಸಾನ್ವಿ?


ಮೊನ್ನೆಯಷ್ಟೇ ರಕ್ಷಿತ್‌ ಶೆಟ್ಟಿ ಜತೆ ಮದುವೆ ವಿಚಾರವಾಗಿ ಸುದ್ದಿಯಾಗಿದ್ದ ರಶ್ಮಿಕಾ, ಇದೀಗ ಮತ್ತೊಂದು ಕಾರಣಕ್ಕಾಗಿ ಎಲ್ಲರ ಗಮನ ಸೆಳೆದಿದ್ದಾರೆ. ವಿಶ್ವದಾದ್ಯಂತ 'ಬಾಹುಬಲಿ'ಯಾಗಿ ಮೆರೆಯುತ್ತಿರುವ ಪ್ರಭಾಸ್‌ ಚಿತ್ರದಲ್ಲಿ ಕಿರಿಕ್‌ ಪಾರ್ಟಿ ಸಾನ್ವಿ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬಂದಿವೆ. ಪ್ರಭಾಸ್‌ ಚಿತ್ರವೊಂದಕ್ಕೆ ನಾಯಕಿಯಾಗಲು ರಶ್ಮಿಕಾಗೆ ಕರೆ ಬಂದಿದೆಯಂತೆ.

ಈ ಕುರಿತು ರಶ್ಮಿಕಾ ಅವರನ್ನೇ ಕೇಳಿದಾಗ, ಅವರು ತುಟಿಬಿಚ್ಚದೆ ಮೌನಕ್ಕೆ ಶರಣಾದರು. 'ನಾನು ಈಗಲೇ ಏನು ಹೇಳಲಾರೆ. ಎಲ್ಲವೂ ಫೈನಲೈಸ್‌ ಆದಮೇಲಷ್ಟೇ ಈ ಕುರಿತು ಮಾತನಾಡುವೆ' ಎಂದು ಕಿರಿಕ್‌ ಪಾರ್ಟಿ ಚೆಲುವೆ ಹೇಳಿದ್ದಾರೆ. ಸದ್ಯಕ್ಕೆ ಟಾಲಿವುಡ್‌ನ ಎರಡು ಚಿತ್ರಗಳಲ್ಲಿ ರಶ್ಮಿಕಾ ಬಿಝಿಯಾಗಿದ್ದಾರೆ. ತೆಲುಗು ಸ್ಟಾರ್‌ ನಾಗ ಶೌರ್ಯ ಜತೆಗೆ ನಟಿಸುತ್ತಿರುವ ಚಿತ್ರದ ಶೂಟಿಂಗ್‌ ಈಗಾಗಲೇ ಶುರವಾಗಿದೆ. ಇದರ ಜತೆ ರಾಮ್ ಪೊಥಿನೆನಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕೆ ಸಹಿ ಕೂಡ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ಅಂಗಳದಲ್ಲಿಯೂ ಸ್ಟಾರ್‌ ನಟರ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಈ ಸುಂದರಿ, ಸದ್ಯಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ 'ಚಮಕ್‌' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ ರಕ್ಷಿತ್‌ ಶೆಟ್ಟಿ ಜತೆಗಿನ ಮದುವೆ ಸುದ್ದಿ ಕುರಿತು ಮಾತನಾಡಿರುವ ರಶ್ಮಿಕಾ, 'ಸದ್ಯಕ್ಕೆ ಮದುವೆ ಯೋಚನೆ ನನಗಿಲ್ಲ. ನನ್ನ ಎಲ್ಲ ಗಮನ ಕೆಲಸದ ಮೇಲಿದೆ' ಎಂದು ಅಂತೆ-ಕಂತೆಗಳಿಗೆ ಬ್ರೆಕ್‌ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌