ಆ್ಯಪ್ನಗರ

ಗ್ಯಾಂಗ್‌ಸ್ಟರ್‌ ಆಗಿ ಬರಲಿದ್ದಾರೆ ಪ್ರಜ್ವಲ್‌

ಅರ್ಜುನ ಚಿತ್ರದ ನಂತರ ಮತ್ತೆ ಪಿ.ಸಿ. ಶೇಖರ್‌ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಪ್ರಜ್ವಲ್‌. ಮೊದಲ ಬಾರಿಗೆ ಗ್ಯಾಂಗ್‌ಸ್ಟರ್‌ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Vijaya Karnataka 5 Jun 2019, 5:00 am
ನಟ ಪ್ರಜ್ವಲ್‌, ನಿರ್ದೇಶಕ ಪಿ.ಸಿ. ಶೇಖರ್‌ ನಾಲ್ಕು ವರ್ಷಗಳ ನಂತರ ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ. ಮರ್ಡರ್‌ ಮಿಸ್ಟ್ರಿ 'ಅರ್ಜುನ' ಚಿತ್ರದಲ್ಲಿ ಪಿ.ಸಿ. ಶೇಖರ್‌ ನಿರ್ದೇಶನದಲ್ಲಿ ನಟಿಸಿದ್ದ ಪ್ರಜ್ವಲ್‌ ಈಗ ಗ್ಯಾಂಗ್‌ಸ್ಟರ್‌ ಕತೆ ಇರುವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಪ್ರಜ್ವಲ್‌ ಮೊದಲ ಬಾರಿಗೆ ಗ್ಯಾಂಗ್‌ಸ್ಟರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.
Vijaya Karnataka Web prajwal (1)


'ಭೂಗತ ಜಗತ್ತಿನ ಕತೆಯನ್ನು ಸಿನಿಮಾ ಮಾಡುತ್ತಿದ್ದೇವೆ. ಮೊದಲ ಬಾರಿಗೆ ಅವರು ಇಂಥದ್ದೊಂದು ಪಾತ್ರದಲ್ಲಿ ನಟಿಸಲಿರುವುದು ವಿಶೇಷ. ಮೂರು ಶೇಡ್‌ನ ಪಾತ್ರ ಇದು. ಪ್ರಜ್ವಲ್‌ ನಟನಾ ಸಾಮರ್ಥ್ಯ‌ಕ್ಕೆ ತಕ್ಕದ್ದಾಗಿದೆ. ಭೂಗತ ಜಗತ್ತಿನ ಚಿತ್ರ ಅಂದಾಕ್ಷಣ ಲಾಂಗು, ಮಚ್ಚು ಇರುತ್ತೆ ಎಂದುಕೊಳ್ಳುತ್ತಾರೆ. ಆದರೆ, ಈ ಸಿನಿಮಾದಲ್ಲಿ ಅಂಥದ್ದು ಇರುವುದಿಲ್ಲ. ಸೈಲೆಂಟಾಗಿ ನಡೆಯುವ, ಆದರೆ ಅಷ್ಟೇ ಇಂಟೆನ್ಸಿಟಿ ಇರುವ ಚಿತ್ರ ಇದಾಗಿದೆ' ಎನ್ನುತ್ತಾರೆ ನಿರ್ದೇಶಕ ಪಿ.ಸಿ. ಶೇಖರ್‌.

ಹೊಸ ರೀತಿಯ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಪಿ.ಸಿ. ಶೇಖರ್‌ ರಾಗಾ, ದಿ ಟೆರರಿಸ್ಟ್‌ ಸಿನಿಮಾಗಳ ನಂತರ ಮತ್ತೊಂದು ವಿಭಿನ್ನ ಜಾನರ್‌ನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರ ಜುಲೈನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಚಿತ್ರಕ್ಕೆ ಹೆಸರಿನ್ನೂ ಅಂತಿಮಗೊಂಡಿಲ್ಲ. ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆಯೂ ನಡೆದಿದೆ. ಪ್ರಜ್ವಲ್‌ ಈಗ ಇನ್‌ಸ್ಪೆಕ್ಟರ್‌ ವಿಕ್ರಂ, ಜೆಂಟಲ್‌ಮನ್‌, ಅರ್ಜುನ್‌ ಗೌಡ, ರುದ್ರ ಮತ್ತಿತರ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ.

==

ಕೋಟ್‌

ಗ್ಯಾಂಗ್‌ಸ್ಟರ್‌ ಆಗಿ ಪ್ರಜ್ವಲ್‌ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಲವ್‌ ಸ್ಟೋರಿಯೂ ಇರುತ್ತೆ.

-ಪಿ.ಸಿ. ಶೇಖರ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌